ಬೆಲೆ ಕೇವಲ 4.1 ಲಕ್ಷ: ಮಧ್ಯಮ ವರ್ಗದ ಯುವಕರ ಮನಗೆಲ್ಲುತ್ತಿದೆ ಇಟಾಲಿಯನ್‌ ಕಂಪನಿಯ ಈ ಸ್ಪೋರ್ಟ್ಸ್‌ ಬೈಕ್‌!

ಭಾರತದ ಯುವಕರಿಗೆ ಸ್ಪೋರ್ಟ್ಸ್‌ ಬೈಕ್‌ಗಳೆಂದರೆ ಒಂದು ರೀತಿಯ ಹುಚ್ಚು ಪ್ರೀತಿ. ನೋಡಲು ಸ್ಟೈಲಿಶ್‌ ಮತ್ತು ಉತ್ತಮ ಪರ್ಫಾಮೆನ್ಸ್‌ ನೀಡುವ ಬೈಕ್‌ಗಳನ್ನು ಭಾರತದ ಯುವಕರು ಎಂದಿಗೂ ಹೆಚ್ಚು ಇಷ್ಟ ಪಡುತ್ತಲೇ ಇರುತ್ತಾರೆ. ಆದರೆ ಹಲವು ಸ್ಪೋರ್ಟ್ಸ್‌ ಬೈಕ್‌ಗಳು ಬೆಲೆಯಲ್ಲಿ ಅಧಿಕವಾಗಿರುವುದರಿಂದ ಸಮಾನ್ಯ ವರ್ಗದ ಯುವಕರಿಗೆ ಸ್ಪೋರ್ಟ್ಸ್‌ ಬೈಕ್‌ಗಳೆಂದರೆ ಮರೀಚಿಕೆ. ಆದರೆ ಹೀಗೊಮ್ಮೆ ಯೋಚನೆ ಮಾಡಿ ನೋಡಿ, ಕಡಿಮೆ ಬೆಲೆ, ಅದ್ಭುತ ಪರ್ಫಾಮೆನ್ಸ್‌ ಮತ್ತು ಸಖತ್‌ ಸ್ಟೈಲಿಶ್‌ ಬೈಕೊಂಡು ಮಾರುಕಟ್ಟೆಗೆ ಬಂದರೆ ಏನಾಗಬಹುದು ಎಂದು. ಹೌದು ಎಪ್ರಿಲಿಯಾ RS 457 ಆ ಮಾದರಿಯ ಬೈಕ್‌ ಆಗಿದ್ದು ಭವಿಷ್ಯದಲ್ಲಿ ಸಾಕಷ್ಟು ಸದ್ದು ಮಾಡಲು ಕಾರಣಗಳೇನು ಎಂದು ನೋಡೋಣ.

ಇಟಾಲಿಯನ್‌ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಎಪ್ರಿಲಿಯಾ ಕಳೆದ ವರ್ಷವಷ್ಟೇ ಭಾರತದಲ್ಲಿ ಹೊಸ RS 457 ಬೈಕ್‌ ಮಾದರಿಯನ್ನು ಲಾಂಚ್ ಮಾಡಿತ್ತು. ಇತ್ತೀಚೆಗೆ ಈ ಬೈಕ್‌ನ ವಿತರಣೆಯೂ ಆರಂಭವಾಗಿದ್ದು, ಕಂಪನಿ ಈ ಬೈಕ್ ಅನ್ನು ಹೋಮ್‌ ಡೆಲಿವರಿಯಾಗಿಯೂ ನೀಡುತ್ತಿದೆ ಎಂದರೆ ನೀವು ನಂಬಲೇ ಬೇಕು. ಈ ಬೈಕ್‌ನಲ್ಲಿ ಯುವಕರು ಹೆಚ್ಚು ಇಷ್ಟ ಪಡಲಿರುವ ಪ್ರಮುಖ ವಿಷಯಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Aprilia RS 457 Is Winning Indian Youngsters Heart By Its Stunning Performance And Stunning Design

ವಿನ್ಯಾಸ ಮತ್ತು ಫೀಚರ್ಸ್: ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಮಾದರಿಯು ಎಪ್ರಿಲಿಯಾ RSV4 ಬೈಕಿನ ವಿನ್ಯಾಸ ಶೈಲಿಯನ್ನು ಪಡೆದುಕೊಂಡಿದೆ. ಹೊಸ ಎಪ್ರಿಲಿಯಾ RS 457 (Aprilia RS 457) ಹೆಚ್ಚು ಶಕ್ತಿಶಾಲಿ RS 660 ಸ್ಪೋರ್ಟ್ಸ್ ಬೈಕ್‌ನ ಚಿಕ್ಕ ಆವೃತ್ತಿಯಂತೆ ಕಾಣುತ್ತದೆ. ಈ ಬೈಕ್ ಸಿಗ್ನೇಚರ್ ಟ್ರಿಪಲ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್‌ನೊಂದಿಗೆ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್ ವಿಭಾಗಗಳನ್ನು ಇದರ ಮುಂಭಾಗದಲ್ಲಿದೆ.

ಹೊಸ RS 457 ಬೈಕಿನಲ್ಲಿ ಅಲ್ಯೂಮಿನಿಯಂ ಫ್ರೇಮ್‌ನ ಸುತ್ತಲೂ ಡಬಲ್ ಫೇರಿಂಗ್ ಸೆಟಪ್ ಸಹಾಯವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಶಾರ್ಪ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದು, ಒಟ್ಟಾರೆ ಹೊಸ ಎಪ್ರಿಲಿಯಾ RS 457 ನ ತೀಕ್ಷ್ಣವಾದ ಏರೋಡೈನಾಮಿಕ್ ಲುಕ್ ಅನ್ನು ಹೊಂದಿದೆ. ಹೊಸ ಸ್ಪೋರ್ಟ್ಸ್ ಬೈಕ್‌ನ ಬೆಲ್ಲಿ ಪ್ಯಾನ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವ ಅಂಡರ್‌ಬೆಲ್ಲಿ ಸೈಲೆನ್ಸರ್ ಮಾಡುತ್ತದೆ.

Aprilia RS 457 Is Winning Indian Youngsters Heart By Its Stunning Performance And Stunning Design

ಈ ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕಿನಲ್ಲಿ 5 ಇಂಚಿನ ಬಣ್ಣದ TFT ಡಿಸ್ ಪ್ಲೇಯನ್ನು ನೀಡಲಾಗಿದೆ. ಈ ಡಿಸ್ ಪ್ಲೇಯು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಇನ್ನು ಇದು ಎಪ್ರಿಲಿಯಾ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಎಪ್ರಿಲಿಯಾ RS 457 ನ ಡಿಸ್ಪ್ಲೇಯನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ರೈಡಿಂಗ್ ಮೋಡ್, ಗೇರ್‌ ಬದಲಾಯಿಸುವುದು, ಸ್ಪೀಡ್, ಸರ್ವಿಸ್ ಮಾಹಿತಿ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಎಂಜಿನ್: ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಹೊಸ 457cc ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಲಿಕ್ವಿಡ್-ಕೂಲ್ಡ್, ನಾಲ್ಕು-ವಾಲ್ವ್ ಎಂಜಿನ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳು ಮತ್ತು ಫಾರ್ವರ್ಡ್-ಫೇಸಿಂಗ್ ಸಿಲಿಂಡರ್‌ಗಳನ್ನು ಒಳಗೊಂಡಿದೆ. ಈ ಎಪ್ರಿಲಿಯಾ RS 457 ಬೈಕಿನಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ 9,400rpm ನಲ್ಲಿ 46.93bhp ಮತ್ತು 6,700rpm ನಲ್ಲಿ 43.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Aprilia RS 457 Is Winning Indian Youngsters Heart By Its Stunning Performance And Stunning Design

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಆಯ್ಕೆಯ ಕ್ವಿಕ್‌ಶಿಫ್ಟರ್‌ನೊಂದಿಗೆ ನಿರ್ದಿಷ್ಟಪಡಿಸಬಹುದು. ಎಪ್ರಿಲಿಯಾ RS 457 ಅನ್ನು ರೈಡ್-ಬೈ-ವೈರ್ ಸಿಸ್ಟಮ್‌ನೊಂದಿಗೆ ನೀಡಲಾಗಿದ್ದು ಅದು ಮೂರು ರೈಡಿಂಗ್ ಮೋಡ್‌ಗಳಿಗೆ ಅವಕಾಶ ನೀಡುತ್ತದೆ. ಇನ್ನು ಈ ಬೈಕಿನಲ್ಲಿ 4-ವೇ ಟ್ರಾಕ್ಷನ್ ಕಂಟ್ರೋಲ್ ಕೂಡ ಇದೆ.

ಎಪ್ರಿಲಿಯಾ RS 457 ಬೈಕಿನ ಮುಂಭಾಗದಲ್ಲಿ 320mm ಡಿಸ್ಕ್ ಮತ್ತು ಹಿಂಭಾಗದಲ್ಲಿ 220m ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಈ ಡಿಸ್ಕ್‌ಗಳನ್ನು ಬೈಬ್ರೆ ಕ್ಯಾಲಿಪರ್‌ಗಳಿಂದ ಬಿಗಿಗೊಳಿಸಲಾಗುತ್ತದೆ. ಮುಂಭಾಗದಲ್ಲಿ 4-ಪಿಸ್ಟನ್ ರೇಡಿಯಲ್ ಘಟಕಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್‌ಗಳನ್ನು ಹೊಂದಿವೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 12, 2024, 18:00 [IST]
English summary
Aprilia rs 457 is winning indian youngsters hearts by its stunning performance and stunning design
Read more on aprilia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+