ದುಬಾರಿಯಾಗಲಿದೆ ಯುವಕರಿಗೆ ಹುಚ್ಚೆಬ್ಬಿಸಿದ ಈ ಎಪ್ರಿಲಿಯಾ ಬೈಕ್: ಆದರೂ ಹಣಕ್ಕೆ ತಕ್ಕ ಮೌಲ್ಯ!
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 (Aprilia RS 457) ಬೈಕ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಎಪ್ರಿಲಿಯಾ RS 457 ಬೈಕಿನ ಬೆಲೆಯನ್ನು ಏರಿಕೆ ಮಾಡಲು ಮುಂದಾಗಿದೆ. 2025ರ ಏಪ್ರಿಲ್ 1 ರಿಂದ ಎಪ್ರಿಲಿಯಾ RS 457 ಮಿಡ್-ಪರ್ಫಾರ್ಮೆನ್ಸ್ ಸ್ಪೋರ್ಟ್ಸ್ ಬೈಕ್‌ನ ಬೆಲೆಯನ್ನು ರೂ.10,000 ವರೆಗೆ ಹೆಚ್ಚಿಸಲಿದೆ. ಈ ಬೆಲೆ ಏರಿಕೆಯು ಪ್ರಸ್ತುತ ಎಕ್ಸ್ ಶೋರೂಂ ಬೆಲೆಗೆ ಅನ್ವಯಿಸುತ್ತದೆ.
ಹೊಸ ಎಪ್ರಿಲಿಯಾ RS 457 ಬೈಕಿಗೆ ಬೆಲೆ ಏರಿಕೆಯಯಾದ ಬಳಿಕ ರೂ4.20 ಲಕ್ಷವಾಗಿದೆ. ಈ ಬೈಕ್ ಇದು ಹಣಕ್ಕೆ ಅಭೂತಪೂರ್ವ ಮೌಲ್ಯದ ವಾಹನವಾಗಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಟ್ವಿನ್-ಸಿಲಿಂಡರ್ ಸ್ಪೋರ್ಟ್ಸ್‌ಬೈಕ್ ಅನ್ನು ಭಾರತದಲ್ಲಿ ತಯಾರಿಸುವ ಮೂಲಕ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ಎಪ್ರಿಲಿಯಾ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಬುಕಿಂಗ್‌ಗಳನ್ನು ಗಳಿಸಿಕೊಂಡಿದೆ.

ಎಪ್ರಿಲಿಯಾ RS 457 ಅನ್ನು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಸಲು ಎಪ್ರಿಲಿಯಾ ತನ್ನ ಬಾರಾಮತಿ ಸೌಲಭ್ಯವನ್ನು ಬಳಸುತ್ತಿದೆ. ಈ ಕಾರಣದಿಂದಾಗಿ RS 457 ನ ಕಾಯುವ ಅವಧಿಯು ಎರಡು ತಿಂಗಳವರೆಗೆ ವಿಸ್ತರಿಸಿದೆ. ಎಪ್ರಿಲಿಯಾ ಇಂಡಿಯಾ ತನ್ನ ಉತ್ಪಾದನಾ ಸಾಲಿನಲ್ಲಿ ಮೂರು ಶಿಫ್ಟ್‌ಗಳನ್ನು ನಡೆಸುವ ಮೂಲಕ ಬೇಡಿಕೆಯನ್ನು ಹೊಂದಿಸಲು ಪ್ರಯತ್ನಿಸುತ್ತಿದೆ ಮತ್ತು ಒಂದು ದಿನದಲ್ಲಿ ಸುಮಾರು ಐವತ್ತು RS 457 ಗಳನ್ನು ಉತ್ಪಾದಿಸುತ್ತದೆ.
ಎಪ್ರಿಲಿಯಾ RS 457 ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, ಇದರ ರೈಡ್-ಬೈ-ವೈರ್ ಸಿಸ್ಟಮ್ ಅನ್ನು ಹೊಂದಿದೆ. ಆದರೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸವಾರರು ಬದಲಾಯಿಸಬಹುದಾದ ಮೂರು ಮೋಡ್‌ಗಳನ್ನು ಸಹ ನೀಡುತ್ತದೆ. ಇನ್ನು ಎಪ್ರಿಲಿಯಾದಿಂದ ಹೊಸ RS 457 ಫುಲ್ LED ಲೈಟಿಂಗ್ ಸಿಸ್ಟಮ್ ಜೊತೆಗೆ ಆಯ್ಕೆಯ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 5-ಇಂಚಿನ TFT ಡಿಸ್ ಪ್ಲೇಯನ್ನು ಹೊಂದಿದೆ.

ಈ ಹೊಸ ಎಪ್ರಿಲಿಯಾ RS 457 ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ಲೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಎಪ್ರಿಲಿಯಾ RS 457 ಬೈಕಿನಲ್ಲಿ 457cc, ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ DOHC ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ನೀಡಿದೆ.
ಈ ಎಂಜಿನ್ 9,400 rpm ನಲ್ಲಿ 46 bhp ಪವರ್ ಮತ್ತು 6,700 rpm ನಲ್ಲಿ 43.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಪ್ರಿಲಿಯಾ RS 457 ಬೈಕ್ ಟ್ವಿನ್-ಸ್ಪಾರ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಮುಂಭಾಗದಲ್ಲಿ 41mm ಇನ್ವರ್ಟಡ್ ಸಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ.

ಎಪ್ರಿಲಿಯಾ ಭಾರತದಲ್ಲಿ ಎಪ್ರಿಲಿಯಾ RS457 ಬೈಕ್‍ಗಾಗಿ ಅಕ್ಸೆಸರೀಸ್ ಘೋಷಿಸಿದೆ. ಲಭ್ಯವಿರುವ ಎಲ್ಲಾ ಆಯ್ಕೆಗಳ ವಿವರವಾದ ಬೆಲೆ ಪಟ್ಟಿ ಅಂತಿಮವಾಗಿ ಹೊರಬಂದಿದೆ. ಅತ್ಯಂತ ಕೈಗೆಟಕುವ ಬೆಲೆಯ ರೂ. 899 ರಿಂದ ರೂ. 29,925 ವರೆಗೆ ಅಕ್ಸೆಸರೀಸ್ ಬೆಲೆಯನ್ನು ಹೊಂದಿದೆ. ಎತ್ತರದ ವಿಂಡ್‌ಸ್ಕ್ರೀನ್ ಬೆಲೆ ಕೇವಲ ರೂ. 899 ಮತ್ತು ನೀವು RS457 ಜೊತೆಗೆ ದೂರದ ಪ್ರವಾಸಕ್ಕೆ ಹೋಗಲು ನಿರ್ಧರಿಸಿದರೆ ವಿಂಡ್‌ಬ್ಲಾಸ್ಟ್ ಅನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.
ಇನ್ನು USB ಚಾರ್ಜರ್ ಬೆಲೆ ರೂ. 949 ಮೋಟಾರ್‌ಸೈಕಲ್‌ಗೆ ಉಪಯುಕ್ತವಾದ ಸೇರ್ಪಡೆಯಾಗಬಹುದು ಮತ್ತು ಅದರ ಸ್ಮಾರ್ಟ್‌ಫೋನ್ ಯುಗದಲ್ಲಿ ಇದ್ ಅನಿವಾರ್ಯವಾಗುತ್ತದೆ. ನೀವು ಏಕಾಂಗಿಯಾಗಿ ಸವಾರಿ ಮಾಡಲು ಯೋಜಿಸುತ್ತಿದ್ದರೆ, ಪ್ಯಾಸೆಂಜರ್ ಸೀಟ್ ಕೌಲ್ ರೂ. 1,499 ಬೈಕ್‌ನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸಬಹುದು. ಹೆಲ್ಮೆಟ್ ಲಾಕ್ ರೂ. 1,899 ಸಾಕಷ್ಟು ಕೈಗೆಟುಕುವಂತಿದೆ ಮತ್ತು ನಿಮ್ಮ ಬಳಕೆಯ ಸಂದರ್ಭವನ್ನು ಅವಲಂಬಿಸಿ ಪರಿಗಣಿಸಬಹುದು.


Click it and Unblock the Notifications








