ಹೊಸ ಫ್ಯಾಮಿಲಿ ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ... ಒಂದೇ ದಿನ 501 ವಾಹನಗಳ ವಿತರಣೆ
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 'ಮೀಟ್ ರಿಜ್ಟಾ' ಕಾರ್ಯಕ್ರಮದಲ್ಲಿ ಎಥರ್ ಎನರ್ಜಿ ಸೋಮವಾರ 501 ಎಥೆರ್ ರಿಜ್ಟಾ ಫ್ಯಾಮಿಲಿ ಸ್ಕೂಟರ್‌ಗಳನ್ನು ವಿತರಿಸಿದೆ. ಇದು ಕಂಪನಿಯ ಇತಿಹಾಸದಲ್ಲಿ ಒಂದು ದಿನದಲ್ಲಿ ನೀಡಲಾದ ಅತಿದೊಡ್ಡ ಡೆಲಿವರಿ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಎಥೆರ್‌ನ ಅನುಭವ ವಲಯಗಳನ್ನು (Ather's experience zones) ಅನ್ವೇಷಿಸಲು ಅವಕಾಶ ನೀಡಲಾಗಿತ್ತು. ಇದು ಬ್ರ್ಯಾಂಡ್‌ನ ಸುಧಾರಿತ ತಂತ್ರಜ್ಞಾನ ಮತ್ತು ವಿನ್ಯಾಸ ತತ್ವಶಾಸ್ತ್ರದ ಆಳವಾದ ಅನುಭವ ಮತ್ತು ಆಳವಾದ ತಿಳುವಳಿಕೆಯನ್ನು ನೀಡಿದೆ ಎಂದು ಭಾಗವಹಿಸಿದ ಗ್ರಾಹಕರು ಹೇಳಿದರು.
ಆರಾಮ, ಅನುಕೂಲತೆಯನ್ನು ಕೇಂದ್ರೀಕರಿಸಿ ಕುಟುಂಬಗಳಿಗಾಗಿ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಆರಾಮದಾಯಕ ಸೀಟ್, 34 - ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಮತ್ತು ಮುಂಭಾಗದಲ್ಲಿ 22 - ಲೀಟರ್ ಫ್ರಂಕ್ ಅಕ್ಸೆಸೊರಿ ಸೇರಿದಂತೆ ಒಟ್ಟು 56 ಲೀಟರ್ ಶೇಖರಣಾ ಸ್ಥಳವನ್ನು ಹೊಂದಿದೆ.

ಸ್ಕೂಟರ್ ಸಾಕಷ್ಟು ಲೆಗ್ ಸ್ಪೇಸ್, ವಿಶಾಲವಾದ ಫ್ಲೋರ್ ಬೋರ್ಡ್ ಅನ್ನು ಹೊಂದಿದೆ. ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸ್ಕಿಡ್ ಕಂಟ್ರೋಲ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಆಂಟಿ ಥೆಫ್ಟ್ ಮತ್ತು ಟೋ ಡಿಟೆಕ್ಟ್ ಮತ್ತು ಪಿಂಗ್ ಮೈ ಸ್ಕೂಟರ್ ಸೇರಿವೆ. ಈ ವೈಶಿಷ್ಟ್ಯಗಳು ಸಾಮಾನ್ಯ ಪೆಟ್ರೋಲ್ ಚಾಲಿತ ಸ್ಕೂಟರ್‌ಗಳಿಗಿಂತ ಒಂದು ಪಟ್ಟು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತವೆ.
ಎಥರ್ ಈ ಸ್ಕೂಟರ್‌ನಲ್ಲಿ ಇಕೊ ಮತ್ತು ಝಿಪ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಈ ಸ್ಕೂಟರ್‌ನ ಸಂಪೂರ್ಣ ಶಕ್ತಿ ಮತ್ತು ಥ್ರಿಲ್ಲಿಂಗ್ ಅನುಭವಕ್ಕಾಗಿ ನೀವು ಝಿಪ್ ಮೋಡ್ ಅನ್ನು ಅವಲಂಬಿಸಬೇಕಾಗುತ್ತದೆ. ಇಕೋ ಮೋಡ್‌ನಲ್ಲಿ ನೀವು ಸ್ಕೂಟರ್ ಅನ್ನು ರೈಡ್ ಮಾಡಿದರೆ ಈ ಸ್ಕೂಟರ್‌ನ ಸಂಪೂರ್ಣ ರೇಂಜ್ ಅನ್ನು ಪಡೆಯಬಹುದಾಗಿದೆ. ನಗರ ಪ್ರದೇಶದಲ್ಲಿ ದಿನಂಪ್ರತಿ ಬಳಕೆಗೆ ಇದು ಹೇಳಿ ಮಾಡಿಸಿದ ಸ್ಕೂಟರ್ ಆಗಿದೆ.

ಹೊಸ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ ಎಸ್, ರಿಜ್ಟಾ ಝಡ್ ಮತ್ತು ರಿಜ್ಟಾ ಝಡ್ (ಲಾಂಗ್ ರೇಂಜ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. 2.9 ಕಿಲೋವ್ಯಾಟ್‌ನ ಎಸ್ ಮಾದರಿ ರೂ.1,10,156 (ಎಕ್ಸ್ ಶೋರೂಂ ಪುಣೆ) ಬೆಲೆಯಿದೆ. 2.9 ಕಿಲೋವ್ಯಾಟ್ ಝಡ್ ಮಾದರಿಯು ರೂ.1,25,156 (ಎಕ್ಸ್ ಶೋರೂಂ)ಗಳಾದರೆ, ಟಾಪ್ ಎಂಡ್ 3.7 ಕಿಲೋವ್ಯಾಟ್ ಝಡ್ ಮಾದರಿಯ ಬೆಲೆಯು ರೂ.1,45,157 (ಎಕ್ಸ್ ಶೋರೂಂ)ಗಳಾಗಿದೆ.
ಇದರ ಎಸ್ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ 159 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು ಶೇ80 ರಷ್ಟು ಚಾರ್ಜ್ ಆಗಲು ಕೇವಲ 4 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಎಥರ್ ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ಎರಡು ಘಟಕಗಳನ್ನು ಒಳಗೊಂಡಿದ್ದು, ಇಲ್ಲಿ ವಾಹನ ಜೋಡಣೆ ಮತ್ತು ಬ್ಯಾಟರಿ ಉತ್ಪಾದನೆ ಮಾಡುತ್ತದೆ. ಮೂರನೇ ಸೌಲಭ್ಯವು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಬಿಡ್ಕಿನ್‌ನ ಎಯುಆರ್ಐಸಿಯಲ್ಲಿ ನಿರ್ಮಾಣ ಹಂತದಲ್ಲಿದೆ. ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಹೊಸ ಉತ್ಪಾದನಾ ಘಟನಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications