ದೇಶದ ನಂ.1 ಬೈಕ್ ಯಾವುದು ಗೊತ್ತಾ? ಮಾರಾಟದಲ್ಲಿ ಟಾಪ್-10 ದ್ವಿಚಕ್ರ ವಾಹನಗಳಿವು!

ಭಾರತದಲ್ಲಿ ದ್ವಿಚಕ್ರ ವಾಹನಗಳ ಖರೀದಿ ಹೆಚ್ಚುತ್ತಲೇ ಇದೆ. ಅದರಲ್ಲೂ ಹೀರೋ ಸ್ಪ್ಲೆಂಡರ್ ಬಗ್ಗೆ ಹೇಳಲೇಬೇಕು, ಪ್ರತಿ ತಿಂಗಳು ದಾಖಲೆಯ ಮಟ್ಟದಲ್ಲಿ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ಗಳು ಮಾರಾಟವಾಗುತ್ತವೆ. ಕಳೆದ ಆಗಸ್ಟ್ 2024ರ ಮಾರಾಟದ ಬಗ್ಗೆ ಹೇಳುವುದಾದರೆ ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ಅಗ್ರಸ್ಥಾನವನ್ನು ಸಾಧಿಸಿದೆ. ಕಳೆದ ತಿಂಗಳು ಒಟ್ಟು 3,02,234 ಹೀರೋ ಸ್ಪ್ಲೆಂಡರ್ ಬೈಕುಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ಹೀರೋ ಸ್ಪ್ಲೆಂಡರ್ ಮಾರಾಟದಲ್ಲಿ ಶೇಕಡಾ 4.49 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ (ಆಗಸ್ಟ್ 2023) ಒಟ್ಟು 2,89,930 ಹೀರೋ ಸ್ಪ್ಲೆಂಡರ್ ಬೈಕ್‌ಗಳು ಮಾರಾಟವಾಗಿದ್ದವು.

ದೇಶದಲ್ಲಿ ಈ ಮಟ್ಟದ ಮಾರಾಟವನ್ನು ಕಾಣುವ ಏಕೈಕ ದ್ವಿಚಕ್ರ ವಾಹನ ಸ್ಪ್ಲೆಂಡರ್ ಆಗಿದೆ. ಇದಾದ ಬಳಿಕ ಹೋಂಡಾ, ಬಜಾಜ್, ಸುಜುಕಿ ಕಂಪನಿಗಳು ಇದ್ದು, ತಮ್ಮ ಸ್ಕೂಟರ್ ಹಾಗೂ ಬೈಕ್ ಮಾರಾಟದಲ್ಲಿ ದೇಶದಲ್ಲಿ ಉತ್ತಮ ಲಾಭ ಗಳಿಸುತ್ತಿವೆ. ಹಾಗಾದ್ರೆ ಕಳೆದ ಆಗಸ್ಟ್ ತಿಂಗಳಲ್ಲಿ ಸ್ಪ್ಲೆಂಡರ್ ಬಳಿಕ ಹೆಚ್ಚು ಮಾರಾಟವಾಗಿರುವ ದ್ವಿಚಕ್ರವಾಹನಗಳನ್ನು ಇಲ್ಲಿ ನೋಡೋಣ.

august-2024-top-10-two-wheeler-sales-report

ಹೋಂಡಾ ಆಕ್ಟಿವಾ ಮಾರಾಟದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ ಕಳೆದ ತಿಂಗಳು ಒಟ್ಟು 2,27,458 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 5.86 ರಷ್ಟು ಬೆಳವಣಿಗೆಯಾಗಿದೆ. ಹೋಂಡಾ ಶೈನ್ ಮೂರನೇ ಸ್ಥಾನದಲ್ಲಿದ್ದು, ಒಟ್ಟು 1,49,697 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 31.15 ರಷ್ಟು ಬೆಳವಣಿಗೆಯಾಗಿದೆ.

ಬಜಾಜ್ ಪಲ್ಸರ್ ನಾಲ್ಕನೇ ಸ್ಥಾನದಲ್ಲಿದ್ದು, ಬಜಾಜ್ ಪಲ್ಸರ್ ಕಳೆದ ತಿಂಗಳು ಒಟ್ಟು 1,16,250 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 28.19 ರಷ್ಟು ಬೆಳವಣಿಗೆಯಾಗಿದೆ. ಟಿವಿಎಸ್ ಜೂಪಿಟರ್ ಐದನೇ ಸ್ಥಾನದಲ್ಲಿದ್ದು, ಕಳೆದ ತಿಂಗಳು ಒಟ್ಟು 89,327 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ ಶೇ 27.49 ರಷ್ಟು ಬೆಳವಣಿಗೆಯಾಗಿದೆ.

august-2024-top-10-two-wheeler-sales-report

ಹೀರೋ ಎಚ್ಎಫ್ ಡೀಲಕ್ಸ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಹೀರೋ ಹೆಚ್‌ಎಫ್ ಡೀಲಕ್ಸ್ ಕಳೆದ ತಿಂಗಳು ಒಟ್ಟು 84,660 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ವಾರ್ಷಿಕ ಶೇಕಡಾ 15.89 ರಷ್ಟು ಬೆಳವಣಿಗೆಯಾಗಿದೆ. ಸುಜುಕಿ ಆಕ್ಸೆಸ್ ಮಾರಾಟದ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಸುಜುಕಿ ಆಕ್ಸೆಸ್ ಕಳೆದ ತಿಂಗಳು ಒಟ್ಟು 62,433 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ವಾರ್ಷಿಕ ಶೇ16.37 ರಷ್ಟು ಬೆಳವಣಿಗೆಯಾಗಿದೆ. ಟಿವಿಎಸ್ ಎಕ್ಸ್ಎಲ್ ಈ ಮಾರಾಟದ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಟಿವಿಎಸ್ ಎಕ್ಸ್ಎಲ್ ಕಳೆದ ತಿಂಗಳು ಒಟ್ಟು 44,546 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ವಾರ್ಷಿಕ ಶೇಕಡಾ 22.06 ರಷ್ಟು ಬೆಳವಣಿಗೆಯಾಗಿದೆ.

august-2024-top-10-two-wheeler-sales-report

ಬಜಾಜ್ ಪ್ಲಾಟಿನಾ ಮಾರಾಟದ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಬಜಾಜ್ ಪ್ಲಾಟಿನಾ ಕಳೆದ ತಿಂಗಳು ಒಟ್ಟು 41,915 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 3 ರಷ್ಟು ಬೆಳವಣಿಗೆಯಾಗಿದೆ. ಹೋಂಡಾ ಡಿಯೋ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಹೋಂಡಾ ಡಿಯೋ ಒಟ್ಟು 34,705 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇ19.83 ರಷ್ಟು ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, September 24, 2024, 15:14 [IST]
English summary
August 2024 top 10 two wheeler sales report
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+