ಮೊಬೈಲ್‌ನಂತೆ ಫ್ಲಿಪ್‌ಕಾರ್ಟ್‌ನಲ್ಲಿ ಬೈಕ್ ಬುಕ್ ಮಾಡಿ: ಜನಪ್ರಿಯ ಬ್ರಾಂಡ್‌ನ ಅಚ್ಚರಿ ನಿರ್ಧಾರ!

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಸಂಪೂರ್ಣ ಮೋಟಾರ್‌ಸೈಕಲ್ ಶ್ರೇಣಿಯ ಲಭ್ಯತೆಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟಿಸಿದೆ. ಬಜಾಜ್ ಕಂಪನಿಯು 100cc ನಿಂದ 400cc ವರೆಗಿನ ಮೋಟಾರ್ ಸೈಕಲ್‌ಗಳಾದ ಪಲ್ಸರ್, ಡೊಮಿನಾರ್, ಅವೆಂಜರ್, ಪ್ಲಾಟಿನಾ ಮತ್ತು CT ಯಂತಹ ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಿದೆ. ಇವುಗಳ ಲಭ್ಯತೆಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪರಿಶೀಲಿಸಿ ಬುಕ್ ಮಾಡಿಕೊಳ್ಳಬಹುದು. ಮೊದಲು 25 ನಗರಗಳಲ್ಲಿ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್ ಮೋಟಾರ್‌ಸೈಕಲ್‌ಗಳನ್ನು ಬುಕ್ ಮಾಡಬಹುದು. ನಂತರ ಈ ಸೇವೆಯನ್ನು ಇತರ ನಗರಗಳಿಗೆ ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌ನೊಂದಿಗಿನ ಸಹಯೋಗವು ಬ್ರ್ಯಾಂಡ್‌ನ ಓಮ್ನಿ-ಚಾನೆಲ್ ಅನುಭವದತ್ತ ಒಂದು ಹೆಜ್ಜೆಯಾಗಿದೆ. ಇದು ಖರೀದಿಯ ಅನುಭವವನ್ನು ಸರಳ ಮತ್ತು ತ್ವರಿತಗೊಳಿಸುತ್ತದೆ. ಗ್ರಾಹಕರು ಸೀಮಿತ ಅವಧಿಗೆ ಮಾತ್ರ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ರೂ. 5,000 ಇನ್‌ಸ್ಟಂಟ್ ಆಫ್, 12 ತಿಂಗಳ ನೋ ಕಾಸ್ಟ್ ಇಎಂಐ ಮತ್ತು ಕಾರ್ಡ್ ಆಫರ್‌ಗಳ ವಿಶೇಷ ಲಾಂಚ್ ಆಫರ್‌ಗಳ ಪ್ರಯೋಜನವನ್ನು ಪಡೆಯಬಹುದು.

bajaj-auto-announces-the-availability-of-its-motorcycle-range-on-flipkart

ಫ್ಲಿಪ್‌ಕಾರ್ಟ್‌ನಲ್ಲಿ ರೂ. 69,000 ದಿಂದ ರೂ. 2.31 ಲಕ್ಷಗಳವರೆಗಿನ (ಎಕ್ಸ್ ಶೋ ರೂಂ ದೆಹಲಿ) ಬೆಲೆಯ 100cc - 400cc ನಡುವಿನ ಬಜಾಜ್ ಮೋಟಾರ್ ಸೈಕಲ್‌ಗಳನ್ನು ಬುಕ್ ಮಾಡಬಹುದು. ಬಜಾಜ್ ಗ್ರಾಹಕರು ತಮ್ಮ ಮನೆ / ಕಛೇರಿಯ ಸೌಕರ್ಯದಿಂದ ಬೈಕ್ ಬುಕ್ ಮಾಡಲು ಅನುಕೂಲವಾಗುವಂತೆ ತ್ವರಿತ ಖರೀದಿ ಅನುಭವವನ್ನು ಒದಗಿಸುತ್ತದೆ.

ಬಜಾಜ್ ಆಟೋ ಲಿಮಿಟೆಡ್‌ನ ಮೋಟಾರ್‌ಸೈಕಲ್ ಬಿಸಿನೆಸ್ ಅಧ್ಯಕ್ಷ ಸಾರಂಗ್ ಕಾನಡೆ ಮಾತನಾಡಿ, "ಫ್ಲಿಪ್‌ಕಾರ್ಟ್‌ನೊಂದಿಗೆ ನಮ್ಮ ಸಹಯೋಗವನ್ನು ಘೋಷಿಸಲು ಖುಷಿಪಡುತ್ತೇವೆ, ಗ್ರಾಹಕರು ಬಜಾಜ್ ಮೋಟಾರ್‌ಸೈಕಲ್‌ಗಳನ್ನು ಹೀಗೂ ಖರೀದಿಸಬಹುದೇ ಎಂಬ ಅಚ್ಚರಿಯ ಆಯ್ಕೆಯನ್ನು ನೀಡುತ್ತಿದ್ದೇವೆ. ಈ ಉಪಕ್ರಮವು ನಾವೀನ್ಯತೆ ಮತ್ತು ನಾವೀನ್ಯತೆಗಾಗಿ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

bajaj-auto-announces-the-availability-of-its-motorcycle-range-on-flipkart

ಗ್ರಾಹಕರ ಅನುಕೂಲಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ನಮ್ಮ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳನ್ನು ಲಭ್ಯವಾಗುವಂತೆ ಮಾಡುವ ಮೂಲಕ, ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ. ಹಾಗೆಯೇ ನಮ್ಮ ಗ್ರಾಹಕರಿಗೆ ತ್ವರಿತ ಖರೀದಿಯ ಅನುಭವವನ್ನು ಒದಗಿಸುತ್ತಿದ್ದೇವೆ, ಇದು ನಮ್ಮ ಓಮ್ನಿ-ಚಾನೆಲ್ ಕಾರ್ಯತಂತ್ರದತ್ತ ಮಹತ್ವದ ಹೆಜ್ಜೆಯಾಗಿದೆ. ಈಗ ಗ್ರಾಹಕರು ನಮ್ಮ ಉತ್ಪನ್ನಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ಖರೀದಿಸಬಹುದು.

ಫ್ಲಿಪ್‌ಕಾರ್ಟ್‌ನ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಜಗಜೀತ್ ಹರೋಡ್ ಮಾತನಾಡಿ, "ನಮ್ಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗೆ ತಮ್ಮ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳನ್ನು ತರುವ ಮೂಲಕ ಬಜಾಜ್ ಆಟೋ ಜೊತೆ ಸಹಯೋಗಿನ ಒಪ್ಪಂದಕ್ಕೆ ಸಂತೋಷಪಡುತ್ತೇವೆ. ಫ್ಲಿಪ್‌ಕಾರ್ಟ್‌ನಲ್ಲಿ ಬಜಾಜ್ ಮೋಟಾರ್‌ಸೈಕಲ್‌ಗಳನ್ನು ನೀಡುವ ಮೂಲಕ ನಾವು ನಮ್ಮ ಆಟೋಮೋಟಿವ್ ವರ್ಗವನ್ನೂ ವಿಸ್ತರಿಸುತ್ತಿದ್ದೇವೆ ಎಂದರು.

bajaj-auto-announces-the-availability-of-its-motorcycle-range-on-flipkart

ಭಾರತದಾದ್ಯಂತ ಗ್ರಾಹಕರು ತಮ್ಮ ಮನೆಯಿಂದಲೇ ಆದ್ಯತೆಯ ಬೈಕ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ಆನ್‌ಲೈನ್‌ ನಲ್ಲಿ ಮೋಟರ್ ಸೈಕಲ್‌ಗಳನ್ನು ಬುಕ್ ಮಾಡಲು ಗ್ರಾಹಕರಿಂದ ವ್ಯಕ್ತವಾಗುವ ಉತ್ತೇಜಕ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇವೆ. ಈ ಉಪಕ್ರಮವು ಗ್ರಾಹಕರ ಖರೀದಿ ವಿಧಾನವನ್ನು ಸುಲಭಗೊಳಿಸುವಲ್ಲಿ ಉತ್ತಮ ಮೈಲಿಗಲ್ಲಾಗಲಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 20, 2024, 4:00 [IST]
English summary
Bajaj auto announces the availability of its motorcycle range on flipkart
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+