Bajaj: ಚೇತಕ್ ಇವಿ ಸ್ಕೂಟರ್‌ನಲ್ಲಿ ಹೊಗೆ: ಸರಿಯಾಗಿ ಉತ್ತರ ಕೊಟ್ಟ ಬಜಾಜ್ ಕಂಪನಿ!

ಔರಂಗಾಬಾದ್‌ನ ಛತ್ರಪತಿ ಸಂಭಾಜಿ ನಗರದಲ್ಲಿ ಚೇತಕ್ ಎಲೆಕ್ಟ್ರಿಕ್ (Chetak Electric) ಸ್ಕೂಟರ್‌ವೊಂದು ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಇಲ್ಲಿನ ಜಲ್ನಾ ಎಂಬ ರಸ್ತೆಯಲ್ಲಿ ಘಟನೆ ನಡೆದಿದ್ದು, ಭಗವಾನ್ ಚವಾಣ್ ಮತ್ತು ರವೀಂದ್ರ ಚವಾಣ್ ಎಂಬ ಇಬ್ಬರು ರೈತರು ಜನನಿಬಿಡ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿದ್ದಾಗ ತಮ್ಮ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡಿದ್ದು, ಸಮಯಕ್ಕೆ ಸ್ಥಳೀಯ ಅಗ್ನಿಶಾಮಕ ದಳವು ನೀರನ್ನು ಸಿಂಪಡಿಸುವ ಮೂಲಕ ಹೊಗೆಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಜಾಜ್ ಆಟೋ ಪ್ರತಿಕ್ರಿಯೆ: ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಳಗೊಂಡ ಈ ಅಗ್ನಿ ಅವಘಡ ಘಟನೆಯು ಡಿಸೆಂಬರ್ 5 ರ ಮಧ್ಯಾಹ್ನ ಛತ್ರಪತಿ ಸಂಭಾಜಿ ನಗರದಲ್ಲಿ (ಔರಂಗಾಬಾದ್) ವರದಿಯಾಗಿದೆ. ಇದನ್ನು ನಮ್ಮ ಗಮನಕ್ಕೆ ತಂದ ತಕ್ಷಣ, ಡೀಲರ್ ಪಾಲುದಾರರು ವಾಹನವನ್ನು ಸಂಪೂರ್ಣ ತನಿಖೆಗಾಗಿ ಸೇವಾ ಕೇಂದ್ರಕ್ಕೆ ಸ್ಥಳಾಂತರಿಸುವ ಮೂಲಕ ತ್ವರಿತ ಕ್ರಮ ಕೈಗೊಂಡರು. ಘಟನೆಯಿಂದ ಯಾವುದೇ ವ್ಯಕ್ತಿಗಳಿಗೆ ಹಾನಿಯಾಗಿಲ್ಲ.

bajaj-auto-responded-chetak-electric-scooter-fire-incident-details

ಪ್ರಾಥಮಿಕ ತನಿಖೆಗಳಲ್ಲಿ ಯಾವುದೇ ಬೆಂಕಿ ಅಥವಾ ಥರ್ಮಲ್ ರನ್‌ಅವೇ ಇಲ್ಲದಿದ್ದರೂ, ಘಟನೆಯಲ್ಲಿ ಪ್ಲಾಸ್ಟಿಕ್ ಘಟಕದಿಂದ ಹೊಗೆ ಹೊರಸೂಸುವಿಕೆ ಸೀಮಿತವಾಗಿತ್ತು. ಇಷ್ಟು ನಡೆದರೂ ಬ್ಯಾಟರಿ ಮತ್ತು ಮೋಟಾರ್ ಹಾಗೇ ಉಳಿದಿದೆ. ಬ್ಯಾಟರಿ ಪ್ಯಾಕ್‌ನಲ್ಲಿ ಬಳಸಲಾದ ವಸ್ತುಗಳು ಅಂತಹ ಸ್ಥಿತಿಯಲ್ಲಿಯೂ ವಾಹನದ ಸುರಕ್ಷತೆಯನ್ನು ಖಾತ್ರಿಪಡಿಸಿವೆ.

ತಯಾರಕರಾಗಿ, ಬಜಾಜ್ ಆಟೋ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರ್ವಹಿಸಲು ಬದ್ಧವಾಗಿದೆ. ಈ ಪ್ರತ್ಯೇಕ ಘಟನೆಯ ಮೂಲ ಕಾರಣವನ್ನು ನಿರ್ಧರಿಸಲು ನಾವು ಸಮಗ್ರ ತನಿಖೆಯನ್ನು ನಡೆಸುತ್ತಿದ್ದೇವೆ, ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಸಂಪೂರ್ಣವಾಗಿ ಬದ್ಧರಾಗಿದ್ದೇವೆ.

bajaj-auto-responded-chetak-electric-scooter-fire-incident-details

ನಮ್ಮ ಗ್ರಾಹಕರು ತಮ್ಮ ಚೇತಕ್‌ಗಳಿಗೆ ಸುರಕ್ಷತೆ ಮತ್ತು ಗುಣಮಟ್ಟದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಮ್ಮ ಅಧಿಕೃತ ಸೇವಾ ನೆಟ್‌ವರ್ಕ್ ಅನ್ನು ಪ್ರತ್ಯೇಕವಾಗಿ ಬಳಸಬೇಕೆಂದು ನಾವು ಒತ್ತಾಯಿಸುತ್ತೇವೆ. ಬಜಾಜ್ ಆಟೋದಲ್ಲಿ ಗ್ರಾಹಕರು ಮತ್ತು ಮಧ್ಯಸ್ಥಗಾರರ ಸುರಕ್ಷತೆಯು ಯಾವಾಗಲೂ ಅತ್ಯಂತ ಹೆಚ್ಚಿನ ಆದ್ಯತೆಯಾಗಿದೆ ಎಂದು ಬಜಾಜ್ ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದೆ.

ಬಜಾಜ್ ಆಟೋ ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಮುಂಚೂಣಿಯಲ್ಲಿದ್ದು, ಭಾರತೀಯ ರಸ್ತೆಗಳಲ್ಲಿ 3,00,000 ಚೇತಕ್ ಸ್ಕೂಟರ್‌ಗಳು ಸದ್ಯ ಓಡಾಡುತ್ತಿವೆ. ನಮ್ಮ ವ್ಯಾಪಕ ನೆಟ್‌ವರ್ಕ್‌ನಲ್ಲಿ‌ 3,800 ಕ್ಕೂ ಹೆಚ್ಚು ಸೇವಾ ಕೇಂದ್ರಗಳು ಮತ್ತು ಆನ್ - ರೋಡ್ ಸೇವಾ ಕೇಂದ್ರಗಳನ್ನು ಒಳಗೊಂಡಿದೆ, ಇದು ಗ್ರಾಹಕರ ತೃಪ್ತಿ ಮತ್ತು ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಬಜಾಜ್ ಪ್ರತಿಕ್ರಿಯಿಸಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹೊಗೆಯ ನಿಖರ ಕಾರಣ ಇನ್ನೂ ತನಿಖೆಯಲ್ಲಿದ್ದರೂ, ತಂತ್ರಜ್ಞಾನದ ಪ್ರಗತಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಹೇಳಬಹುದು. ಈ ಹಿಂದೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಂಕಿ ಅವಘಡಗಳು ಹೆಚ್ಚಾಗಿ ಕಂಡುಬರುತ್ತಿದ್ದವು, ಆದರೆ ಈಗ ಬಹುತೇಕ ಕಡಿಮೆಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 10, 2024, 17:35 [IST]
English summary
Bajaj auto responded chetak electric scooter fire incident details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+