Bajaj Chetak Blue 3202 vs TVS iQube: ಸ್ವದೇಶಿ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು.. ನಿಮಗೆ ಯಾವುದು ಇಷ್ಟವಾಯಿತು!

ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಣೆಗೊಳ್ಳುತ್ತಿದೆ. ಇಲ್ಲಿಯೂ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಬಜಾಜ್ ಆಟೋ (Bajaj Auto) ಹಾಗೂ ಟಿವಿಎಸ್ ಮೋಟಾರ್ (TVS Motor) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಬಜಾಜ್ ಎರಡನೇ ಸ್ಥಾನದಲ್ಲಿ ಇದ್ದರೆ, ಟಿವಿಎಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗೆ ಬಜಾಜ್‌ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ 'ಬ್ಲೂ 3202' ರೂಪಾಂತರ (ವೇರಿಯೆಂಟ್) ಬಿಡುಗಡೆಯಾಗಿತ್ತು. ಇದು ಟಿವಿಎಸ್ ಐಕ್ಯೂಬ್‌ನ 3.4 ಕೆಡಬ್ಲ್ಯೂಹೆಚ್ ರೂಪಾಂತರಕ್ಕೆ ನೇರ ಪ್ರತಿಸ್ಪರ್ಧಿಯಾಗಿದೆ. ಬನ್ನಿ.. ಇವೆರೆಡು ಎಲೆಕ್ಟ್ರಿಕ್ ಸ್ಕೂಟರ್‌ಗಳ ನಡುವಿನ ವ್ಯತ್ಯಾಸವನ್ನು ಹೋಲಿಕೆ ಮಾಡಿದ್ದೇವೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಬಜಾಜ್ ಚೇತಕ್ ಬ್ಲೂ 3202 - ಟಿವಿಎಸ್ ಐಕ್ಯೂಬ್ ಬೆಲೆ: ಹೊಚ್ಚ ಹೊಸ ಬಜಾಜ್ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್ ರೂ.1.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಟಿವಿಎಸ್ ಐಕ್ಯೂಬ್ ರೂ.1.36 ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. ಐಕ್ಯೂಬ್‌ಗೆ ಹೋಲಿಕೆ ಮಾಡಿದರೆ, ಚೇತಕ್ ಬ್ಲೂ 3202 ದರ ರೂ.21,000 ಅಗ್ಗವಾಗಿದೆ.

Bajaj Chetak Blue 3202 vs TVS iQube Electric Scooter Price Performance Feature Comparison

ಬಜಾಜ್ ಚೇತಕ್ ಬ್ಲೂ 3202 - ಟಿವಿಎಸ್ ಐಕ್ಯೂಬ್ ಕಾರ್ಯಕ್ಷಮತೆ: ಹೊಚ್ಚ ಹೊಸ ಬಜಾಜ್ ಚೇತಕ್ ಬ್ಲೂ 3202 (Bajaj Chetak Blue 3202) ಎಲೆಕ್ಟ್ರಿಕ್ ಸ್ಕೂಟರ್ 3.2 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 5.3 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 16 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಬಜಾಜ್ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್, ಭರ್ತಿ ಚಾರ್ಜ್‌ನಲ್ಲಿ 137 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಹೆಚ್ಚುವರಿಯಾಗಿ ರೂ.5,000 ಪಾವತಿಸಿ, ಟೆಕ್‌ಪ್ಯಾಕ್‌ ಆಯ್ಕೆಯಿರುವ ಚೇತಕ್ ಬ್ಲೂ 3202 ಮಾದರಿಯನ್ನು (ಮಾಡೆಲ್) ಖರೀದಿಸಿದರೆ, ಟಾಪ್ ಸ್ಪೀಡ್ 73 ಕೆಎಂಪಿಹೆಚ್‌ಗೆ ಅಧಿಕಗೊಳುತ್ತದೆ. ಜೊತೆಗೆ ಬ್ಯಾಟರಿ ಪ್ಯಾಕ್ 5 ಗಂಟೆ 50 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಟಿವಿಎಸ್ ಐಕ್ಯೂಬ್ (TVS iQube) 3.4 ಕೆಡಬ್ಲ್ಯೂಹೆಚ್ ಬ್ಯಾಟರಿ ರೂಪಾಂತರದ ಕುರಿತಂತೆ ಹೇಳುವುದಾದರೆ, ಇದರ ಎಲೆಕ್ಟ್ರಿಕ್ ಮೋಟಾರ್ 5.9 ಬಿಹೆಚ್‍ಪಿ ಗರಿಷ್ಠ ಶಕ್ತಿ (ಪವರ್) ಮತ್ತು 33 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಓಡುತ್ತದೆ. 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 4.2 ಸೆಕೆಂಡುಗಳಲ್ಲಿ 0 - 40 ಕೆಎಂಪಿಹೆಚ್ ವೇಗವನ್ನು ಹೊಂದುತ್ತದೆ.

ಬಜಾಜ್ ಚೇತಕ್ ಬ್ಲೂ 3202 - ಟಿವಿಎಸ್ ಐಕ್ಯೂಬ್ ವಿಶೇಷತೆಗಳು: ನೂತನ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್ ಇಕೋ ರೈಡಿಂಗ್ ಮೋಡ್‌ನ್ನು ಒಳಗೊಂಡಿದೆ. ಟೆಕ್‌ಪ್ಯಾಕ್‌ ಮಾದರಿಯು ಇಕೋ & ಸ್ಪೋರ್ಟ್ಸ್ ರೈಡಿಂಗ್ ಮೋಡ್‌ಗಳು, ಹಿಲ್ ಹೋಲ್ಡ್ ಮತ್ತು ರಿವರ್ಸ್ ಮೋಡ್‌ನ್ನು ಹೊಂದಿದೆ. ಇದರೊಟ್ಟಿಗೆ ಡಿಜಿಟಲ್ ಕನ್ಸೋಲ್, ಅಲಾಯ್ ವೀಲ್‌ಗಳು, ಸುರಕ್ಷತೆಗಾಗಿ ಡಿಸ್ಕ್, ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಬ್ರೂಕ್ಲಿನ್ ಬ್ಲ್ಯಾಕ್, ಸೈಬರ್ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) 220 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗ (ರೇರ್) 130 ಎಂಎಂ ಬ್ರೇಕ್‌ನ್ನು ಹೊಂದಿದೆ. ರಿವರ್ಸ್ ಪಾರ್ಕ್ ಅಸಿಸ್ಟ್, ಯುಎಸ್‌ಬಿ ಪೋರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಜಿಯೋ ಫೆನ್ಸಿಂಗ್, ಆಂಟಿ-ಥೆಫ್ಟ್ ಅಲರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಶೈನಿಂಗ್ ರೆಡ್, ಪರ್ಲ್ ವೈಟ್ ಹಾಗೂ ಟೈಟಾನಿಯಂ ಗ್ರೇ ಗ್ಲೋಸಿ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 11, 2024, 17:17 [IST]
English summary
Bajaj chetak blue 3202 vs tvs iqube electric scooter price performance feature comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+