'ಮೈಲೇಜ್ ಕಾ ಬಾಪ್' ಬಜಾಜ್ CNG ಬೈಕ್ ಲಾಂಚ್ ದಿನಾಂಕ ಬಿಡುಗಡೆ: ಹೊಸ ಬೈಕ್ ಕೊಳ್ಳುವವರು ಕಾಯಿರಿ!
ಭಾರತದ ಮೊದಲ ಸಿಎನ್‌ಜಿ ಬೈಕನ್ನು ಬಜಾಜ್ ಮಾರುಕಟ್ಟೆಗೆ ತರಲಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇದ್ದು, ಇದಕ್ಕಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಮೊದಲ ಸಿಎನ್‌ಜಿ ಬೈಕ್ ಯಾವ ರೀತಿ ಇರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ನೋಡಲು ಯಾವ ರೀತಿ ಇರಬಹುದು, ಯಾವ ರೀತಿ ಕಾರ್ಯ ನಿರ್ವಹಿಸಬಹುದು, ಎಷ್ಟು ಮೈಲೇಜ್ ನೀಡಬಹುದು ಎಂಬಿತ್ಯಾದಿ ಸಂಶಯಗಳು ಹಲವರ ಮನದಲ್ಲಿ ಆಗಾಗ ಸುಳಿಯುತ್ತಿದೆ ಎಂಬುವುದು ಹಗಲಿನಷ್ಟೇ ವಾಸ್ತವ. ಈ ಎಲ್ಲಾ ಸಂಶಯಗಳಿಗೂ ಬಜಾಜ್ ತೆರೆ ಎಳೆಯಲು ಸಿದ್ದವಾಗಿದ್ದು ಸಿಎನ್‌ಜಿ ಬೈಕ್ ಬಿಡುಗಡೆಯ ದಿನಾಂಕವನ್ನು ಇದೀಗ ಹೊರಬಿಟ್ಟಿದೆ.
ಕಂಪನಿಯು ಸಿಎನ್‌ಜಿ ಬೈಕ್‌ಗೆ "ಫೈಟರ್" (Fighter) ಎಂಬ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಈ ಸಂದರ್ಭದಲ್ಲಿ ಬಜಾಜ್ ಕಂಪನಿಯು ತನ್ನ ಸಿಎನ್‌ಜಿ ಬೈಕ್‌ಗೆ ಈ ಹೆಸರನ್ನು ನೀಡಬಹುದು ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. "ಬ್ರೂಜರ್" ಎಂಬ ಹೆಸರು ಸಿಎನ್‌ಜಿ ಬೈಕ್‌ನ ಹೆಸರಾಗಿದೆ ಎಂದು ಈಗಾಗಲೇ ವದಂತಿಯಾಗಿದ್ದರೆ, ಈಗ ಕಂಪನಿಯು ಹೊಸ ಹೆಸರಿಗೆ ಟ್ರೇಡ್ ಮಾರ್ಕ್ ಸಲ್ಲಿಸಿತ್ತು.

ಮಾಹಿತಿಗಳ ಪ್ರಕಾರ ಬಜಾಜ್, ತನ್ನ ಹೊಸ ಸಿಎನ್‌ಜಿ ಬೈಕ್‌ಗಳನ್ನು (Bajaj CNG Bike) ಮುಂದಿನ ತಿಂಗಳು ಅಂದರೆ ಜುಲೈ 17 ನೇ ದಿನಾಂಕದಂದು ಮಾರುಕಟ್ಟೆಗೆ ತರಲಿದೆ. ಹೌದು, ಯಾರೂ ಸಹ ಬಜಾಜ್ ಇಷ್ಟು ಬೇಗ ಈ ಸಿಎನ್‌ಜಿ ಬೈಕ್‌ಗಳನ್ನು ಮಾರುಕಟ್ಟೆಗೆ ತರಲಿದೆ ಎಂಬುದರ ಬಗ್ಗೆ ಚಿಂತಿಸಿರಲಿಲ್ಲ. ಆದರೆ ಜೂನ್‌ನಲ್ಲಿ ಲಾಂಚ್ ಆಗಬೇಕಿದ್ದ ಈ ಬೈಕ್ ಇದೀಗ ಜುಲೈನಲ್ಲಿ ಲಾಂಚ್ ಆಗಲಿದೆ.
ಬಜಾಜ್ (Bajaj) ತನ್ನ ಸಿಎನ್‌ಜಿ ಬೈಕ್ ಅನ್ನು ಸ್ಥಗಿತಗೊಳಿಸದೆ ಒಂದರ ನಂತರ ಒಂದರಂತೆ ವಿವಿಧ ಪ್ರದೇಶಗಳಲ್ಲಿ ಸಿಎನ್‌ಜಿ ಬೈಕ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಹೀಗಾಗಿ ಈ "ಬ್ರೂಜರ್" ಮತ್ತು "ಫೈಟರ್" ಪ್ರತ್ಯೇಕ ಬೈಕ್ ಗಳಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಜಾಜ್ ಈ ಹಿಂದೆ ತನ್ನ ಸಿಎನ್‌ಜಿ ಬೈಕ್‌ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರೆ, ಅವುಗಳನ್ನು ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿತು.

ತ್ರಿಚಕ್ರ ವಾಹನ ಮಾರಾಟದಲ್ಲಿ ನಾವು ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿದ್ದು, ಅದನ್ನು ದ್ವಿಚಕ್ರ ವಾಹನಗಳಿಗೂ ವಿಸ್ತರಿಸಲು ಬಯಸಿದ್ದೇವೆ ಎಂದು ರಾಕೇಶ್ ಶರ್ಮಾ ಹೇಳಿದ್ದಾರೆ. ಇದು ಕೇವಲ 1 ಸಿಎನ್‌ಜಿ ಬೈಕ್ ಆಗಿರುವುದಿಲ್ಲ. ಪ್ರತಿಯೊಂದು ಮೋಟಾರ್‌ಸೈಕಲ್ ವಿಭಾಗಕ್ಕೂ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ. ನೂತನ ಸಿಎನ್‌ಜಿ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ ಇದು 2025ರ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹಿಂದೆ ಸ್ವತಃ ಬಜಾಜ್ ತಿಳಿಸಿತ್ತು. ಆದರೆ ಇದೀಗ ಬೇಗನೇ ಮಾರುಕಟ್ಟೆಗೆ ಬರುತ್ತಿದೆ.
ಬಜಾಜ್ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೈಕ್ ಗಳು ಕೊಂಚ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣವೆಂದರೆ, ತಯಾರಿಕಾ ವೆಚ್ಚ ಹೆಚ್ಚಾಗಿರುವುದು ಎನ್ನಲಾಗಿದೆ. ಮುಂಬರಲಿರುವ ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ಕೊಂಚ ಭಿನ್ನವಿರಲಿದೆ. ಆದರೆ, ಸಿಎನ್‌ಜಿ ಬೈಕ್ ನಿರ್ವಹಣಾ ವೆಚ್ಚ ಕಡಿಮೆಯಿದ್ದು, ಹೆಚ್ಚಿನ ಮೈಲೇಜ್ ನೀಡುವುದರಿಂದ ಬೆಲೆ ಏರಿಕೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಸಿಎನ್‌ಜಿ ಬೈಕ್ ಬಿಡುಗಡೆಗೊಂಡರೆ ಕಂಪನಿ ಈ ವಿಭಾಗದಲ್ಲಿ ಮತ್ತಷ್ಟು ಬಲಗೊಳ್ಳಲಿದೆ. ಜೊತೆಗೆ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸಿಎನ್‌ಜಿ ಮೋಟಾರ್‌ಸೈಕಲ್‌ಗಳಿಂದ ಭಾರೀ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








