Bajaj CNG Bike: ಬಜಾಜ್‌ನಿಂದ ಸಿಎನ್‌ಜಿ ಬೈಕ್ ಬಿಡುಗಡೆ ಖಚಿತ.. ಕಡಿಮೆ ಖರ್ಚು, ಗರಿಷ್ಠ ಮೈಲೇಜ್!

ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ ಆಟೋ (Bajaj Auto) ಜನಮನ್ನಣೆ ಗಳಿಸಿದೆ. ಕಂಪನಿಯ ಪಲ್ಸರ್ ಸರಣಿ ಮೋಟಾರ್‌ಸೈಕಲ್ ಗಳನ್ನು ಯುವ ಜನತೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸಿಎನ್‌ಜಿ ಚಾಲಿತ ಆಟೋ ರಿಕ್ಷಾ ಮಾರಾಟದಲ್ಲಿಯೂ ನಿರೀಕ್ಷೆಗೂ ಮೀರಿದ ಪ್ರಗತಿಯನ್ನು ಬಜಾಜ್ ದಾಖಲಿಸಿದೆ.

ಪೆಟ್ರೋಲ್ ದರಗಳು ಮುಗಿಲು ಮುಟ್ಟಿರುವುದು ಹಾಗೂ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿರುವುದು ಮಧ್ಯಮ ವರ್ಗದ ಜನರನ್ನು ತೀರಾ ಇಕ್ಕಟ್ಟಿಗೆ ಸಿಲುಕಿದೆ. ಅದಕ್ಕೆ ಪರಿಹಾರವಾಗಿ ದಿನನಿತ್ಯದ ಬಳಕೆಗೆ ಬಜಾಜ್ ಕಂಪನಿ ಸಿಎನ್‌ಜಿ (CNG) ಚಾಲಿತ ಬೈಕ್‌ನ್ನು ತಯಾರಿಸುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಕಡಿಮೆ ಖರ್ಚಿನ ಇಂಧನ ಉಪಯೋಗದಲ್ಲಿ ಹೆಚ್ಚು ಮೈಲೇಜ್ ಕೊಡುವ ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್ ಕೆಲವೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Bajaj First CNG Bike Launch In June 2024 Confirmed

ಈ ಕುರಿತು ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಜಾಜ್ ಆಟೋ (Bajaj Auto) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ (Rajiv Bajaj) ಅವರು ಮಾತನಾಡಿದ್ದಾರೆ. 'ಬಜಾಜ್ ಕಂಪನಿಯು ಸಿಎನ್‌ಜಿ ಚಾಲಿತ ಮೋಟಾರ್‌ಸೈಕಲ್‌ಗಳ ಪೋರ್ಟ್‌ಫೋಲಿಯೊವನ್ನು ಅಭಿವೃದ್ಧಿಪಡಿಸುತ್ತಿದ್ದು, ಮೊದಲ ಬೈಕ್ ಜೂನ್‌ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ' ಎಂದು ಹೇಳಿದ್ದಾರೆ.

ಪೆಟ್ರೋಲ್ ಚಾಲಿತ ಬೈಕ್‌ಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಮೋಟಾರ್‌ಸೈಕಲ್ ವಿಭಿನ್ನವಾದ ಫ್ಯುಯೆಲ್ (ಇಂಧನ) ಟ್ಯಾಂಕ್ ಹೊಂದಿರುವ ಸಾಧ್ಯತೆಯಿದೆ. ಇದರಿಂದ ಉತ್ಪಾದನಾ ವೆಚ್ಚವು ಜಾಸ್ತಿಯಾಗುವುದರಿಂದ ಈ ಬೈಕ್ ಬೆಲೆ ಕೊಂಚ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು ರೂ.80,000 ಎಕ್ಸ್ ಶೋರೂಂ ಬೆಲೆಗೆ ಖರೀದಿಗೆ ಸಿಗಬಹುದು. ಜೊತೆಗೆ 70 ಕಿಲೋಮೀಟರ್ ಗೂ ಅಧಿಕ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

Bajaj First CNG Bike Launch In June 2024 Confirmed

ಸದ್ಯ, ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ ರೂ.81.50 ದಾಖಲಾಗಿದೆ. ಅದೇ ರೀತಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀ.ಗೆ ರೂ.99.84 ಇದ್ದು, ಹೇಗೆ ಹೋಲಿಕೆ ಮಾಡಿದರೂ ಶುದ್ಧ ಇಂಧನವಾದ ಸಿಎನ್‌ಜಿಯಿಂದ ಚಲಿಸುವ ಬೈಕ್ ನಿರ್ವಹಣೆ ವೆಚ್ಚ ಕಡಿಮೆಯಾಗುವುದರಿಂದ ಮಧ್ಯಮ ವರ್ಗದ ಜನರು ಇದನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಬಜಾಜ್ ಕಂಪನಿಯೂ ಅತ್ಯಂತ ಕಡಿಮೆ ಬೆಲೆಗೆ ಈ ಮೋಟಾರ್‌ಸೈಕಲ್ ಗ್ರಾಹಕರಿಗೆ ಸಿಗುವಂತೆ ಮಾಡಲು ಪ್ರಯತ್ನಿಸುತ್ತಿದ್ದು, ಇದರ ತಯಾರಿಕೆಗೆ ವಿಧಿಸುವ ಜಿಎಸ್‌ಟಿಯನ್ನು ಇಳಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಮಾಡಿದೆ ಎಂದು ಕೆಲವೇ ತಿಂಗಳ ಹಿಂದೆ ವರದಿಯಾಗಿತ್ತು. ಹೋದ ವರ್ಷದ ಅಕ್ಟೋಬರ್ ತಿಂಗಳು, ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್‌ಗೆ 'ಪ್ಲಾಟಿನಾ' ಎಂಬ ಹೆಸರನ್ನು ನಾಮಕರಣ ಮಾಡಬಹುದು ಎಂದು ವಿವಿಧ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು.

ಮೂಲಗಳ ಪ್ರಕಾರ, ಮಹಾರಾಷ್ಟದ ಔರಂಗಾಬಾದ್ ಅಥವಾ ಉತ್ತರಖಂಡದ ಪಂತ್ ನಗರಲ್ಲಿರುವ ಬಜಾಜ್ ಕಂಪನಿಯ ಉತ್ಪಾದನಾ ಘಟಕದಲ್ಲಿ ನೂತನ ಸಿಎನ್‌ಜಿ ಚಾಲಿತ ಬೈಕ್‌ನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಜೂನ್ ತಿಂಗಳಲ್ಲಿ ಈ ಮೋಟಾರ್‌ಸೈಕಲ್ ಬಿಡುಗಡೆಯಾಗಲಿದ್ದು, ಆ ಬಳಿಕವೇ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಖರೀದಿದಾರರಿಗೆ ದೊರೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 23, 2024, 18:02 [IST]
English summary
Bajaj first cng bike launch in june 2024 confirmed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+