360 ರೂ. ವೆಚ್ಚದಲ್ಲಿ 330 ಕಿ.ಮೀ ಓಡುವ ಬಡವರ ಬಂಡಿ: ಖರೀದಿಗಾಗಿ ಮುಗಿಬಿದ್ದ ಜನ!
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ (Bajaj Auto) ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಇತೀಚೆಗೆ ಬಿಡುಗಡೆಗೊಳಿಸಿತು. ಈ ಬೈಕಿಗೆ ಬಜಾಜ್ ಫ್ರೀಡಂ 125 (Bajaj Freedom 125) ಎಂಬ ಹೆಸರನ್ನು ನೀಡಲಾಗಿದೆ. ಇದು ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ ಬೈಕ್ ಬರುತ್ತಿರುವುದು ಇದೀಗ ಮೊದಲ ಬಾರಿಗೆ ಮಾತ್ರ, ಭಾರತಕ್ಕೆ ಮಾತ್ರವಲ್ಲದೆ ವಿಶ್ವಲ್ಲೇ ಇದೇ ಮೊದಲು ಆಗಿದೆ.
ಬಿಡುಗಡೆಗೆ ಮುಂಚೆಯೇ ಫ್ರೀಡಮ್ ಬಹಳಷ್ಟು ಖರೀದಿದಾರರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ ಎಂದು ಬಜಾಜ್ ಆಟೋ ಹೇಳಿತ್ತು. ದ್ವಿಚಕ್ರ ವಾಹನದ ದೈತ್ಯ ಬಜಾಜ್ ಆಟೋ ಈ ಸಿಎನ್‌ಜಿ ಬೈಕ್ ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ಸಮಯದಲ್ಲಿ 30,000 ಕ್ಕೂ ಹೆಚ್ಚು ಜನರು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಬಜಾಜ್ ಈಗಾಗಲೇ ಈ ಸಿಎನ್‌ಜಿ ಬೈಕ್‌ಗಾಗಿ (CNG Bike) ಸುಮಾರು 6,000 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಬಹಿರಂಗಪಡಿಸಿದೆ.

ಜುಲೈ 18 ರಂದು ಫ್ರೀಡಂ 125 ಗಾಗಿ ಬುಕ್ಕಿಂಗ್ ತೆರೆಯಲಾಗಿದೆ. ಈ ಬೈಕ್ ಅನ್ನು ಖರೀದಿಸಲು ರೂ.1,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕಿನ ಬೆಲೆಯು ರೂ.95,000 ದಿಂದ ಆರಂಭಿಕವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷದವರೆಗೆ ಇದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಈ ಸಿಎನ್‌ಜಿ-ಚಾಲಿತ ಮೋಟಾರ್‌ಸೈಕಲ್ ಸಾಮಾನ್ಯ ಪೆಟ್ರೋಲ್ ಬೈಕಿಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವನ್ನು ಶೇಕಡಾ 65 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಬಜಾಜ್ ಫ್ರೀಡಂ 125 ಬೈಕ್ ಡ್ರಮ್, ಡ್ರಮ್ ಎಲ್ಇಡಿ ಮತ್ತು ಡಿಸ್ಕ್ ಎಲ್ಇಡಿ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ. ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ ಬಿಡುಗಡೆಯು ಇಂತಹ ತಂತ್ರಜ್ಞಾನವನ್ನು ಹೆಚ್ಚಿನ ಮಾದರಿಗಳಿಗೆ ಕೊಂಡೊಯ್ಯಲು ದಾರಿ ಮಾಡಿಕೊಂಡಿದೆ.

ಬಜಾಜ್ ಫ್ರೀಡಮ್ ಒಂದು ಕಮ್ಯೂಟರ್-ಕ್ಲಾಸ್ ಮೋಟಾರ್‌ಸೈಕಲ್ ಆಗಿದ್ದು, ಸಿಎನ್‌ಜಿ ಟ್ಯಾಂಕ್ ಅನ್ನು ಒಳಗೊಂಡಿದೆ. ಬಜಾಜ್ ಸಿಎನ್‌ಜಿ ಸ್ಪೋರ್ಟಿ ಸ್ಟೈಲಿಂಗ್, ಎಲ್‌ಇಡಿ ಹೆಡ್ ಲ್ಯಾಂಪ್, ಬ್ಲೂಟ್‌ಟೂತ್ ಕನೆಕ್ಟಿವಿಟಿ, ಗ್ರಾಫಿಕ್ಸ್‌ನೊಂದಿಗೆ ಡ್ಯುಯಲ್ ಕಲರ್ ಸ್ಕೀಮ್ ಮತ್ತು ಫಸ್ಟ್-ಇನ್-ಕ್ಲಾಸ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಇನ್ನು ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕ್ ಡಿಸ್ಕ್ ಬ್ರೇಕ್ ಸೆಟಪ್ ನೊಂದಿಗೆ ಆಲ್-ಡ್ರಮ್ ರೂಪಾಂತರವು ಸಹ ಲಭ್ಯವಿದೆ.
ಬಜಾಜ್ ಫ್ರೀಡಮ್ ಬೈಕ್ 125ಸಿಸಿ ಎಂಜಿನ್ ಅನ್ನು ಹೊಂದಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕಿನ ಟ್ರೆಲ್ಲಿಸ್ ಫ್ರೇಮ್ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಫ್ರೀಡಮ್‌ನ ಸೀಟಿನ ಕೆಳಗೆ ಬಜಾಜ್ ಸಂಯೋಜಿಸಿದೆ. 2-ಲೀಟರ್ ಪೆಟ್ರೋಲ್ ಟ್ಯಾಂಕ್ ಸೀಟ್ ಸ್ವಲ್ಪ ಮುಂದೆ ಇರುತ್ತದೆ, ಮತ್ತು ಎರಡೂ ಟ್ಯಾಂಕ್‌ಗಳು ಒಟ್ಟಿಗೆ 330 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ.

CNG ಯಲ್ಲಿ ಚಲಿಸುವಾಗ, ಪ್ರತಿ ಕಿಲೋಗ್ರಾಂ CNG ಗೆ 102 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡುತ್ತದೆ. CNG ನಲ್ಲಿ ಚಾಲನೆಯಲ್ಲಿರುವಾಗ, ಫ್ರೀಡಮ್ ದೈನಂದಿನ ಚಾಲನೆಯ ವೆಚ್ಚವನ್ನು 50 ಪ್ರತಿಶತದಷ್ಟು ಕಡಿತಗೊಳಿಸುತ್ತದೆ, 26 ಪ್ರತಿಶತದಷ್ಟು CO2 ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಶುದ್ಧ-ಪೆಟ್ರೋಲ್ 125 cc ಮೋಟಾರ್‌ಸೈಕಲ್‌ಗೆ ಹೋಲಿಸಿದರೆ 5 ವರ್ಷಗಳಲ್ಲಿ 75,000 ರೂ.ವರೆಗೆ ಇಂಧನ ವೆಚ್ಚವನ್ನು ಉಳಿಸಲು ಮಾಲೀಕರಿಗೆ ಅನುವು ಮಾಡಿಕೊಡುತ್ತದೆ.
ಇನ್ನು ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ಗಾಗಿ ಬುಕ್ಕಿಂಗ್‌ಗಳು ಈಗ ತೆರೆದಿದ್ದು, ಡೆಲಿವರಿಗಳು ಮೊದಲು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗುತ್ತವೆ, ಉಳಿದ ರಾಜ್ಯಗಳು ಹಂತ ಹಂತವಾಗಿ ಪ್ರಾರಂಭವಾಗುತ್ತದೆ. ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್ ಅನ್ನು ಮುಂಭಾಗದ ಡಿಕ್ಕಿ ಪರೀಕ್ಷೆ ಮತ್ತು ಟ್ರಕ್ ಓವರ್ ರನ್ ಪರೀಕ್ಷೆಗೆ ಒಳಪಡಿಸಲಾಗಿದೆ, ಮುಂಭಾಗದ ಡಿಕ್ಕಿ ಪರೀಕ್ಷೆಯಲ್ಲಿ, ಬಜಾಜ್ ಫ್ರೀಡಮ್ ಅನ್ನು 1.5 ಟನ್ ತೂಕದ ವಸ್ತುವಿನ ವಿರುದ್ಧ ಪರೀಕ್ಷಿಸಲಾಗಿದೆ.
ಇದನ್ನು ಸರಾಸರಿ ಮಧ್ಯಮ ಗಾತ್ರದ SUV ಗೆ ಹೋಲಿಸಬಹುದು. ವಿಡಿಯೋದಲ್ಲಿ ಬೈಕ್ ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಘರ್ಷಣೆಯಲ್ಲೂ ಬೈಕ್‌ನ ಸಿಎನ್‌ಜಿ ಟ್ಯಾಂಕ್ ಬಲವಾಗಿಯೇ ಇರುತ್ತದೆ. ಇದರರ್ಥ ಸಿಎನ್‌ಜಿ ಸೋರಿಕೆ ಇಲ್ಲ. ಟ್ರಕ್ ರನ್ ಓವರ್ ಪರೀಕ್ಷೆಯ ಬಗ್ಗೆ ಹೇಳುವುದಾದರೆ, ಇದು ಸ್ವಲ್ಪ ಭಯಾನಕವಾಗಿದೆ. ಅದೇನೆಂದರೆ, ಸಿಎನ್‌ಜಿ ಬೈಕ್‌ನ ಮೇಲೆ ಟ್ರಕ್ ಅನ್ನು ತುಂಬಿ ಇಳಿಸುವ ಪ್ರಯೋಗವಾಗಿತ್ತು.


Click it and Unblock the Notifications








