125cc ಸೆಗ್ಮೆಂಟ್‌ನಲ್ಲಿ ಬಿರುಗಾಳಿ ಎಬ್ಬಿಸಲು ಬರುತ್ತಿದೆ ಹೊಸ ಬೈಕ್: ದೀಪಾವಳಿಗೆ ಬಜಾಜ್‌ನ ಬೋನಸ್!
ಬಜಾಜ್‌ನ ಪಲ್ಸರ್ ಸರಣಿಯಲ್ಲಿ ಹೆಚ್ಚು ಪ್ರಸಿದ್ದವಾದ ಬೈಕ್‌ಗಳಲ್ಲಿ ಪಲ್ಸರ್ ಎನ್‌ಎಸ್ ಬಳಿಕ N250 ಹೆಚ್ಚು ಪ್ರಸಿದ್ದವಾದುದು. ಈಗಾಗಲೇ ಪಲ್ಸರ್ ಎನ್ ಸರಣಿಯು 160 & 160cc ಸೆಗ್ಮೆಂಟ್‌ನಲ್ಲಿ ಲಭ್ಯವಿದ್ದು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಅಗ್ರೆಸಿವ್ ಲುಕ್ ಮತ್ತು ಅದ್ಭುತ ಪರ್ಫಾಮೆನ್ಸ್ ಹೊಂದಿರುವ ಈ ಬೈಕ್ ಇದೀಗ ಮತ್ತೊಂದು ಸೆಗ್ಮೆಂಟ್‌ಗೆ ಎಂಟ್ರಿಯಾಗುತ್ತಿದೆ. ಈಗಾಗಲೇ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮತ್ತೊಂದು ಸೆಗ್ಮೆಂಟ್‌ಗೂ ಕಾಲಿಟ್ಟರೆ ಸಾಕಷ್ಟು ಸಂಖ್ಯೆಯಲ್ಲಿ ಈ ಬೈಕ್ ರಸ್ತೆಯಲ್ಲಿ ಕಾಣ ಸಿಗಲಿದೆ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗಿಲ್ಲ.
ಮಾಹಿತಿಗಳ ಪ್ರಕಾರ ಬಜಾಜ್ N125 ಅಭಿವೃದ್ದಿ ಪಡಿಸುತ್ತಿದೆ. ಈಗಾಗಲೇ ಈ ಬೈಕ್ ಪ್ರಯೋಗಾರ್ಥ ರೈಡ್‌ಗಳನ್ನು ನಡೆಸುತ್ತಿದ್ದು ಅಲ್ಲಲ್ಲಿ ಕಂಡು ಬರುತ್ತಿದೆ. ಮಾಹಿತಿಗಳ ಪ್ರಕಾರ ಈ ಬೈಕ್‌ನ ಎಂಜಿನ್ ಮತ್ತು ಇತರ ವಿಚಾರಗಳನ್ನು ನೋಡುವುದಾದರೆ, ಬಜಾಜ್ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಪಲ್ಸರ್ NS125 ಎಂಜಿನ್ ಅನ್ನು ಬಳಸುವ ಸಾಧ್ಯತೆ ಹೆಚ್ಚು.

ಈ 124.5cc (Bajaj Pulsar N125)ಎಂಜಿನ್ 11.82bhp ಮತ್ತು 11Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಐದು-ಸ್ಪೀಡ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. ಕಂಪನಿಯು N125 ನ ಪಾತ್ರಕ್ಕೆ ಸರಿಹೊಂದುವಂತೆ ಸ್ವಲ್ಪ ಮಟ್ಟಿಗೆ ಟ್ಯೂನಿಂಗ್ ಅನ್ನು ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. ಈ ಕುರಿತಾಗಿ ನಾವಿನ್ನೂ ಕಾದು ನೋಡಬೇಕಷ್ಟೆ.
ಬಜಾಜ್ ಪಲ್ಸರ್ N125 ಅನ್ನು ಈ ವರ್ಷದ ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದ್ದು, ಇದರ ಬೆಲೆ ಪಲ್ಸರ್ 125 ಮತ್ತು NS125 ಗೆ ಹತ್ತಿರವಾಗಬಹುದು, ಅಂದರೆ ಇದರ ಬೆಲೆ ರೂ. 95,000 ಮತ್ತು ರೂ. ಕ್ರಮವಾಗಿ 1.04 ಲಕ್ಷ (ಎಕ್ಸ್ ಶೋ ರೂಂ) ಇರಬಹುದು ಎನ್ನಲಾಗುತ್ತಿದೆ.

ಇನ್ನು ಪಲ್ಸರ್ N250 ಬಗ್ಗೆ ನೋಡುವುದುದಾದರೆ, ಬೈಕ್‌ನ ಮುಂಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಹಿಂದೆ ಇದ್ದಂತಹ N250 ಯ ಅದೇ ಡಿಸೈನ್ ಇದ್ದು, ಅದಕ್ಕೆ ಹೆಚ್ಚುವರಿಯಾಗಿ ಫೀಚರ್‌ಗಳನ್ನಷ್ಟೇ ಸೇರಿಸಿದ್ದಾರೆ. ಈ ಮೇಲೆ ತಿಳಿಸಿದಂತೆ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕರೆ ಮತ್ತು ಎಸ್‌ಎಂಎಸ್‌ಗಳಿಗಾಗಿ ಬ್ಲೂಟೂತ್ ಕನೆಕ್ಟಿವಿಟಗಳು, ಮತ್ತು ಇದರಲ್ಲಿ ಟರ್ನ್ ಬೈ ಟರ್ನ್ ನಾವಿಗೇಷನ್ ಸಹ ಹೊಂದಿದೆ.
ಇದರ ಜೊತೆಗೆ ಈ ಬೈಕ್ ಅಪ್‌ಡೇಟೆಡ್ 27mm ನ ಇನ್ವರ್ಟೆಡ್ ಫೋರ್ಕ್‌ಗಳನ್ನು ಹೊಂದಿದೆ. ಕಳೆದ ಬಾರಿಯ ಬಜಾಜ್ ಪಲ್ಸರ್ N250 ಮಾದರಿಯಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ನಾವು ಕಾಣಬಹುದಾಗಿತ್ತು. ಇದು ಬೈಕ್ ಸವಾರನಿಗೆ ಹೆಚ್ಚು ಆರಾಮದಾಯಕ ರೈಡಿಂಗ್ ಅನುಭವವನ್ನು ನಿಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಬೈಕ್‌ನಲ್ಲಿ ಬದಲಾಗದೇ ಉಳಿದಿರುವ ವಿಷಯಗಳೆಂದರೆ ಅದು ಇದರ ಎಂಜಿನ್ ಮತ್ತು ಇತರ ಕಾರ್ಯಗಳು. ಈ ಬೈಕ್‌ನಲ್ಲಿ ಅದೇ 249cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಬರುತ್ತಿದ್ದು, ಇದರ ಸಹಾಯದಿಂದ ಈ ಬೈಕ್ ಸುಮಾರು 24.5 PS ಪವರ್ ಮತ್ತು 21.5 ಎನ್‌ಎಮ್ ಟಾರ್ಕ್ ಸಹ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು. ಸ್ಲಿಪರ್ ಕ್ಲಚ್ ಸಹ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








