ಸದ್ಯದಲ್ಲೇ 250 ಸಿಸಿಯಲ್ಲಿ ಬಜಾಜ್‌ನ ಹೊಸ ಬೈಕ್: ರಾಶಿ ರಾಶಿ ಫೀಚರ್‌ಗಳ ಜೊತೆ ಮಾರುಕಟ್ಟೆಗೆ ಲಗ್ಗೆ!
ಬಹುತೇಕ ಭಾರತೀಯರಲ್ಲಿ ನಿಮ್ಮ ನೆಚ್ಚಿನ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಅಥವಾ ನಿಮ್ಮ ನೆಚ್ಚಿನ ಬೈಕ್ ಕಂಪನಿ ಯಾವುದು ಎಂದು ಕೇಳಿದರೆ ಅವರ ಬಾಯಲ್ಲಿ ಕೇಳಿ ಬರುವ ಎರಡು ಹೆಸರುಗಳೆಂದರೆ, ಹೀರೋ ಮತ್ತು ಬಜಾಜ್. ಇದಕ್ಕೆ ಪ್ರಮುಖ ಕಾರಣ ಈ ಎರಡೂ ಕಂಪನಿಗಳು ಗ್ರಾಹಕರ ನಾಡ ಮಿಡಿತವನ್ನು ಅರಿತಿರುವುದು.
ಕೆಲವು ಸಮಯಗಳ ಹಿಂದೆ ಬಜಾಜ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ N160 ಎಂಬ ನೇಕೆಡ್ ಸ್ಟ್ರೀಟ್ ಬೈಕ್ ಅನ್ನು ಲಾಂಚ್ ಮಾಡಿತ್ತು. ಆಕರ್ಷಕ ಅಗ್ರೆಸಿವ್ ವಿನ್ಯಾಸ ಮತ್ತು ಉತ್ತಮ ಪರ್ಫಾಮೆನ್ಸ್ ಕಾಂಬೋ ಜೊತೆ ರಸ್ತೆಗಿಲೀದ ಈ ಬೈಕ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಭಾರತೀಯರ ಹಾಟ್ ಫೇವರೀಟ್ ಆಗಿತ್ತು. ಮುಂಭಾಗದಲ್ಲಿ ಆಕರ್ಷಕ ಎಲ್‌ಇಡಿ ಲೈಟ್‌ನ ಹೆಡ್‌ಲ್ಯಾಂಪ್ ಜೊತೆ ಬಂದ ಈ ಬೈಕ್, ಆಧುನಿಕ ಫೀಚರ್‌ಗಳನ್ನು ಸಹ ಹೊಂದಿತ್ತು.

ಇದೀಗ ಇದೇ ಬೈಕ್‌ನ 250 ಸಿಸಿ ಆವೃತ್ತಿಯನ್ನು ಬಜಾಜ್ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದ್ದು ಈ ಬೈಕ್‌ನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಹ ಇರಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಟ್ರಾಕ್ಷನ್ ಕಂಟ್ರೋಲ್ ಪಡೆಯುತ್ತಿರುವ ಬಜಾಜ್‌ನ ಮೊದಲ ಬೈಕ್ ಎಂಬ ಹೆಗ್ಗಳಿಕೆ ಈ ಬಜಾಜ್ N250 (BAJAJ Pulsar N250) ಪಡೆದುಕೊಳ್ಳಲಿದೆ.
ಇದರ ಜೊತೆ ಈ ಬೈಕ್ ಇನ್ನೂ ಹಲವಾರು ಆಧುನಿಕ ಫೀಚರ್‌ಗಳನ್ನು ಪಡೆದುಕೊಳ್ಳಲಿದ್ದು, ಅದರಲ್ಲಿ ಪ್ರಮುಖವಾದುದು ಎಬಿಎಸ್ ಮೋಡ್. ಮಾಹಿತಿಗಳ ಪ್ರಕಾರ ಇದರಲ್ಲಿ ಎಬಿಎಸ್ ಮೋಡ್ ಸಹ ಇರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದ್ದು, ಹಲವಾರು ಬಾರಿ ಈ ಬೈಕ್ ಅನ್ನು ಕಂಪನಿ ಟೆಸ್ಟ್‌ರೈಡ್ ಮಾಡುವ ವೇಲೆ ಕಂಡು ಬಂದಿದೆ.

ಸದ್ಯ ಭಾರತದಲ್ಲಿ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ಗಳಿಗೆ ಭರ್ಜರಿ ಬೇಡಿಕೆಯಿದೆ. ಆದರೆ ಇದೇ ವಿಭಾಗದಲ್ಲಿ TVS Apache 160 ಮತ್ತು Apache 160 4V, ಯಮಹಾ FZ ಶ್ರೇಣಿ, Xtreme 160R 4V ಮತ್ತು ಸುಜುಕಿ Gixxer 150 ಮಾದರಿಗಳು ಆಧುನಿಕ ಡಿಸೈನ್ ಹೊಸ ತಂತ್ರಜ್ಞಾನದೊಂದಿಗೆ ಹೆಚ್ಚಿನ ಪೈಪೋಟಿ ನೀಡುತ್ತಿರುವ ಕಾರಣ, ಈಗ ಬಜಾಜ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ.
ಸದ್ಯ ಭಾರತದಲ್ಲಿರುವ N160 ಬಗ್ಗೆ ನೊಡುವುದಾದರೆ, ಹೊಸ ಅಪ್‌ಡೇಟ್ ಭಾಗವಾಗಿ ಬಜಾಜ್ ಪಲ್ಸರ್ N160 ನಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ LCD ಕ್ಲಸ್ಟರ್ ನೀಡಲಾಗಿದೆ. ಇದು ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಪ್ರಯಾಣದಲ್ಲಿರುವಾಗ ಈ ಇಂಟರ್ಫೇಸ್ ಮೂಲಕ ಕಾರ್ಯನಿರ್ವಹಿಸಲು ಎಡ ಸ್ವಿಚ್‌ಗಿಯರ್‌ನಲ್ಲಿ ಹೊಸ ಮೋಡ್ ಬಟನ್ ನೀಡಲಾಗಿದೆ.
ಬ್ಲೂಟೂತ್ ಸಂಪರ್ಕದ ಜೊತೆಗೆ, ಬಳಕೆದಾರರು ಈಗ ತಮ್ಮ ಸ್ಮಾರ್ಟ್‌ಫೋನ್ ಅನ್ನು ಪಲ್ಸರ್ N160 ನೊಂದಿಗೆ ಸಂಪರ್ಕಿಸಬಹುದು. ಈ ಮೂಲಕ ನೀವು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಬಹುದು, ಮೊಬೈಲ್ ನೋಟಿಫಿಕೇಷನ್ ಅಲರ್ಟ್, ಮೊಬೈಲ್ ಸಿಗ್ನಲ್ ಸ್ಟ್ರೆಂತ್ ಮತ್ತು ಬ್ಯಾಟರಿ ಲೆವಲ್ ಅನ್ನು ನೋಡಬಹುದು. ಹಾಗೆಯೇ ಗೇರ್ ಇಂಟಿಕೇಟರ್, ಕ್ವಿಕ್ ಫ್ಯೂಯಲ್ ಎಕಾನಮಿ, ಆವರೇಜ್ ಫ್ಯೂಯಲ್ ಎಕಾನಮಿನಮಿಗಳ ಬಗ್ಗೆ ತಿಳಿದುಕೊಳ್ಳಬಹುದು.
ಪಲ್ಸರ್ N160, 164.82cc DTS-i ಎಂಜಿನ್ ಹೊಂದಿದ್ದು, ಇದು 15.8 bhp ಪವರ್ ಮತ್ತು 14.65 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನಿಂದ ಸುಮಾರು 45 kmpl ಮೈಲೇಜ್ ಪಡೆಹಬುದು ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








