ಸಂಪೂರ್ಣ ಫೀಚರ್ ಪ್ಯಾಕ್ ಆಗಿ ಬರುತ್ತಿದೆ ಬಜಾಜ್ NS400: ಡ್ಯೂಕ್, ಡಾಮಿನಾರ್‌ಗಳಿಗೆ ಪ್ರಭಲ ಪ್ರತಿಸ್ಫರ್ಧಿ
ಎಲ್ಲರಿಗೂ ತಿಳಿದಿರುವಂತೆ ಬಜಾಜ್‌ನ ಬಹುದೊಡ್ಡ ಲಾಂಚ್ ಒಂದು ಮುಂದಿನ ತಿಂಗಳ ಆರಂಭದಲ್ಲಿ ನಡೆಯಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ್ದೇ ಆದ ಛಾಪನ್ನು ಹೊಂದಿರುವ ಬಜಾಜ್ ಪಲ್ಸರ್‌ನ ಹೊಸ ಮಾದರಿಯಾದ ಪಲ್ಸರ್ NS400 ಅನ್ನು ಬಜಾಜ್ ಬಿಡುಗಡೆ ಮಾಡಲಿದೆ. ಇದರಲ್ಲಿ ಯಾವೆಲ್ಲಾ ಫೀಚರ್‌ಗಳು ಇರಲಿದೆ ಎಂಬುದರ ಕುರಿತಾಗಿ ನೋಡೋಣ.
ಎಂಜಿನ್: ಹೊಸ ಪಲ್ಸರ್ NS400 ನಲ್ಲಿ 373.3cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,800rpm ನಲ್ಲಿ 39.4bhp ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಟೆಕ್ನೊಂದಿಗೆ ಜೋಡಿಸಲಾಗಿದೆ. ಕ್ವಿಕ್‌ಶಿಫ್ಟರ್ ಅನ್ನು ಟಾಪ್-ಎಂಡ್ ರೂಪಾಂತರದಲ್ಲಿ ಪ್ರತ್ಯೇಕವಾಗಿ ನೀಡಬಹುದು.

ಸಸ್ಪೆನ್ಷನ್: ಹೊಸ ಬಜಾಜ್ ಪಲ್ಸರ್ NS400 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳಿವುದಾದರೆ, ಇದರ ಮುಂಭಾಗದಲ್ಲಿ USD ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಒಳಗೊಂಡಿರುತ್ತದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬೈಕ್ ಸ್ಟ್ಯಾಂಡರ್ಡ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುತ್ತದೆ.
ಇತರ ಫೀಚರ್‌ಗಳು: ಪ್ರಮುಖವಾಗಿ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಎಲ್ಇಡಿ ಲೈಟಿಂಗ್ ಸಿಸ್ಟಮ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಹೊಸ ಬಜಾಜ್ ಪಲ್ಸರ್ 400 ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು 2 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನುಳಿದ ವಿಚಾರಗಳೆಂದರೆ ಈ ಬೈಕ್ ಸುಮಾರು 193 ಕೆಜಿ ಗಿಂತಲೂ ಕಡಿಮೆ ಇರಲಿದ್ದು, ಇದರಿಂದ ಡಾಮಿನಾರ್‌ಗಿಂತಲೂ ತೂಕದಲ್ಲಿ ಕಡಿಮೆ ಇರಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಬೈಕ್‌ಗಳು ತನ್ನ ಜನಪ್ರಿಯತೆಯಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯನ್ನು ಕಂಡಿತು ಎನ್ನಬಹುದು.
ಮಾರುಕಟ್ಟೆಯಲ್ಲಿ ಹಲವು ಹೊಸ ಬೈಕುಗಳ ಆಗಮನಗಳ ಬಳಿಕ ಅದರ ಜೊತೆ ಪೈಪೋಟಿ ನೀಡುವಲ್ಲಿ ಹಿಂದುಳಿದಿದೆ. ಈ ನಡುವೆ ಬಜಾಜ್ ಆಟೋ ಭಾರತದಲ್ಲಿ ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಹಲವಾರು ಹೊಸ ಬೈಕುಗಳು ಮತ್ತು ಸ್ಕೂಟರ್‌ಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ.

ಮಾರುಕಟ್ಟೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಜಾಜ್ ಗೆ ಒಂದು ಗೇಮ್ ಚೇಂಜರ್‌ನ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಇದೀಗ ಬಜಾಜ್ ಕಂಪನಿಯು ಅಂತಹ ಹೊಸ ಒಂದು ಮಾದರಿ ಪಲ್ಸರ್ 400 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದು ಡೊಮಿನಾರ್‌ಗಿಂತಲೂ ಹೆಚ್ಚು ಬಜೆಟ್ ಸ್ನೇಹಿಯಾಗಿದ್ದು, ಕೆಲವು ದಿನಗಳ ಹಿಂದೆ ಬಜಾಜ್ ಪಲ್ಸರ್ 400 (Bajaj Pulsar NS400) ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿತ್ತು.
ಇನ್ನು ಇತ್ತೀಚೆಗೆ ಬಂದ ವರದಿಗಳ ಪ್ರಕಾರ ಬಜಾಜ್ ಈ ಹೊಸ ಪಲ್ಸರ್ NS400 ಅನ್ನು ಡಾಮಿನಾರ್ 400 ನಂತರದ ಸ್ಥಾನದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದ್ದು ಇದರ ಬೆಲೆ ಡಾಮಿನಾರ್‌ಗಿಂತಲೂ ಕಡಿಮೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಬೈಕ್‌ನ ಬೆಲೆಯೂ ಸಹ ಸುಮಾರು 2 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








