ಹಾರ್ಲೆ, ಟ್ರಯಂಫ್‌ಗೆ ಸೆಡ್ಡು ಹೊಡೆಯಲು ಬಜಾಜ್‌ನ ಅಧೀರ ಅಖಾಡಕ್ಕೆ : NS400cc ಟೀಸರ್‌ ಬಿಡುಗಡೆ

ಮಾರುಕಟ್ಟೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಬಜಾಜ್‌ ಗೆ ಒಂದು ಗೇಮ್‌ ಚೇಂಜರ್‌ನ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಪ್ರೀಮಿಯಂ ಬೈಕ್‌ ಬ್ರಾಂಡ್‌ಗಳು ಎಂದು ಕರೆಸಿಕೊಂಡಿದ್ದ ಜಾರ್ಲೆ ಮತ್ತು ಟ್ರಯಂಫ್ 400cc ಸೆಗ್ಮೆಂಟ್‌ನಲ್ಲಿ ತಮ್ಮ ಹೊಸ ಬೈಕ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು.

ಈಗಾಗಲೇ ಬಜಾಜ್‌ ಕಡೆಯಿಂದ ಮಾರುಕಟ್ಟೆಯಲ್ಲಿ 400 ಸಿಸಿ ಸೆಗ್ಮೆಂಟ್‌ನಲ್ಲಿ ಬಜಾಜ್‌ ಡಾಮಿನಾರ್‌ ೪೦೦ ಇದ್ದರೂ ಸಹ, ಆ ಸಾಲಿಗೆ ಬಜಾಜ್‌ ಇನ್ನೊಂದು ವಾಹನವನ್ನು ಸೇರಿಸುವ ಸಮಯ ಇದು ಎಂಬುದು ಎಲ್ಲರ ಮನದಲ್ಲಿ ಇತ್ತು. ಅದಕ್ಕಾಗಿಯೇ ಬಜಾಜ್‌ ಇದೀಗ ಈ ಸೆಗ್ಮೆಂಟ್‌ಗೆ ತನ್ನ ಹೊಸ ವಾಹನವೊಂದುನ್ನು ಸೇರಿಸುತ್ತಿದ್ದು, ತನ್ನ ಔದ್ಯೋಗಿಕ ಸಮಾಜಿಕ ಜಾಲತಾಣಗಳಲ್ಲಿ ಇದರ ಟೀಸರ್‌ ಒಂದನ್ನು ಸಹ ಹೊರಬಿಟ್ಟಿದೆ.

Bajaj Pulsar NS400 Teased Ahead Of Official Launch, Video Viral

ಹೌದು, ಬಜಾಜ್‌ ಮುಂಬರಲಿರುವ ತನ್ನ ಹೊಸ ಬಜಾಜ್‌ ಪಲ್ಸರ್‌ NS400 ನ ಟೀಸರ್ ಅನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ ಬಜಾಜ್‌ನ ಎನ್‌ಎಸ್‌ ಸರಣಿಯ ಬೈಕ್‌ಗಳು ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಯುವಕರ ನೆಚ್ಚಿನ ಬೈಕ್‌ ಆಗಿ ಹೊರ ಹೊಮ್ಮಿರುವ ಈ ಎನ್‌ಎಸ್‌ ಸರಣಿಯ ಬೈಕ್‌ಗಳು ಸಾಕಷ್ಟು ಆಯ್ಕೆಗಳನ್ನು ಹೊಂದಿದೆ.

ಸದ್ಯಕ್ಕೆ ಭಾರತದಲ್ಲಿ ಬಜಾಜ್‌ ಎನ್‌ಸ್‌ ಸರಣಿ 125cc, 160cc ಮತ್ತು 200cc ಸೆಗ್ಮೆಂಟ್‌ನಲ್ಲಿ ಲಭ್ಯವಿದ್ದು, ತಮಗೆ ಬೇಕಾದ ಸೆಗ್ಮೆಂಟ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಈಗಷ್ಟೇ ಟೀಸರ್‌ ಬಿಟ್ಟಿರುವ 400cc ಯ ಬಜಾಜ್‌ ಪಲ್ಸರ್ ಎನ್‌ಎಸ್‌ 400 (Bajaj Pulsar NS400) ಈ ಸರಣಿಗೆ ಹೊಸ ಸೇರ್ಪಡೆ ಆಗಲಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ. ಕಳೆದ ಬಾರಿಯ ಪಲ್ಸರ್‌ ಎನ್‌ಎಸ್‌ 200 ಗಿಂತಲೂ ಹೆಚ್ಚಿನ ಸ್ಪೋರ್ಟಿ ಡಿಸೈನ್‌ ಮತ್ತು ಪರ್ಫಾಮೆನ್ಸ್‌ ಅನ್ನು ಈ ಬೈಕ್‌ನಿಂದ ನಿರೀಕ್ಷಿಸಲಾಗುತ್ತಿದೆ.

Bajaj Pulsar NS400 Teased Ahead Of Official Launch, Video Viral

2023ರ ಬಜಾಜ್ ಪಲ್ಸರ್ NS160 ಬೈಕಿನ ಎಂಜಿನ್ 17 bhp ಮತ್ತು 14.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಇನ್ನು NS200 ಬೈಕ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಬೈಕ್‌ಗಳ ಎಂಜಿನ್ ಔಟ್‌ಪುಟ್‌ಗಳು ಬದಲಾಗದೆ ಉಳಿದಿವೆ.

20 ವರ್ಷಗಳ ಹಿಂದೆ ಮೊದಲ ಬಜಾಜ್ ಪಲ್ಸರ್ ಆಗಮನದ ನಂತರ, ಹೆಚ್ಚಿನ ಭಾರತೀಯರಿಗೆ 'ಸ್ಪೋರ್ಟಿ' ದೈನಂದಿನ ಬೈಕಿನ ಕುರಿತು ಯೋಚಿಸಿದಾಗ, ಪಲ್ಸರ್ ಬೈಕ್ ಹೆಚ್ಚು ಮನಸ್ಸಿಗೆ ಬರುತ್ತದೆ. ಆ ಎರಡು ದಶಕಗಳಲ್ಲಿ, ಪಲ್ಸರ್ ಲೈನ್‌ಅಪ್ ಅನ್ನು ಕೆಲವು ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಪಲ್ಸರ್‌ನೊಂದಿಗಿನ ಬಜಾಜ್‌ನ ಪ್ರಸ್ತುತ ಮಾರ್ಗವು ಹೊಸ 250cc ಫ್ಲ್ಯಾಗ್‌ಶಿಪ್‌ಗಳನ್ನು ಮತ್ತು ಕಡಿಮೆ ಸಾಮರ್ಥ್ಯದ ವಿಭಾಗಗಳಲ್ಲಿ ಹೊಸ ಬೈಕುಗಳನ್ನು ಹೊರತಂದಿದೆ.

ಹೊಸ ಬಜಾಜ್ ಪಲ್ಸರ್ NS160 & NS200 ಬೈಕ್‌ಗಳ ಸಸ್ಪೆಕ್ಷನ್ ವಿಭಾಗದಲ್ಲಿ ಹೊಚ್ಚ ಹೊಸ ಅಪ್ ಸೈಡ್-ಡೌನ್ ಫೋರ್ಕ್ ಸೆಟಪ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬಜಾಜ್ ಪಲ್ಸರ್ ಬೈಕ್‌ಗಳಲ್ಲಿ, NS ಸರಣಿಯ ಪಲ್ಸರ್‌ಗಳು ಪ್ರಮುಖ N250 ಮತ್ತು 250F ನಿಂದ ಎರವಲು ಪಡೆದ ಹೊಸ ಗ್ರಿಮೆಕಾ ಬ್ರೇಕ್‌ಗಳನ್ನು ಸಹ ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 10, 2024, 11:20 [IST]
English summary
Bajaj pulsar ns400 teased ahead of official launch video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+