Bajaj Pulsar NS400Z: ಬಜಾಜ್ ಪಲ್ಸರ್ ಎನ್ಎಸ್400ಝಡ್ ವಿಡಿಯೋ ರಿವ್ಯೂ.. ಭರ್ಜರಿ ಬೈಕ್ ಗುರು!
ಭಾರತದ ಮಾರುಕಟ್ಟೆಯಲ್ಲಿ ಕೆಲವೇ ದಿನಗಳ ಹಿಂದೆ ಹೊಸ ಬಜಾಜ್ ಪಲ್ಸರ್ ಎನ್ಎಸ್400ಝಡ್ (Bajaj Pulsar NS400Z) ಬೈಕ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಪುಣೆಯ ಚಕನ್‌ನಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ಈ ಮೋಟಾರ್‌ಸೈಕಲ್‌ನ್ನು ಟೆಸ್ಟ್ ರೈಡ್ ಮಾಡುವ ಅವಕಾಶ ದೊರೆಯಿತು. ಇದರ ವಿಡಿಯೋ ರಿವ್ಯೂ ಇಲ್ಲಿದೆ.
ನೂತನ ಪಲ್ಸರ್ ಬೈಕ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿರುವ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟಪ್‌ನ ಎರಡೂ ಬದಿಗಳಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳಿವೆ. ಷಾಂಪೇನ್ ಬಣ್ಣದಲ್ಲಿ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳಿದ್ದು, ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಎಂಜಿನ್ ಗಾರ್ಡ್‌ನಲ್ಲಿ ವಿಶಿಷ್ಟ ಶೈಲಿಯ ಗ್ರಾಫಿಕ್ಸ್ ವಿನ್ಯಾಸವನ್ನು ಪಡೆದಿದೆ. ಸ್ಪ್ಲಿಟ್ ಸೀಟ್ ಸೆಟಪ್ ಕೂಡ ಒಳಗೊಂಡಿದ್ದು, ಹಿಂಬದಿಯು ಅತ್ಯುತ್ತಮವಾಗಿರುವ ಸ್ಪ್ಲಿಟ್ ಟೈಲ್‌ಲೈಟ್‌ಗಳನ್ನು ತನ್ನದಾಗಿಸಿಕೊಂಡಿದೆ.
ಈ ಪಲ್ಸರ್ ಎನ್ಎಸ್400ಝಡ್ ಹೊಸದಾಗಿರುವ ಎಲ್‌ಸಿಡಿ ಸ್ಕ್ರೀನ್ ಹೊಂದಿದೆ. ಅಲ್ಲಿ ಬ್ಲೂಟೂತ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಆಯ್ಕೆಗಳನ್ನು ವೀಕ್ಷಿಸಬಹುದು. ರೈಡ್-ಬೈ-ವೈರ್ ಎಂಬ ತಂತ್ರಜ್ಞಾನದ ಭಾಗವಾಗಿ ರೋಡ್, ರೈನ್, ಸ್ಪೋರ್ಟ್ ಮತ್ತು ಆಫ್-ರೋಡ್ ಎಂಬ ರೈಡಿಂಗ್ ಮೋಡ್‌ನ್ನು ಒಳಗೊಂಡಿದೆ. ಜೊತೆಗೆ ಡುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಹೊಸ ಬಜಾಜ್ ಪಲ್ಸರ್ ಎನ್ಎಸ್400ಝಡ್ ಮೋಟಾರ್‌ಸೈಕಲ್, 373.3 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 39.45 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 35 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ ನೊಟ್ಟಿಗೆ ಅಸಿಸ್ಟ್ & ಸ್ಲಿಪ್ಪರ್ ಕ್ಲಚ್‌ನ್ನು ಒಳಗೊಂಡಿದೆ.

ಪಲ್ಸರ್ ಎನ್ಎಸ್400ಝಡ್ ಬೈಕ್ ಮುಂಭಾಗ (ಫ್ರಂಟ್) 43 ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗ (ರೇರ್) 6-ಸೆಟಪ್ ಪ್ರಿ-ಲೋಡ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಫ್ರಂಟ್ 320 ಎಂಎಂ ಮತ್ತು ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನೂ ಪಡೆದಿದೆ. 17-ಇಂಚಿನ ವೀಲ್ಸ್ ಒಳಗೊಂಡಿದ್ದು, ಫ್ರಂಟ್ 110/70 ಹಾಗೂ ರೇರ್ 140/70 ಅಳತೆಯ ಟೈಯರ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








