Bajaj Pulsar NS400Z: ಯಾರೂ ಊಹಿಸದ ಬೆಲೆಗೆ ಬಜಾಜ್ ಪಲ್ಸರ್ NS400Z ಬಿಡುಗಡೆ!
ಬಜಾಜ್ ಕಂಪನಿಯು ಇಂದು ತನ್ನ ಬಹು ನಿರೀಕ್ಷಿತ ಪಲ್ಸರ್ NS400Z ಅನ್ನು ರೂ. 1.85 ಲಕ್ಷ(ಎಕ್ಸ್ ಶೋರೂಂ)ಕ್ಕೆ ಬಿಡುಗಡೆ ಮಾಡಿದೆ. ಈ ಹೊಸ ಬಿಡುಗಡೆಯೊಂದಿಗೆ, ಕಂಪನಿಯು ಪಲ್ಸರ್ ಲೈನ್-ಅಪ್‌ಗೆ ಪವರ್‌ಫುಲ್ ಮಾದರಿಯನ್ನು ಸೇರ್ಪಡೆ ಮಾಡಿದೆ. ಹೊಸ ಮೋಟಾರ್‌ಸೈಕಲ್ ಆಧುನಿಕ ಡಿಸೈನ್ ಜೊತೆಗೆ ಹೆಚ್ಚಿನ ಮಸ್ಕುಲರ್ ಲುಕ್ ಪಡೆದು ಹೊರಹೊಮ್ಮಿದೆ.
ಭಾರತದಲ್ಲಿ 'ಪಲ್ಸರ್' ಸಿರೀಸ್ 2001 ರಲ್ಲಿ ಸ್ಪೋರ್ಟ್ಸ್ ಮೋಟಾರ್‌ಸೈಕ್ಲಿಂಗ್ ವಿಭಾಗವನ್ನು ಸೃಷ್ಟಿಸಿತು. ಬಳಿಕ ಪಲ್ಸರ್ ಬ್ರಾಂಡಿಂಗ್‌ಗೆ' NS ಸಿರೀಸ್ ಎಂಟ್ರಿಕೊಟ್ಟು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ NS125, NS160, ಮತ್ತು NS200 ಅನ್ನು ಆಯಾ ವಿಭಾಗಗಳಲ್ಲಿ ಪ್ರಬಲ ಮೋಟಾರ್‌ಸೈಕಲ್‌ಗಳಾಗಿವೆ. ಆದ್ರೆ ದೊಡ್ಡ ಸಿಸಿ ವಿಭಾಗದಲ್ಲಿ ಪಲ್ಸರ್ NS ಇರಲಿಲ್ಲ. ಇದೀಗ ಈ ವಿಭಾಗಕ್ಕೂ ಎಂಟ್ರಿಕೊಟ್ಟು ಹೊಸ ಅಲೆ ಎಬ್ಬಿಸಿದೆ. ಹೊಸ ಬಜಾಜ್ ಪಲ್ಸರ್ NS400Z ಸಂಪೂರ್ಣ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದ್ದು, ಇದುವರೆಗಿನ ಅತಿದೊಡ್ಡ ಪಲ್ಸರ್ ಆಗಿ ಬಿಡುಗಡೆಯಾಗಿದೆ. ಹೊಸ ಪಲ್ಸರ್ NS400Z ಯಾವೆಲ್ಲ ವಿಶೇಷತೆಗಳನ್ನು ಪಡೆದಿದೆ ಎಂಬುದನ್ನು ಇಲ್ಲಿ ನೋಡೋಣ.

ಡಿಸೈನ್: ಬಜಾಜ್ ಪಲ್ಸರ್ NS400Z, ಗೋಲ್ಡ್ USD ಫೋರ್ಕ್ಸ್ ಮತ್ತು ಕಾರ್ಬನ್ ಫೈಬರ್ ಗ್ರಾಫಿಕ್ಸ್ ಪಡೆದುಕೊಂಡಿದೆ. ಅಂಡರ್‌ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಸ್ಪೋರ್ಟಿ ಟೈಲ್ ವಿಭಾಗದಲ್ಲಿ 'NS400' ಬ್ಯಾಡ್ಜಿಂಗ್‌ನೊಂದಿಗೆ ಏರೋಡೈನಾಮಿಕ್ ಡಿಸೈನ್ ಅನ್ನು ಪಡೆದುಕೊಂಡಿದೆ. ಸಿಗ್ನೇಚರ್ DRL ಜೊತೆಗೆ ಹೊಸ ಮುಂಭಾಗದ ಗ್ರಿಲ್ ಮೋಟಾರ್‌ಸೈಕಲ್‌ಗೆ ಪ್ರೀಮಿಯಂ ಟಚ್ ನೀಡಿದೆ.
ಎಂಜಿನ್: ಬಜಾಜ್ ಪಲ್ಸರ್ NS400Z, ತನ್ನ 373.27cc ಎಂಜಿನ್‌ನೊಂದಿಗೆ ಬರೋಬ್ಬರಿ 40 PS ಪವರ್ ಮತ್ತು 35 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಸುಗಮ ನಿರ್ವಹಣೆಗಾಗಿ ರೈಡ್-ಬೈ-ವೈರ್ ತಂತ್ರಜ್ಞಾನವನ್ನು ಸಹ ಹೊಂದಿದೆ. ರೋಡ್, ರೈನ್, ಸ್ಪೋರ್ಟ್, ಆಫ್‌ರೋಡ್ ಎಂಬ ರೈಡ್‌ಮೋಡ್‌ಗಳನ್ನು ನೀಡಲಾಗಿದೆ.
ತಾಂತ್ರಿಕ ವಿಶೇಷತೆಗಳು: ರೈಡ್ ಮೋಡ್‌ಗಳು ಮತ್ತು ಗೇರ್ ಬದಲಾವಣೆಗಳಿಗಾಗಿ ಸ್ಲಿಪ್ಪರ್ ಕ್ಲಚ್ ಅನ್ನು ನೀಡಲಾಗಿದೆ. ಸುಧಾರಿತ 43mm USD ಫೋರ್ಕ್‌ಗಳು ಮತ್ತು ಸ್ಮಾರ್ಟ್ 4 - ವೇ ಸ್ವಿಚ್‌ಗಳೊಂದಿಗೆ ರೈಡ್ - ಬೈ - ವೈರ್, ಎಲ್ಇಡಿ ಪ್ರೊಜೆಕ್ಟರ್ ಡಿಆರ್‌ಎಲ್‌ಗಳೊಂದಿಗಿನ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, ಬ್ಲಿಂಕರ್‌ಗಳ ಸಂಪೂರ್ಣ ವೈಶಿಷ್ಟ್ಯ ಭರಿತ ಸೂಟ್ ಅನ್ನು ಒದಗಿಸಲಾಗಿದೆ. ಮೋಟಾರ್‌ಸೈಕಲ್‌ನ ತಾಂತ್ರಿಕ ವಿಶೇಷತೆಗಳ ಹೊರತಾಗಿ, NS400Z ಬ್ಲೂಟೂತ್ ಸಂಪರ್ಕ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ ಮತ್ತು ಮ್ಯೂಸಿಕ್ ಕಂಟ್ರೋಲ್‌ಗಳನ್ನು ನೀಡಲಾಗಿದ್ದು, ಒಟ್ಟಾರೆ ಪ್ರೀಮಿಯಂ ಅನುಭವ ನೀಡುವುದಾಗಿ ಕಂಪನಿ ತಿಳಿಸಿದೆ.
ಅಡ್ಜಸ್ಟಬಲ್ ಲಿವರ್‌ಗಳು (ಐದು ಹಂತಗಳು) ಮತ್ತು ದೊಡ್ಡ ಡಿಸ್ಕ್ ಬ್ರೇಕ್‌ಗಳು (320 ಎಂಎಂ ಮುಂಭಾಗ, 230 ಎಂಎಂ ಹಿಂಭಾಗ), ಅಗಲವಾದ ಟೈರ್‌ಗಳು (110/70-17 ಮುಂಭಾಗ, 140/70 R17 ಹಿಂಭಾಗ), 1344mm ವ್ಹೀಲ್‌ಬೇಸ್, ಹೈಡ್ರೋಫಾರ್ಮ್ಡ್ ಟ್ಯೂಬ್ಯುಲರ್ ಸ್ಟ್ರೀಟ್‌ಫೈಟರ್ ಹ್ಯಾಂಡಲ್‌ಬಾರ್ ಕಡಿಮೆ ಕಂಪನದೊಂದಿಗೆ (NVH) ಉತ್ತಮ ಪರ್ಫಾಮೆನ್ಸ್‌ಗೆ ಸಹಕರಿಸುತ್ತದೆ.
ಸುರಕ್ಷತೆ: NS400Z ಮೋಟಾರ್‌ಸೈಕಲ್ ರೈಡರ್ ಸುರಕ್ಷತೆಯಲ್ಲಿ ರಾಜಿಯಾಗದೆ, ಸಂಯೋಜಿತ ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್, ವಿವಿಧ ಸವಾರಿ ಪರಿಸ್ಥಿತಿಗಳಲ್ಲಿ ವೀಲ್ ಲಾಕ್-ಅಪ್ ಅನ್ನು ತಡೆಯುತ್ತದೆ. ಬದಲಾಯಿಸಬಹುದಾದ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ (ಇಟಿಸಿ) ಸ್ಪೋರ್ಟ್ ಮತ್ತು ಆಫ್-ರೋಡ್ ಮೋಡ್‌ಗಳಲ್ಲಿ ಹಿಡಿತವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಬಿಡುಗಡೆಯ ಕುರಿತು ಮಾತನಾಡಿದ ಬಜಾಜ್ ಆಟೋ ಬ್ಯುಸಿನೆಸ್ ಅಧ್ಯಕ್ಷ ಸಾರಂಗ್ ಕಾನಡೆ, "ಪಲ್ಸರ್ NS400Z ಪಲ್ಸರ್ ಬ್ರಾಂಡ್‌ನ ಎಲ್ಲದರ ಸಾಕಾರವಾಗಿದೆ. ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಸ್ಪೋರ್ಟಿ ವಿನ್ಯಾಸ, ಪವರ್, ಪರ್ಫಾಮೆನ್ಸ್ ಮತ್ತು ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡುತ್ತದೆ. ಇದು ಭಾರತದಲ್ಲಿ ಕ್ರೀಡಾ ಮೋಟಾರ್‌ಸೈಕ್ಲಿಂಗ್‌ನ ಕೋಡ್‌ಗಳನ್ನು ಮರು ವ್ಯಾಖ್ಯಾನಿಸುವ ಅಂತಿಮ ಕಾರ್ಯಕ್ಷಮತೆಯ ಯಂತ್ರವಾಗಿದೆ ಎಂದರು.
ಪಲ್ಸರ್ NS400Z ತಮ್ಮ ಬೈಕಿಂಗ್ ಪ್ರಯಾಣವನ್ನು ಪ್ರಾರಂಭಿಸಲು ಅಥವಾ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ಸೈಕಲ್‌ಗೆ ಅಪ್‌ಗ್ರೇಡ್ ಮಾಡಲು ಬಯಸುವ ಸವಾರರಿಗೆ ಉತ್ತಮ ಮೋಟಾರ್‌ಸೈಕಲ್ ಆಗಿದೆ. ಹೊಸ ಪಲ್ಸರ್ NS400Z ನೊಂದಿಗೆ, ಪಲ್ಸರ್ ಕ್ರೀಡಾ ವಿಭಾಗದಲ್ಲಿ ತನ್ನ ಪ್ರಬಲ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದರು.


Click it and Unblock the Notifications








