ಬಹು ನಿರೀಕ್ಷಿತ ಆಜಾನುಬಾಹು ಪಲ್ಸರ್ NS400Z ಅಖಾಡಕ್ಕೆ: 1.85 ಲಕ್ಷಕ್ಕೆ ಏನೇನು ಸಿಗುತ್ತೆ ಗೊತ್ತಾ?
ಬಹುನಿರೀಕ್ಷಿತ ಬಜಾಜ್ ಪಲ್ಸರ್ NS400Z ಬೈಕ್ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಬಜಾಜ್ ಹೇಳುವ ಪ್ರಕಾರ ಇಲ್ಲಿಯ ತನಕ ಮಾರುಕಟ್ಟೆ ನೋಡಿರುವ ಪಲ್ಸರ್‌ನಲ್ಲಿ ಇದು ಅತಿ ದೊಡ್ಡ ಪಲ್ಸರ್ ಆಗಿದ್ದು, ಇಂದಿನ ಲೇಖನದಲ್ಲಿ ನಾವು ಈ ಬೈಕ್‌ನ ಟಾಪ್ ಪೀಚರ್‌ಗಳು ಯಾವುದೆಂದು ನೋಡೋಣ ಬನ್ನಿ.
ಎಂಜಿನ್; ಹೊಸ ಪಲ್ಸರ್‌ನ ಬಹುದೊಡ್ಡ ಹೈಲೈಟ್ ಎಂದರೆ ಅದು ಇದರ ಎಂಜಿನ್ ಎಂದೇ ಹೇಳಬಹುದು. ಇದರಲ್ಲಿ 373.27cc ಎಂಜಿನ್‌ನೊಂದಿಗೆ ಬರೋಬ್ಬರಿ 40 PS ಪವರ್ ಮತ್ತು 35 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಸುಗಮ ನಿರ್ವಹಣೆಗಾಗಿ ರೈಡ್ - ಬೈ - ವೈರ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ರೈಡಿಂಗ್ ಮೋಡ್: ಈ ಬಾರಿ ಹೊಸ ಪಲ್ಸರ್‌ನಲ್ಲಿ (Bajaj Pulsar NS400Z) ಹಲವಾರು ಹೊಸ ಹೊಸ ಫೀಚರ್‌ಗಳು ಸಹ ಇವೆ. ಅದರಲ್ಲಿ ಪ್ರಮುಖವಾದುದು ರೈಡಿಂಗ್ ಮೋಡ್‌ಗಳು. ಈ ಬೈಕ್‌ನಲ್ಲಿ ನಿಮಗೆ ರೋಡ್, ರೈನ್, ಸ್ಪೋರ್ಟ್, ಆಫ್‌ರೋಡ್ ಎಂಬ ರೈಡ್‌ಮೋಡ್‌ಗಳನ್ನು ನೀಡಲಾಗಿದ್ದು ನಿಮ್ಮ ಹವಾಮಾನಕ್ಕೆ, ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ನೀವು ರೈಡಿಂಗ್ ಮೋಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಡಿಸೈನ್: ಪಲ್ಸರ್ NS400Z ಡಿಸೈನ್ ಬಗ್ಗೆ ಮಾತನಾಡುವುದಾದ್ರೆ, ಮುಂಭಾಗದಲ್ಲಿ ಗೋಲ್ಡ್ USD ಫೋರ್ಕ್ಸ್ ಮತ್ತು ಕಾರ್ಬನ್ ಫೈಬರ್ ಗ್ರಾಫಿಕ್ಸ್ ಪಡೆದುಕೊಂಡಿದೆ. ಅಂಡರ್‌ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಸ್ಪೋರ್ಟಿ ಟೈಲ್ ವಿಭಾಗದಲ್ಲಿ 'NS400' ಬ್ಯಾಡ್ಜಿಂಗ್‌ನೊಂದಿಗೆ ಏರೋಡೈನಾಮಿಕ್ ಡಿಸೈನ್ ಅನ್ನು ಪಡೆದುಕೊಂಡಿದೆ. ಸಿಗ್ನೇಚರ್ DRL ಜೊತೆಗೆ ಹೊಸ ಮುಂಭಾಗದ ಗ್ರಿಲ್ ಮೋಟಾರ್‌ಸೈಕಲ್‌ಗೆ ಪ್ರೀಮಿಯಂ ಟಚ್ ನೀಡಿದೆ.

ಸುರಕ್ಷತೆ: ಬಜಾಜ್ ತನ್ನ ಹೊಸ ಪಲ್ಸರ್ NS400Z ಬೈಕ್‌ನಲ್ಲಿ ಸುರಕ್ಷತೆಗೂ ಸಹ ಹೆಚ್ಚಿನ ಒತ್ತನ್ನು ನೀಡಿದೆ. NS400Z ಮೋಟಾರ್‌ಸೈಕಲ್ ರೈಡರ್ ಸುರಕ್ಷತೆಯಲ್ಲಿ ರಾಜಿಯಾಗದೆ, ಸಂಯೋಜಿತ ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್, ವಿವಿಧ ಸವಾರಿ ಪರಿಸ್ಥಿತಿಗಳಲ್ಲಿ ವೀಲ್ ಲಾಕ್-ಅಪ್ ಅನ್ನು ತಡೆಯುತ್ತದೆ. ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಸ್ಪೋರ್ಟಿ ವಿನ್ಯಾಸ, ಪವರ್, ಪರ್ಫಾಮೆನ್ಸ್ ಮತ್ತು ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಬೆಲೆ: ಬಜಾಜ್ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ ಎಂದು ಹೇಳಬಹುದು. ಈ ಬೈಕ್ ನಿಮಗೆ ಎಕ್ಸ್ ಶೋ ರೂಮ್ 1.85 ಲಕ್ಷಕ್ಕೆ ಲಭ್ಯವಾಗಲಿದೆ. ಈ ಬೆಲೆಯಲ್ಲಿ 400cc ಬೈಕ್ ಸಿಗುತ್ತಿರುವುದು ಇದೇ ಮೊದಲು ಎನ್ನಬಹುದು. ಈ ಬೆಲೆಯಂತೂ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಲಿದೆ ಎಂಬುದು ಎಲ್ಲರ ಅಭಿಪ್ರಾಯ.

ಇವಿಷ್ಟು ಮಾತ್ರವಲ್ಲದೇ, ಇನ್ನೂ ಈ ಬೈಕ್‌ನಲ್ಲಿ ಅಡ್ಜಸ್ಟಬಲ್ ಲಿವರ್‌ಗಳು (ಐದು ಹಂತಗಳು) ಮತ್ತು ದೊಡ್ಡ ಡಿಸ್ಕ್ ಬ್ರೇಕ್‌ಗಳು (320 ಎಂಎಂ ಮುಂಭಾಗ, 230 ಎಂಎಂ ಹಿಂಭಾಗ), ಅಗಲವಾದ ಟೈರ್‌ಗಳು (110/70-17 ಮುಂಭಾಗ, 140/70 R17 ಹಿಂಭಾಗ), 1344mm ವ್ಹೀಲ್‌ಬೇಸ್, ಹೈಡ್ರೋಫಾರ್ಮ್ಡ್ ಟ್ಯೂಬ್ಯುಲರ್ ಸ್ಟ್ರೀಟ್‌ಫೈಟರ್ ಹ್ಯಾಂಡಲ್‌ಬಾರ್‌ಗಳು ಸಹ ಸಿಗುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








