ದಿನಕ್ಕೆ 100 ಕಿ.ಮೀ ಓಡಿಸಬಹುದು... ಒಂದು ರೂ. ಖರ್ಚಿಲ್ಲ, ಹೊಸ ಸ್ಕೂಟರ್ ವಿಶೇಷತೆಗಳು!
BattRE ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯು 'ಸ್ಟೋರಿ ಎಪಿಕ್' ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 103 ಕಿ.ಮೀ ರೇಂಜ್ ನೀಡುತ್ತದೆ. ಇದು ದೈನಂದಿನ ನಗರ ಪ್ರಯಾಣಕ್ಕೆ ಸಾಕಾಗುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗವು ಗಂಟೆಗೆ 65 ಕಿ.ಮೀ. ಇದೆ. ಕಂಪನಿಯು ಇದರ ಬ್ಯಾಟರಿ ಮೇಲೆ 3 ವರ್ಷಗಳು ಅಥವಾ 30,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ. ಸ್ಕೂಟರ್ ಕುರಿತ ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಭಾರತದಲ್ಲಿ ಹೊಸ ಸ್ಟೋರಿ ಎಪಿಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.84,999 ಎಕ್ಸ್ ಶೋರೂಂ ಆಗಿದೆ. ಈ ಸ್ಕೂಟರ್‌ನಲ್ಲಿನ 60V 40Ah ಬ್ಯಾಟರಿ ಪ್ಯಾಕ್ IP67-ರೇಟೆಡ್ ಆಗಿರುವುದರಿಂದ ಇದು ಧೂಳು ಮತ್ತು ಜಲನಿರೋಧಕವಾಗಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ನೀಡಬೇಕೆಂದು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಕೂಟರ್‌ನಲ್ಲಿ ಅಳವಡಿಸಿರುವ ಬ್ಯಾಟರಿಯು ಲಿಥಿಯಂ-ಐಯಾನ್ ಬ್ಯಾಟರಿಯಾಗಿರುವುದರಿಂದ ಹೆಚ್ಚಿನ ಸುರಕ್ಷತೆ ಇರುತ್ತದೆ. ಬ್ಯಾಟರಿ ಪ್ಯಾಕ್ ಸ್ವತಃ ಡಿಟ್ಯಾಚೇಬಲ್ ಆಗಿದ್ದು, ಪಾರ್ಕಿಂಗ್ ಜಾಗದಲ್ಲಿ ಚಾರ್ಜ್ ಮಾಡಲು ಗ್ರಾಹಕರು ಎಲೆಕ್ಟ್ರಿಕ್ ಸಾಕೆಟ್ ಹೊಂದಿಲ್ಲದಿದ್ದರೂ ಚಾರ್ಜ್ ಮಾಡಲು ಪರದಾಡುವ ಅವಶ್ಯಕತೆ ಇಲ್ಲ. ಬ್ಯಾಟರಿಯನ್ನು ಮಾತ್ರ ಕೊಂಡೊಯ್ದು ಚಾರ್ಜ್ ಮಾಡಿಕೊಳ್ಳಬಹುದು.
ಇದರಲ್ಲಿ ನೀಡಿರುವ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕಲ್ಸ್ಟರ್ ದೂರ, ಬ್ಯಾಟರಿ ತಾಪಮಾನ ಮತ್ತು ಚಾರ್ಜ್ ಮಾಡುವ ಸಮಯದಂತಹ ಮಾಹಿತಿಯನ್ನು ತೋರಿಸುತ್ತದೆ. ಸ್ಕೂಟರ್‌ನ ಬಾಳಿಕೆ ಹೆಚ್ಚಿಸಲು, ಬಾಡಿಯನ್ನು ಲೋಹದಿಂದ ತಯಾರಿಸಲಾಗಿದೆ. ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು BattRE ಕಂಪನಿ ಹೇಳಿದೆ.

ಎಕ್ರು ಯೆಲ್ಲೋ, ಸ್ಟಾರ್ಮಿ ಗ್ರೇ, ಮಿಡ್‌ನೈಟ್ ಬ್ಲ್ಯಾಕ್, ಕ್ಯಾಂಡಿ ರೆಡ್, ಸ್ಟಾರ್‌ಲೈಟ್ ಬ್ಲೂ, ಐಸ್ ಬ್ಲೂ, ಪರ್ಲ್ ವೈಟ್, ಕಾಸ್ಮಿಕ್ ಬ್ಲೂ, ಗನ್‌ಮೆಟಲ್, ಬ್ಲೇಜಿಂಗ್ ಬ್ರೋಂಜ್, ಹಂಟರ್ ಗ್ರೀನ್ ಬ್ಲಾಕ್ ಮತ್ತು ಗೋಲ್ಡ್ ರಶ್ ಸೇರಿದಂತೆ ಸ್ಕೂಟರ್ 12 ಬಣ್ಣಗಳ ಆಯ್ಕೆಗಳಲ್ಲಿ ಹೊಸ ಸ್ಟೋರಿ ಎಪಿಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಲಭ್ಯವಿದೆ.
BattRE ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥಾಪಕ ನಿಶ್ಚಲ್ ಚೌಧರಿ ಮಾತನಾಡಿ, ಸ್ಟೋರಿ EPIC ಅನ್ನು ಮಾರುಕಟ್ಟೆಗೆ ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಈ ಸ್ಕೂಟರ್ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ, ಅದು ಪರಿಸರ ಸ್ನೇಹಿ ಮಾತ್ರವಲ್ಲದೆ ಪ್ರಾಯೋಗಿಕ, ವಿಶ್ವಾಸಾರ್ಹ ಸವಾರಿಯನ್ನು ಒದಗಿಸುತ್ತದೆ ಎಂದರು.
ಭಾರತದಲ್ಲಿ ಇಂಧನ ಬೆಲೆಗಳ ಏರಿಕೆ ಸೇರಿದಂತೆ ಪೆಟ್ರೋಲ್ ಚಾಲಿತ ವಾಹನಗಳ ನಿರ್ವಹಣಾ ವೆಚ್ಚವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹಿಸುವಂತೆ ಮಾಡಿದೆ. ಬೇಡಿಕೆ ಹೆಚ್ಚಾದಂತೆ ಎಲೆಕ್ಟ್ರಿಕ್ ವಾಹನ ತಯಾರಕಾ ಕಂಪನಿಗಳು ಕೂಡ ಹೆಚ್ಚಾಗುತ್ತಿವೆ. ಇದೀಗ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇಷ್ಟೆಲ್ಲಾ ಫೀಚರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಸ್ಕೂಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








