ಟಾಪ್-3 125cc ಮೈಲೇಜ್ ಬೈಕ್‌ಗಳು: ಅಗ್ಗದ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳು, ಹಲವರ ಫೇವರೆಟ್!
ಭಾರತದಲ್ಲಿ 125 ಸಿಸಿ ಸೆಗ್ಮೆಂಟ್ ಮೋಟಾರ್‌ಸೈಕಲ್‌ಗಳು ಮುಖ್ಯವಾಗಿ ಮೈಲೇಜ್ ಬೈಕ್ ವಿಭಾಗಕ್ಕೆ ಸೇರುತ್ತವೆ. ಇವುಗಳನ್ನು ಅಗ್ಗದ ಬೆಲೆಯಲ್ಲಿ ಬೆಸ್ಟ್ ಫೀಚರ್ಸ್ ಸೇರಿದಂತೆ ಸೌಕರ್ಯಯುತ ಪ್ರಯಾಣಕ್ಕಾಗಿ ನಿರ್ಮಿಸಲಾಗುತ್ತದೆ. ಸದ್ಯ ಭಾರತದಲ್ಲಿ ಈ ವಿಭಾಗಕ್ಕಾಗಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ಒಂದೊಂದು ಮೋಟಾರ್‌ಸೈಕಲ್ ಅನ್ನು ಹೊಂದಿವೆ. ಅದರಲ್ಲೂ ಟಾಪ್ - 3 ಅತ್ಯಂತ ಕೈಗೆಟುಕುವ 125 ಸಿಸಿ ಮೋಟಾರ್ ಸೈಕಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವು ಉತ್ತಮ ಡಿಸೈನ್, ಅತ್ತುತ್ತಮ ಮೈಲೇಜ್ ಹಾಗೂ ಅಗ್ಗದ ಬೆಲೆಯ ಬೆಸ್ಟ್ ಬೈಕ್‌ಗಳಾಗಿವೆ.
ಈ ಬೈಕುಗಳು ಸರಳವಾದ ಸ್ಟೈಲಿಂಗ್, ಕನಿಷ್ಠ ಫೀಚರ್ಸ್ ಜೊತೆಗೆ 125 ಸಿಸಿ ಎಂಜಿನ್‌ನೊಂದಿಗೆ ಬರುತ್ತವೆ. ಇವುಗಳಲ್ಲಿ ಪ್ರಸ್ತುತ, ಅತ್ಯಂತ ಕೈಗೆಟುಕುವ 125ಸಿಸಿ ಮೋಟಾರ್ ಸೈಕಲ್ ಎಂದರೆ ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor) ಆಗಿದೆ. ಅತ್ಯಂತ ಕೈಗೆಟುಕುವ 125 ಸಿಸಿ ಬೈಕ್ ಅನ್ನು ಹುಡುಕುತ್ತಿರುವ ಖರೀದಿದಾರರು ಹೀರೋ ಸೂಪರ್ ಸ್ಪ್ಲೆಂಡರ್ ಅನ್ನು ಪರಿಶೀಲಿಸಬಹುದು.

ಹೀರೋ ಸೂಪರ್ ಸ್ಪ್ಲೆಂಡರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 81,018 ಗಳಾಗಿದೆ. ಬೈಕ್‌ನಲ್ಲಿ ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಯುಎಸ್‌ಬಿ ಚಾರ್ಜರ್ ಮತ್ತು ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಫೀಚರ್ಸ್ ಸಿಗಲಿವೆ. ಈ ಬೈಕ್ 125 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 10.4 ಬಿಹೆಚ್ ಪವರ್ ಮತ್ತು 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಹೀರೋ ಗ್ಲಾಮರ್: ಖರೀದಿದಾರರು ಪರಿಶೀಲಿಸಬಹುದಾದ ಮುಂದಿನ ಮೋಟಾರ್‌ಸೈಕಲ್ ಹೀರೋ ಗ್ಲಾಮರ್ (Hero Glamour) ಆಗಿದ್ದು, ಹೀರೋ ಗ್ಲಾಮರ್ ಬೆಲೆಯು ಬೇಸ್ ಡ್ರಮ್ ಬ್ರೇಕ್ ರೂಪಾಂತರಕ್ಕಾಗಿ ರೂ 82,970 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ. ಹೀರೋ ಗ್ಲಾಮರ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಹೀರೋ ಗ್ಲಾಮರ್ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು ಡಿಜಿಟಲ್ ಡಿಸ್ಪ್ಲೆ ಹೊಂದಿದ್ದು, ಇದರಲ್ಲಿ ಫ್ಯೂಯಲ್ ಇಂಡಿಕೇಟರ್, ಟ್ರಿಪ್ ಮೀಟರ್‌ನಂತಹ ಮಾಹಿತಿ ತೋರಿಸುತ್ತದೆ. 124cc ಸಿಂಗಲ್ - ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಈ ಬೈಕ್ ಐದು-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. 10.3BH ಪವರ್ ಮತ್ತು 10.4Nm ಟಾರ್ಕ್ ಉತ್ಪಾದಿಸುತ್ತದೆ.
ಹೋಂಡಾ ಶೈನ್ 125: ಹೋಂಡಾ ಶೈನ್ 125 ಬೆಲೆಯು ರೂ. 82,069 (ಎಕ್ಸ್ ಶೋ ರೂಂ)ನಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯೊಂದಿಗೆ ಸಹ ಲಭ್ಯವಿದ್ದು ಬೆಲೆ ತುಸು ಹೆಚ್ಚಾಗುತ್ತದೆ. ಇದರಲ್ಲಿ ಯುಎಸ್‌ಬಿ ಚಾರ್ಜರ್, ಎಲ್ಇಡಿ ಹೆಡ್ ಲ್ಯಾಂಪ್‌ನಂತಹ ಕೆಲ ವೈಶಿಷ್ಟ್ಯಗಳು ಸಿಗುವುದಿಲ್ಲ. 123.94 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 10.59 ಬಿಹೆಚ್ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಸದ್ಯ ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಬೆಸ್ಟ್ ಮೈಲೇಜ್ ಬೈಕ್‌ಗಳಲ್ಲಿ ಈ ಮೋಟಾರ್‌ಸೈಕಲ್‌ಗಳು ಅಗ್ರ ಮೂರು ಸ್ಥಾನಗಳಲ್ಲಿ ನಿಲ್ಲುತ್ತವೆ. ಮೈಲೇಜ ಹಾಗೂ ಡಿಸೈನ್ ವಿಷಯದಲ್ಲಿ ಉತ್ತಮವಾಗಿದ್ದು, ಅಗ್ಗದ ಬೆಲೆಯ ಗ್ರಾಹಕರ ಫೇವರೆಟ್ ಆಯ್ಕೆಯಾಗಿವೆ. ಈ ಮೂರು ಮೋಟಾರ್‌ಸೈಕಲ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications