ಅತ್ಯಧಿಕ ಮೈಲೇಜ್ ನೀಡುವ 2 ಬೈಕ್‌ಗಳು: ಒಮ್ಮೆ ಟ್ಯಾಂಕ್ ತುಂಬಿಸಿ... 1 ತಿಂಗಳು ಓಡಿಸಿ!
ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಹೆಚ್ಚಾಗಿ ಮೈಲೇಜ್ ಮೋಟಾರ್ ಸೈಕಲ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇವು ಬಜೆಟ್ ಬೆಲೆಯಲ್ಲಿ ಸಿಗಲಿದ್ದು, ನಿರ್ವಹಣ ವೆಚ್ಚ ಕೂಡ ತೀರಾ ಕಡಿಮೆ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಅತ್ಯಧಿಕ ಮೈಲೇಜ್‌ನೊಂದಿಗೆ ಸಿಗುವ ಬೈಕ್‌ಗಳು ಎರಡಿವೆ. ಅವುಗಳೆಂದರೆ ಬಜಾಜ್ ಪ್ಲಾಟಿನಾ ಹಾಗೂ ಟಿವಿಎಸ್ ಸ್ಪೋರ್ಟ್, ಇವು ಪ್ರಸ್ತುತ ಮೈಲೇಜ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಭಾರೀ ಸದ್ದು ಮಾಡುತ್ತಿರುವ ಬೈಕ್‌ಗಳಾಗಿವೆ. ಇವೆರಡರ ಬೆಲೆ, ಎಂಜಿನ್ ಪವರ್, ಮೈಲೇಜ್ ಸೇರಿದಂತೆ ಅವುಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಬಜಾಜ್ ಪ್ಲಾಟಿನಾ 100: ಬಜಾಜ್ ಪ್ಲಾಟಿನಾ ಬೈಕ್ 102 ಸಿಸಿ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್ ಸಹಾಯದೊಂದಿಗೆ 7.79 ಬಿಹೆಚ್‌ಪಿ ಪವರ್ ಮತ್ತು 8.34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ವಿಷಯಕ್ಕೆ ಬಂದರೆ ಇದು ಪ್ರತಿ ಲೀಟರ್‌ಗೆ 72 ಕಿ.ಮೀ. ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಬಜಾಜ್ ಪ್ಲಾಟಿನಾ 100 ಬೈಕ್ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ, ಇದು 61,617 ರೂ. ನಿಂದ 66,440 ರೂ.ಗಳ (ಎಕ್ಸ್ ಶೋರೂಂ, ದೆಹಲಿ) ಬೆಲೆಯಲ್ಲಿ ಲಭ್ಯವಿದೆ. ಈ ಬೈಕ್‌ನಲ್ಲಿ ಗ್ರಾಹಕರಿಗೆ 11 ಲೀ. ಸಾಮರ್ಥ್ಯದ ಇಂಧನ ಟ್ಯಾಂಕ್ ಸಿಗಲಿದೆ.
ಟಿವಿಎಸ್ ಸ್ಪೋರ್ಟ್: ಟಿವಿಎಸ್ ಕಂಪನಿಯ ಜನಪ್ರಿಯ 'ಸ್ಪೋರ್ಟ್' ಬೈಕ್ 109.7 ಸಿಸಿ, ಬಿಎಸ್ 6 ಎಂಜಿನ್ ಹೊಂದಿದ್ದು, ಕೈಗೆಟುಕುವ ಬೆಲೆ ಮತ್ತು ಆರಾಮದಾಯಕ ಸವಾರಿಗೆ ಹೆಸರುವಾಸಿಯಾಗಿದೆ. ಇದು ಪ್ರತಿ ಲೀಟರ್‌ಗೆ 70 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಟಿವಿಎಸ್ ಕಂಪನಿ ಹೇಳಿಕೊಂಡಿದೆ.

ಈ ಬೈಕಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಗ್ರಾಹಕರು 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದ್ದು, 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಇದು 8.07 ಪಿಎಸ್ ಪವರ್ ಮತ್ತು 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ, ಇದು 70-80 ಕಿ.ಮೀ ಮೈಲೇಜ್ ನೀಡುತ್ತದೆ.
ಈ ಟಿವಿಎಸ್ ಸ್ಪೋರ್ಟ್ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದ್ದು, ಇದು 10 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 59,881 ರಿಂದ ರೂ. 71,223 ಗಳಾಗಿದೆ.

ಮೈಲೇಜ್ ಬೈಕ್ ಗಳು ಸಾಮಾನ್ಯವಾಗಿ ಹಗುರವಾಗಿರುತ್ತವೆ. ತೆಳುವಾದ ಟೈರ್‌ಗಳಿಂದಾಗಿ, ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಮೋಟಾರ್ ಸೈಕಲ್ ಗರಿಷ್ಠ ಮೈಲೇಜ್ ನೀಡುತ್ತದೆ. ಇತರ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಪ್ರತಿ ತಿಂಗಳು ಇಂಧನ ವೆಚ್ಚವನ್ನು ನಿಮಗೆ ಕಡಿಮೆ ಮಾಡುತ್ತದೆ, ಇದು ಗ್ರಾಹಕರ ಜೇಬಿಗೆ ಭಾರವಾಗುವುದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications