Bluarmor: ಬೆಂಗಳೂರಿನ ಕಂಪನಿಯಿಂದ ಹೆಲ್ಮೆಟ್ ಇಂಟರ್‌ಕಾಮ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಬೆಂಗಳೂರು (Bengaluru) ಮೂಲದ ಸ್ಟಾರ್ಟ್‌ಅಪ್ ಬ್ಲುವರ್‌ಮರ್ (Bluarmor), ಶನಿವಾರ ಹೆಲ್ಮೆಟ್ ಇಂಟರ್‌ಕಾಮ್ ಡಿವೈಸ್ (ಅಂತರಸಂಪರ್ಕ ಸಾಧನ) ಸಿ50 ಪ್ರೊ (C50 Pro) ಬಿಡುಗಡೆ ಮಾಡಿದೆ. ಇದು ರೂ.24,999 ಬೆಲೆಯನ್ನು ಹೊಂದಿದೆ. ಆಸಕ್ತರು, ಬ್ಲುವರ್‌ಮರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೂತನ ಇಂಟರ್‌ಕಾಮ್ ಡಿವೈಸ್‌ನ್ನು ಬುಕ್ ಮಾಡಬಹುದು. ಸೆಪ್ಟೆಂಬರ್ 28ರಿಂದ ವಿತರಣೆಗಳು ಶುರುವಾಗಲಿದೆ. ಹೊಸ ಬ್ಲುವರ್‌ಮರ್ ಸಿ50 ಪ್ರೊ ಇಂಟರ್‌ಕಾಮ್ ಮುಂದಿನ ತಲೆಮಾರಿನ (ನೆಕ್ಸ್ಟ್ ಜನರೇಷನ್) ವಿನ್ಯಾಸವನ್ನು ಆಧರಿಸಿದೆ. ಸದ್ಯ ಖರೀದಿಗೆ ಲಭ್ಯವಿರುವ ಬ್ಲುವರ್‌ಮರ್ ಸಿ30 ಇಂಟರ್‌ಕಾಮ್‌ಗೆ ಹೋಲಿಕೆ ಮಾಡಿದರೆ, ಹೆಚ್ಚು ಗ್ರಾಹಕ ಸ್ನೇಹಿಯಾಗಿದೆ.
ಬ್ಲುವರ್‌ಮರ್ ಸಿ30 (Bluarmor C30) ಇಂಟರ್‌ಕಾಮ್‌ಗಿಂತ ಹೊಸ ಬ್ಲುವರ್‌ಮರ್ ಸಿ50 ಪ್ರೊ (Bluarmor C50 Pro) ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿದೆ. ಆದಾಗ್ಯೂ ಅಧಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಳಕೆದಾರರ ಒಂದಷ್ಟು ಸಲಹೆ ಮೇರೆಗೆ ನುರಿತ ಎಂಜಿನಿಯರ್‌ಗಳ ತಂಡ ಈ ಇಂಟರ್‌ಕಾಮ್‌ನ್ನು ತಯಾರಿಸಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಇದರ ಬ್ಯಾಟರಿ 16 ಗಂಟೆಗಳವರೆಗೆ ಕೆಲಸ ಮಾಡುತ್ತದೆ.

ಈ ಬ್ಲುವರ್‌ಮರ್ ಸಿ50 ಪ್ರೊ ಇಂಟರ್‌ಕಾಮ್‌ನಲ್ಲಿರುವ ಪೋರ್ಟ್‌ವೇವ್ ತಂತ್ರಜ್ಞಾನ (PORTWEAVE Technology) ಫೋನ್‌ಗಳು, ಆಕ್ಷನ್ ಕ್ಯಾಮೆರಾಗಳು, ಜಿಪಿಎಸ್ ಯುನಿಟ್ ಹಾಗೂ ಇತರೆ ಇಂಟರ್‌ಕಾಮ್ ಡಿವೈಸ್‌ಗಳನ್ನು ಸುಲಭವಾಗಿ ಸಂಪರ್ಕಿಸುತ್ತದೆ. ಇದನ್ನು 3 ಬಟನ್ ಮಾಡ್ಯುಲರ್ ಇಂಟರ್ಫೇಸ್ ಮತ್ತು ವೈರ್‌ಲೆಸ್ ಟಿ ಸ್ಟಿಕ್‌ನ್ನು ಬಳಸುವ ಮೂಲಕ ನಿಯಂತ್ರಿಸಬಹುದು.
ನೂತನ ಬ್ಲುವರ್‌ಮರ್ ಸಿ50 ಪ್ರೊ (Bluarmor C50 Pro) ಇಂಟರ್‌ಕಾಮ್‌ನ್ನು ಮ್ಯಾಗ್ನೆಟಿಕ್ ಡಾಕ್ ಹಾಗೂ ಕ್ಲಿಕ್‌ಡಾಕ್ ಸಿಸ್ಟಮ್ ಸಹಾಯದಿಂದ ಹೆಲ್ಮೆಟ್ ಮೇಲೆ (ಹಿಂಭಾಗ) ಅಚ್ಚುಕಟ್ಟಾಗಿ ಜೋಡಿಸಬಹುದಾಗಿದ್ದು, ವೇಗವಾಗಿ ಗಾಳಿ ಬಿಸುವಾಗಲು ಅಲುಗಾಡುವುದಿಲ್ಲ. ಜೊತೆಗೆ ಐಪಿ-67 ರೇಟಿಂಗ್ ಹೊಂದಿರುವುದರಿಂದ ಎಂತಹ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಲ್ಲಿಯೂ ಬಳಕೆ ಮಾಡಬಹುದು.
ಇದರಲ್ಲಿ ರೈಡ್‌ಗ್ರಿಡ್ 2.0 ಮೆಶ್ ಇಂಟರ್‌ಕಾಮ್ ಸಿಸ್ಟಮ್ (RIDEGRID 2.0 Mesh Intercom System) ಬಳಕೆ ಮಾಡಲಾಗಿದ್ದು, ಧ್ವನಿ (ವಾಯ್ಸ್) ಸ್ಪಷ್ಟವಾಗಿ ಕೇಳಲು ನೆರವಾಗುತ್ತದೆ. ಹೆಚ್‌ಡಿ ಆಡಿಯೋಗಾಗಿ (ಧ್ವನಿ ಗ್ರಹಣ) ಟ್ಯೂನ್ಡ್ ಬೈ ಬ್ಲೂ ಸಿಗ್ನೇಚರ್ ಸೌಂಡ್ ಸ್ಪೀಕರ್‌ಗಳನ್ನು (Tuned by BLU Signature Sound Speakers) ಒಳಗೊಂಡಿದೆ.
ಬ್ಲುವರ್‌ಮರ್ ಸಿ50 ಪ್ರೊ ಇಂಟರ್‌ಕಾಮ್ ಡಿವೈಸ್‌ನಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕ್ರ್ಯಾಶ್-ಡಿಟೆಕ್ಷನ್ (ಅಪಘಾತ ಪತ್ತೆ) ವೈಶಿಷ್ಟ್ಯವನ್ನು ಪಡೆದಿದೆ. ಸವಾರರಿಗೆ ತೊಂದರೆಯಾದಾಗ ಎಸ್ಒಎಸ್ ಎಚ್ಚರಿಕೆಯನ್ನು (SOS Alert) ಅವರ ಹತ್ತಿರದವರಿಗೆ ರವಾನಿಸುತ್ತದೆ. ಇದು ಸಂದೇಶ ಅಥವಾ ಕರೆಯ ರೂಪದಲ್ಲಿ ಇರಬಹುದು. ಜೊತೆಗೆ ಎಲ್ಇಡಿ ವಿಸಿಬಿಲಿಟಿ ಟೆಕ್‌ನ್ನು ಪಡೆದಿದೆ.
ಒಟ್ಟಾರೆ, ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಬ್ಲುವರ್‌ಮರ್ ಕಂಪನಿ ತಯಾರಿಸಿರುವ ಈ 'ಸಿ50' ಹೆಲ್ಮೆಟ್ ಇಂಟರ್‌ಕಾಮ್ ಡಿವೈಸ್ ಸಾಕಷ್ಟು ಅತ್ಯಾಧುನಿಕವಾಗಿದೆ. ಎಂತಹ ಹವಾಮಾನ ಪರಿಸ್ಥಿತಿಯಲ್ಲಿಯೂ ಬಳಸಲು ಸಾಧ್ಯವಾಗಿರುವುದರಿಂದ ಮೋಟಾರ್‌ಸೈಕಲ್ ಉತ್ಸಾಹಿಗಳು ಖರೀದಿಸಬಹುದು. ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಯಾವ ರೀತಿಯಲ್ಲಿ ಬೇಡಿಕೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications