ಹೊಸ ಪ್ರೀಮಿಯಂ ಸ್ಕೂಟರ್ ಬಿಡುಗಡೆಗೆ ಸಜ್ಜು: ಬುಕಿಂಗ್ಸ್ ಪ್ರಾರಂಭ... ಬೆಲೆ, ವಿಶೇಷತೆಗಳೇನು?

ಬಿಎಂಡಬ್ಲ್ಯು ಮೋಟಾರ್ಡ್ (BMW Motorrad)ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆದ BMW CE 04 ಅನ್ನು ಇದೇ ಜುಲೈ 24ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಕಂಪನಿ ಘೋಷಿಸಿದೆ. ಸದ್ಯ ಬಿಡುಗಡೆಗೂ ಮುನ್ನ ಈ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಪ್ರೀ-ಲಾಂಚ್ ಬುಕಿಂಗ್‌ಗಳನ್ನು ತೆರೆಯಲಾಗಿದೆ. ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಗರ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದರ ಫ್ಯೂಚರಿಸ್ಟಿಕ್ ಡಿಸೈನ್, ಸುಧಾರಿತ ತಂತ್ರಜ್ಞಾನ ಮತ್ತು ಅತ್ಯುತ್ತಮ ಪರ್ಫಾಮೆನ್ಸ್ ಎಂಥವರನ್ನು ಆಕರ್ಷಿಸಲಿದೆ ಎಂದು ಕಂಪನಿ ಭರವಸೆ ನೀಡಿದೆ.

ಹೊಸ BMW CE 04 ಅನ್ನು ಬುಕ್ ಮಾಡಲು ಗ್ರಾಹಕರು ತಮ್ಮ ಹತ್ತಿರದ ಅಧಿಕೃತ BMW Motorrad ಡೀಲರ್‌ಶಿಪ್ ಅನ್ನು ಸಂಪರ್ಕಿಸಬಹುದು. ಸ್ಕೂಟರ್ ಬುಕ್ ಮಾಡಲು ಆಸಕ್ತಿ ಹೊಂದಿರುವ ಗ್ರಾಹಕರು, ಅದರ ಪರ್ಫಾಮೆನ್ಸ್, ಬ್ಯಾಟರಿ, ರೇಂಜ್, ವೈಶಿಷ್ಟ್ಯಗಳ ಬಗ್ಗೆ ತಿಳಿಯುವುದು ಮುಖ್ಯ. ನಿಮಗಾಗಿ ಸ್ಕೂಟರ್‌ನ ಎಲ್ಲಾ ವಿವರಗಳನ್ನು ಇಲ್ಲಿ ನೀಡಿದ್ದೇವೆ.

bmw-ce-04-electric-scooter-bookings-open

ಡಿಸೈನ್: ಬಿಎಂಡಬ್ಲ್ಯು ಸಿಇ 04 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಸ್ಕೂಟರ್‌ನ ಸುತ್ತಲೂ ದೊಡ್ಡ ಏಪ್ರನ್ ಮತ್ತು ಫ್ಲಾಟ್ ಬಾಡಿ ಪ್ಯಾನೆಲ್‌ಗಳು ಆಕರ್ಷಣೆಯನ್ನು ಹೆಚ್ಚಿಸಿವೆ. 780 ಎಂಎಂ ಸೀಟ್ ಎತ್ತರದೊಂದಿಗೆ ಇಬ್ಬರು ಆರಾಮವಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಲಾವಕಾಶವನ್ನು ಒದಗಿಸುತ್ತದೆ. ಇದರ ಬೆಂಚ್ ತರಹದ ಸೀಟ್ ಗಮನ ಸೆಳೆಯುವ ಮತ್ತೊಂದು ವಿನ್ಯಾಸ ಅಂಶವಾಗಿದೆ. ಒಟ್ಟಾರೆ ಇದು ಸೈನ್ಸ್-ಫಿಕ್ಷನ್ ಸಿನಿಮಾದಲ್ಲಿ ಕಂಡುಬರುವ ಫ್ಯೂಚರಿಸ್ಟಿಕ್ ವಾಹನದಂತೆ ಕಾಣುತ್ತದೆ.

ಸ್ಕೂಟರ್ 15 ಇಂಚಿನ ವೀಲ್‌ಗಳನ್ನು ಹೊಂದಿದ್ದು, ಎರಡೂ ತುದಿಗಳಲ್ಲಿ 265 ಎಂಎಂ ಡಿಸ್ಕ್ (ABS ಸ್ಟ್ಯಾಂಡರ್ಡ್) ಬ್ರೇಕ್‌ಗಳನ್ನು ನೀಡಲಾಗಿದೆ. ಸಿಇ 04 ಸ್ಟೀಲ್ ಡಬಲ್ ಲೂಪ್ ಫ್ರೇಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್-ಬ್ರಿಡ್ಜ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಜ್ ಸಸ್ಪೆಂಷನ್ ಸ್ಟ್ರಟ್ ಹೊಂದಿರುವ ಸಿಂಗಲ್ ಸೈಡೆಡ್ ಸ್ವಿಂಗ್ ಆರ್ಮ್ ಅನ್ನು ಹೊಂದಿದೆ.

bmw-ce-04-electric-scooter-bookings-open

ವೈಶಿಷ್ಟ್ಯಗಳು: ಇದು ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್ ನೊಂದಿಗೆ 10.25 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ ಅನ್ನು ಚಾರ್ಜ್‌ ಮಾಡಲು ಯುಎಸ್‌ಬಿ ಟೈಪ್-ಸಿ ಚಾರ್ಜರ್ ಅನ್ನು ಸಹ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗಾಗಿ ನಿಫ್ಟಿ ಸ್ಟೋರೇಜ್ ಕಂಪಾರ್ಟ್ಮೆಂಟ್ ಇದ್ದು, ಇದರಲ್ಲಿ ಗಾಳಿಯಾಡುವ ಜೊತೆಗೆ ನೀರು ಇಳಿಯದಂತೆ ನೋಡಿಕೊಳ್ಳುತ್ತದೆ.

ಬೆಲೆ & ಸುರಕ್ಷತೆ: ವಾಹನದ ಸುರಕ್ಷತಾ ದೃಷ್ಟಿಯಿಂದ ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಪ್ರೊ ಅನ್ನು ಆಪ್ಷನಲ್ ಎಕ್ಸ್ಟ್ರಾಗಳಾಗಿ ನೀಡಲಾಗಿದೆ. ಜೊತೆಗೆ ಇದರಲ್ಲಿ ಇಕೋ, ರೈನ್ ಮತ್ತು ರೋಡ್ ಎಂಬ ಮೂರು ರೈಡ್ ಮೋಡ್‌ಗಳನ್ನು ನೀಡಲಾಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

bmw-ce-04-electric-scooter-bookings-open

ಪವರ್ & ಪರ್ಫಾಮೆನ್ಸ್: ಇದರ ಬ್ಯಾಟರಿ ಸಾಮರ್ಥ್ಯವು 8.9 ಕಿಲೋವ್ಯಾಟ್ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ 130 ಕಿ.ಮೀ ರೇಂಜ್ ನೀಡುತ್ತದೆ. ಬ್ಯಾಟರಿ ಖಾಲಿಯಾದ ನಂತರ, ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಶೇ100 ರಷ್ಟು ಚಾರ್ಜ್ ಮಾಡಲು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಹೈ ಸ್ಪೀಡ್ ಚಾರ್ಜರ್ ಮೂಲಕ ಕೇವಲ ಒಂದು ಗಂಟೆ ನಲವತ್ತು ನಿಮಿಷಗಳಲ್ಲಿ ಬ್ಯಾಟರಿಯನ್ನು ಚಾರ್ಜ್‌ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಬಿಎಂಡಬ್ಲ್ಯು ಸಿಇ 04 ಸ್ಕೂಟರ್ 15 ಕಿಲೋವ್ಯಾಟ್, ಪರ್ಮನೆಂಟ್ ಮ್ಯಾಗ್ನೆಟ್, ಲಿಕ್ವಿಡ್ ಕೂಲ್ಡ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 41 ಬಿಹೆಚ್‌ಪಿ ಪವರ್ ಮತ್ತು 61 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬಿಎಂಡಬ್ಲ್ಯು ಸ್ಕೂಟರ್ ಕೇವಲ 2.6 ಸೆಕೆಂಡುಗಳಲ್ಲಿ 50 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಇದರ ಟಾಪ್ ಸ್ಪೀಡ್ 120 ಕಿ.ಮೀಗಳಾಗಿದೆ.

More from DriveSpark

Article Published On: Wednesday, July 17, 2024, 8:30 [IST]
English summary
Bmw ce 04 electric scooter bookings open
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+