ಓಲಾ, ಎಥರ್‌ಗೆ ಶುರುವಾಯ್ತು ಭೀತಿ: 200+ Km ರೇಂಜ್.. ಹೊಸ ಬ್ರಿಸ್ಕ್ ಒರಿಜಿನ್ ಇ-ಸ್ಕೂಟರ್ ಬಿಡುಗಡೆ, ಬೆಲೆ ಇಷ್ಟೇನಾ?

ಹೈದರಾಬಾದ್​ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸ್ಟಾರ್ಟ್ಅಪ್ ಬ್ರಿಸ್ಕ್ ಇವಿ ಎನರ್ಜಿ (Brisk EV Energy), ಓಲಾ ಮತ್ತು ಎಥರ್‌ಗೆ ಪ್ರಬಲವಾದ ಸ್ಪರ್ಧೆಯೊಡ್ಡಲು ಹೊಸ ಇ-ಸ್ಕೂಟರ್‌ವೊಂದನ್ನು ಮಾರಾಟಕ್ಕೆ ತಂದಿದೆ. ನೂತನ 'ಒರಿಜಿನ್' ಎಲೆಕ್ಟ್ರಿಕ್ ಸ್ಕೂಟರ್ ಕೈಗೆಟುಕುವ ಬೆಲೆಗೆ ಬಿಡುಗಡೆಗೊಂಡಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಗರಿಷ್ಠ ರೇಂಜ್ ಕೂಡ ನೀಡಲಿದೆ. ಬನ್ನಿ.. ಈ ಇ-ಸ್ಕೂಟರ್ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವಿಶೇಷತೆ (Specification) ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ಹೊಚ್ಚ ಹೊಸ ಬ್ರಿಸ್ಕ್ ಒರಿಜಿನ್ (Brisk Origin) ಇ-ಸ್ಕೂಟರ್, ಬಜೆಟ್ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.1,39,000 (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಆಸಕ್ತ ಗ್ರಾಹಕರು, ರೂ.333 ಪಾವತಿಸುವುದರೊಂದಿಗೆ ಪ್ರಿ-ಬುಕ್ಕಿಂಗ್ ಮಾಡಬಹುದು. ಅತಿ ಶೀಘ್ರದಲ್ಲಿಯೇ ವಿತರಣೆಗಳು ಕೂಡ ಆರಂಭವಾಗುವ ನೀರಿಕ್ಷೆಯಿದೆ.

Brisk Origin Electric Scooter Launched In India Rs 1 39 000 Price 200 Km Plus Range Details

ನೂತನ ಬ್ರಿಸ್ಕ್ ಒರಿಜಿನ್ ಎಲೆಕ್ಟ್ರಿಕ್ ಸ್ಕೂಟರ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ನವೀನವಾಗಿರುವ ಸ್ಪೋರ್ಟಿ ಹೈಡ್‌ಲೈಟ್, ಎಲ್ಐಡಿ ಟೈಲ್‌ಲೈಟ್, ಫ್ಲಾಟ್ ಫುಟ್ ಬೋರ್ಡ್, ಅಲಾಯ್ ಫ್ರಂಟ್ ಫುಟ್-ಪೆಗ್ಸ್, ಮತ್ತು ಗಟ್ಟಿಮುಟ್ಟದ ಗ್ರಾಬ್ ರೈಲ್ ಅನ್ನು ಒಳಗೊಂಡಿದೆ. ಸ್ಕಾರ್ಲೆಟ್ ರೆಡ್, ಸ್ಟಾರ್ಮ್ ಗ್ರೇ, ಪ್ಯಾಂಥರ್ ಬ್ಯ್ಲಾಕ್, ಮತ್ತು ಓಷನ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಬ್ರಿಸ್ಕ್ ಒರಿಜಿನ್ ಇ-ಸ್ಕೂಟರ್, 4.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 200+ ಕಿಲೋಮೀಟರ್‌ಗೂ ಅಧಿಕ ರೇಂಜ್ (ಮೈಲೇಜ್) ನೀಡುತ್ತದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ 94 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 3.6 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

Brisk Origin Electric Scooter Launched In India Rs 1 39 000 Price 200 Km Plus Range Details

ನೂತನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಮೋಟಾರ್, 5.5 ಕೆಡಬ್ಲ್ಯೂ ಪೀಕ್ ಪವರ್ ಮತ್ತು 22 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ 7 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿ ಬಿಡುತ್ತದೆ. ಇದು ಇಕೋ (Eco), ರೈಡ್ (Ride) ಮತ್ತು ಬ್ರಿಸ್ಕ್ (Brisk) ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.

ಹೊಸ ಬ್ರಿಸ್ಕ್ ಒರಿಜಿನ್ ಇ-ಸ್ಕೂಟರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಆಂಡ್ರಾಯ್ಡ್ ಬೆಂಬಲಿತ 7-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಯುಎಸ್‌ಬಿ ಚಾರ್ಜರ್‌ನೊಂದಿಗೆ 30-ಲೀಟರ್‌ನ ಅಂಡರ್ ಸೀಟ್ ಸ್ಟೋರೇಜ್, ಕಾಲ್ ಮೈ ಸ್ಕೂಟರ್ (ಪಾರ್ಕಿಂಗ್ ಸ್ಥಳದಲ್ಲಿ ದೂರದಿಂದಲೇ ಸ್ಕೂಟರ್‌ನ್ನು ಹುಡುಕಬಹುದು) ಮತ್ತು ರಿವರ್ಸ್ ಮೋಡ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Brisk Origin Electric Scooter Launched In India Rs 1 39 000 Price 200 Km Plus Range Details

ಈ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮೊನೊ ಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ ವಿಶೇಷವಾಗಿ ಕಾಂಬಿ - ಬ್ರೇಕ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 26, 2024, 13:46 [IST]
English summary
Brisk origin electric scooter launched in india rs 139000 price 200 km plus range details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+