ರಾಯಲ್ ಎನ್‌ಫೀಲ್ಡ್ ಸ್ವಾತಂತ್ರ್ಯ ಕೊನೆಗೊಳ್ಳುತ್ತಾ? ನಾಳೆ ಎದುರಾಳಿ ಬಿಎಸ್ಎ ಬೈಕ್ ಬಿಡುಗಡೆ

78ನೇ ಸ್ವಾತಂತ್ರ್ಯ ದಿನದಂದು ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ ತನ್ನ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 (BSA Gold Star 650 ) ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದೆ. ಈ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಮಾದರಿಗಳಿಗೆ ಪೈಪೋಟಿ ನೀಡಲಿದೆ. ಬಹುನಿರೀಕ್ಷಿತ 'ಗೋಲ್ಡ್ ಸ್ಟಾರ್ 650' ವಿಶೇಷತೆ ಏನು.. ಬೆಲೆ ಎಷ್ಟು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರದ ಮಾಹಿತಿ ಇಲ್ಲಿದೆ.

ಈ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 ಬಗ್ಗೆ ಹೇಳುವುದಾದರೆ, 2022 ರಲ್ಲಿ UK ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದರ ಬೆಲೆ GBP 6500 (ಅಂದಾಜು 6.62 ಲಕ್ಷ ರೂ.) ಆಗಿತ್ತು. ಭಾರತದಲ್ಲಿ ಈ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಈ ಬಿಎಸ್ಎ ಗೋಲ್ಡ್ ಸ್ಟಾರ್ 650 ಆಧುನಿಕ-ರೆಟ್ರೊ ಬೈಕ್ ಆಗಿದ್ದು, ಇದು ರೆಟ್ರೊ ಚಾರ್ಮ್ ಪೂರ್ಣವಾಗಿ ಅಳವಡಿಸಿಕೊಂಡಿದೆ.

BSA Gold Star 650

ಈ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ರಿಯಾದ ಆಧುನಿಕ ಮೋಟಾರ್‌ಸೈಕಲ್ ಆಗಿದ್ದು, LCD ಡಿಸ್ಪ್ಲೇ, ಡ್ಯುಯಲ್-ಚಾನೆಲ್ ABS, ಸ್ಲಿಪ್ಪರ್ ಕ್ಲಚ್, USB ಚಾರ್ಜರ್, LED ಟೈಲ್ಯಾಂಪ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತದಲ್ಲಿ, ಈ ಮಾದರಿಯು ಹೆಚ್ಚು ಅಗ್ರೇಸಿವ್ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಾಜು ರೂ 3 ಲಕ್ಷವಿರಬಹುದು. ಕ್ಲಾಸಿಕ್ ಲೆಜೆಂಡ್ಸ್‌ನಿಂದ ಮುಂಬರುವ ಬೈಕ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ನೊಂದಿಗೆ ಸ್ಪರ್ಧಿಸುತ್ತದೆ.

ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಪವರ್‌ಟ್ರೇನ್ ಸಂಖ್ಯೆಗಳು RE ಇಂಟರ್‌ಸೆಪ್ಟರ್ 650 ಮಾದರಿಗೆ ಹೋಲುತ್ತವೆ. ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕಿನಲ್ಲಿ 652cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC, 4-ವಾಲ್ವ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 6,000rpm ನಲ್ಲಿ 44.27 bhp ಮತ್ತು 4,000rpm ನಲ್ಲಿ 55 Nm ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

BSA Gold Star 650

ಗೋಲ್ಡ್ ಸ್ಟಾರ್ 650 ಬೈಕಿನ ಮುಂಭಾಗದಲ್ಲಿ 18-ಇಂಚಿನ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ 17-ಇಂಚಿನ ವ್ಹೀಲ್ ಗಳು ಕ್ರಮವಾಗಿ 100 ಮತ್ತು 150-ವಿಭಾಗದ ಟೈರ್‌ಗಳನ್ನು ಹೊಂದಿವೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಬಿಎಸ್ಎ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 41mm ಟೆಲಿಸ್ಕೋಪಿಕ್ ಸಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆ ಮಾಡಬಹುದಾದ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅನ್ನು ಬಳಸುತ್ತದೆ. ಈ ರೆಟ್ರೊ ಲುಕ್ ಹೊರತಾಗಿಯೂ, BSA ಗೋಲ್ಡ್ ಸ್ಟಾರ್ 650 ಬೈಕ್ LCD ಡಿಸ್ಪ್ಲೇ, ಡ್ಯುಯಲ್-ಚಾನೆಲ್ ABS, ಸ್ಲಿಪ್ಪರ್ ಕ್ಲಚ್, USB ಚಾರ್ಜರ್, LED ಟೈಲ್ಯಾಂಪ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಆಧುನಿಕ ಬೈಕ್ ಆಗಿದೆ.

BSA Gold Star 650

ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯು ಜಾವಾ ಮತ್ತು ಯೆಜ್ಡಿ ಬ್ರಾಂಡ್‌ಗಳು ಈಗಾಗಲೇ ಉತ್ತಮ ಮಾರುಕಟ್ಟೆಯನ್ನು ಹೊಂದಿದ್ದು, ಮೂರನೇ ಬ್ರಾಂಡ್ ಅನ್ನು ಪರಿಚಯಿಸುತ್ತಿದೆ. ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಬಿಎಸ್ಎ ಗೋಲ್ಡ್ ಸ್ಟಾರ್ 650 (BSA Gold Star 650) ಅನ್ನು ಸಮಗ್ರವಾಗಿ ಪರೀಕ್ಷಿಸುತ್ತಿದೆ ಎಂದು ನಮಗೆ ಖಚಿತವಾಗಿದೆ ಮತ್ತು ಕಂಪನಿಯು ಅಂತಿಮವಾಗಿ ಆಗಸ್ಟ್ 15 ರಂದು ಪರಿಚಯಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 14, 2024, 11:14 [IST]
English summary
Bsa gold star 650 india launch tomorrow details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+