ರಾಯಲ್ ಎನ್‌ಫೀಲ್ಡ್‌ಗೆ ಹೊಸ ಎದುರಾಳಿ: ಸ್ವಾತಂತ್ರ್ಯ ದಿನದಂದು ಕ್ಲಾಸಿಕ್ ಲೆಜೆಂಡ್ಸ್‌ನಿಂದ ಬೈಕ್ ಅನಾವರಣ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಆಗಸ್ಟ್ 15 ರಂದು ಹೊಸ 650 ಸಿಸಿ ಬೈಕ್ ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಕ್ಲಾಸಿಕ್ ಲೆಜೆಂಡ್ಸ್‌ನ ಈ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಮಾದರಿಗಳಿಗೆ ಪೈಪೋಟಿ ನೀಡಲು ಬರುತ್ತಿದ್ದು, ಆದರೆ ಈ ಬೈಕಿನಲ್ಲಿ ಒಂದು ಸಿಲಿಂಡರ್ ಅನ್ನು ಕಡಿಮೆ ಬಳಸುತ್ತದೆ. ಈ ಹೊಸ ಬಿಎಸ್ಎ ಗೋಲ್ಡ್ ಸ್ಟಾರ್ 650 ಆಗಿದೆ ಎಂದು ಹೇಳಲಾಗುತ್ತಿದೆ. ಕ್ಲಾಸಿಕ್ ಲೆಜೆಂಡ್ಸ್ ಈ ಮುಂಬರುವ ಬೈಕ್ ಅನ್ನು ಬಿಎಸ್ಎ (BSA) ಬ್ರಾಂಡ್ ಹೆಸರಿನಲ್ಲಿ ಪರಿಚಯಿಸುತ್ತದೆಯೇ ಎಂದು ನಮಗೆ ಖಚಿತವಿಲ್ಲ.
ಏಕೆಂದರೆ ಜಾವಾ ಮತ್ತು ಯೆಜ್ಡಿ ಬ್ರಾಂಡ್‌ಗಳು ಈಗಾಗಲೇ ಉತ್ತಮ ಮಾರುಕಟ್ಟೆಯನ್ನು ಹೊಂದಿದ್ದು, ಮೂರನೇ ಬ್ರಾಂಡ್ ಅನ್ನು ಪರಿಚಯಿಸುವುದು ಗೊಂದಲಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆಗಸ್ಟ್ 15 ರಂದು ಭಾರತಕ್ಕೆ ಬರಲಿರುವುದು ಬಿಎಸ್ಎ ಗೋಲ್ಡ್ ಸ್ಟಾರ್ 650 ಬೇರೆ ಹೆಸರಿನಿಂದ ಕೂಡಿರಬಹುದು. ಇದನ್ನು 'ಜಾವಾ 650' ಎಂದು ಸಹ ಮಾರಾಟ ಮಾಡಬಹುದು. ಈ ಬಗ್ಗೆ ನಮಗೆ ಖಚಿತವಿಲ್ಲ ಮತ್ತು ಅಧಿಕೃತವಾಗಿ ಅನಾವರಣವಾಗುವ ತನಕ ಕಾಯಬೇಕಾಗಿದೆ.

ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ ಬಿಎಸ್ಎ ಗೋಲ್ಡ್ ಸ್ಟಾರ್ 650 (BSA Gold Star 650) ಅನ್ನು ಸಮಗ್ರವಾಗಿ ಪರೀಕ್ಷಿಸುತ್ತಿದೆ ಎಂದು ನಮಗೆ ಖಚಿತವಾಗಿದೆ ಮತ್ತು ಕಂಪನಿಯು ಅಂತಿಮವಾಗಿ ಆಗಸ್ಟ್ 15 ರಂದು ಭಾರತೀಯ ಪ್ರೇಕ್ಷಕರಿಗೆ ಬೈಕ್ ಅನ್ನು ಅನಾವರಣಗೊಳಿಸಲು ನಿರ್ಧರಿಸಿದೆ. ಈ ಬಿಎಸ್ಎ ಗೋಲ್ಡ್ ಸ್ಟಾರ್ 650 ಬಗ್ಗೆ ಹೇಳುವುದಾದರೆ, 2022 ರಲ್ಲಿ UK ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದರ ಬೆಲೆ GBP 6500 (ಅಂದಾಜು 6.62 ಲಕ್ಷ ರೂ.) ಆಗಿತ್ತು.
ಭಾರತದಲ್ಲಿ, ಈ ಮಾದರಿಯು ಹೆಚ್ಚು ಅಗ್ರೇಸಿವ್ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಾಜು ರೂ 3 ಲಕ್ಷವಿರಬಹುದು. ಕ್ಲಾಸಿಕ್ ಲೆಜೆಂಡ್ಸ್‌ನಿಂದ ಮುಂಬರುವ ಬೈಕ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ನೊಂದಿಗೆ ಸ್ಪರ್ಧಿಸುತ್ತದೆ. ಈ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕ್ ಪವರ್‌ಟ್ರೇನ್ ಸಂಖ್ಯೆಗಳು RE ಇಂಟರ್‌ಸೆಪ್ಟರ್ 650 ಮಾದರಿಗೆ ಹೋಲುತ್ತವೆ.

ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕಿನಲ್ಲಿ 652cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC, 4-ವಾಲ್ವ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 6,000rpm ನಲ್ಲಿ 44.27 bhp ಮತ್ತು 4,000rpm ನಲ್ಲಿ 55 Nm ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
ಈ ಬಿಎಸ್ಎ ಗೋಲ್ಡ್ ಸ್ಟಾರ್ 650 ಬೈಕಿನ ಮುಂಭಾಗದಲ್ಲಿ 18-ಇಂಚಿನ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ 17-ಇಂಚಿನ ವ್ಹೀಲ್ ಗಳು ಕ್ರಮವಾಗಿ 100 ಮತ್ತು 150-ವಿಭಾಗದ ಟೈರ್‌ಗಳನ್ನು ಹೊಂದಿವೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 255 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಬಿಎಸ್ಎ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 41mm ಟೆಲಿಸ್ಕೋಪಿಕ್ ಸಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ 5-ಹಂತದ ಹೊಂದಾಣಿಕೆ ಮಾಡಬಹುದಾದ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅನ್ನು ಬಳಸುತ್ತದೆ. ಈ ರೆಟ್ರೊ ಲುಕ್ ಹೊರತಾಗಿಯೂ, BSA ಗೋಲ್ಡ್ ಸ್ಟಾರ್ 650 ಬೈಕ್ LCD ಡಿಸ್ಪ್ಲೇ, ಡ್ಯುಯಲ್-ಚಾನೆಲ್ ABS, ಸ್ಲಿಪ್ಪರ್ ಕ್ಲಚ್, USB ಚಾರ್ಜರ್, LED ಟೈಲ್ಯಾಂಪ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಆಧುನಿಕ ಬೈಕ್ ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications