Diwali offer: ಈ ಸ್ಕೂಟರ್ ಮೇಲೆ 30,000 ರಿಯಾಯಿತಿ: ಆಫರ್ ಮುಗಿಯಲು ಕೆಲವೇ ದಿನ ಬಾಕಿ!
ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳಲ್ಲಿ ಒಂದಾಗಿರುವ 'ಕ್ವಾಂಟಮ್ ಎನರ್ಜಿ' ತನ್ನ ಜನಪ್ರಿಯ ಸ್ಕೂಟರ್‌ಗಳ ಮೇಲೆ ಸೀಮಿತ ಅವಧಿಯ ದೀಪಾವಳಿ ಕೊಡುಗೆಗಳನ್ನು ಘೋಷಿಸಿದೆ. ಹಬ್ಬದ ಸೀಸನ್‌ನಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸುವ ಭಾರತೀಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ಹೆಚ್ಚು ಕೈಗೆಟುಕುವಂತೆ ಮಾಡಲು ಈ ವಿಶೇಷ ಆಫರ್ ಪರಿಚಯಿಸಲಾಗಿದೆ. ಹಬ್ಬದ ಕೊಡುಗೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 31, 2024 ರವರೆಗೆ ಇರಲಿದೆ. ಎಲ್ಲಾ ಕ್ವಾಂಟಮ್ ಎನರ್ಜಿ ಶೋರೂಮ್‌ಗಳಲ್ಲಿ ಈ ಆಫರ್‌ಗಳು ಲಭ್ಯವಿರಲಿವೆ ಎಂದು ಕಂಪನಿ ಹೇಳಿದೆ.
ಗ್ರಾಹಕರು ಕ್ವಾಂಟಮ್ ಎನರ್ಜಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟೆಸ್ಟ್ ರೈಡ್ ನಿಗದಿಪಡಿಸಬಹುದು. ಭಾರತದಾದ್ಯಂತ ಯಾವುದೇ ಶೋರೂಮ್‌ಗೆ ಭೇಟಿ ನೀಡಬಹುದು. ಪ್ರತಿ ಕ್ವಾಂಟಮ್ ಎನರ್ಜಿ ಶೋರೂಂ ಸಮಗ್ರ 3S ಸೌಲಭ್ಯ ಹೊಂದಿದ್ದು, ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಬೆಂಬಲವನ್ನು ನೀಡುತ್ತದೆ, ಅಸಾಧಾರಣ ಗ್ರಾಹಕ ಅನುಭವವನ್ನು ಖಾತ್ರಿಪಡಿಸುವುದಾಗಿ ಕ್ವಾಂಟಮ್ ಎನರ್ಜಿ ತಿಳಿಸಿದೆ.

ಹಬ್ಬದ ಆಫರ್ ವಿವರಗಳು: ಕಂಪನಿಯು ಒಟ್ಟು ಮೂರು ಸ್ಕೂಟರ್‌ಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಇದರಲ್ಲಿ ಪ್ಲಾಸ್ಮಾ ಎಕ್ಸ್ ಸ್ಕೂಟರ್ ಮೂಲ ಬೆಲೆಯು ರೂ.1,29,150 ಇದ್ದು, ಆಫರ್ ಬೆಲೆಯಲ್ಲಿ ಈಗ ಕೇವಲ ರೂ.99,999ಕ್ಕೆ ಖರೀದಿಸಬಹುದು. ಹಾಗೆಯೇ ಪ್ಲಾಸ್ಮಾ XR ಮೂಲ ಬೆಲೆಯು ರೂ.1,09,999 ಇದ್ದು, ಆಫರ್ ಬೆಲೆಯು ರೂ.89,095ಕ್ಕೆ ಖರೀದಿಸಬಹುದು. ಮಿಲನ್ ಸ್ಕುಟರ್ ಮೂಲ ಬೆಲೆಯು ರೂ.85,999 ಇದ್ದು, ಆಫರ್ ಬೆಲೆಯಲ್ಲಿ ರೂ.79,999ಕ್ಕೆ ಖರೀದಿಸಬಹುದು.
ಪ್ರಸ್ತುತ ರಿಯಾಯಿತಿಯಲ್ಲಿರುವ ಎಲ್ಲಾ ಮಾದರಿಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ, ಅಸಾಧಾರಣ ಪರ್ಫಾಮೆನ್ಸ್ ಮತ್ತು ದಕ್ಷತೆಯನ್ನು ನೀಡುತ್ತವೆ. ಪ್ಲಾಸ್ಮಾ ಎಕ್ಸ್ (Plasma X) ಸ್ಕೂಟರ್ ದೃಢವಾದ 1500W ಮೋಟಾರ್‌ನಿಂದ ಚಾಲಿತವಾಗಿದ್ದು, 65 km/h ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 120 km ವರೆಗಿನ ರೇಂಜ್ ನೀಡುತ್ತದೆ.

ಪ್ಲಾಸ್ಮಾ ಎಕ್ಸ್‌ಆರ್ (Plasma XR) ಸ್ಕೂಟರ್ ಕೂಡ ಪ್ಲಾಸ್ಮಾ ಎಕ್ಸ್‌ನಂತೆಯೇ ಅದೇ ಶಕ್ತಿಶಾಲಿ 1500W ಮೋಟಾರ್ ಅನ್ನು ಹೊಂದಿದ್ದು, ಗರಿಷ್ಠ ವೇಗವು ಗಂಟೆಗೆ 60 ಕಿ.ಮೀ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗಯೇ ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 100 ಕಿ.ಮೀವರೆಗೆ ಓಡಿಸಬಹುದು. ಮಿಲನ್ ಸ್ಕೂಟರ್ 1000W ಮೋಟಾರ್‌ನೊಂದಿಗೆ ಬರುತ್ತದೆ, ಇದು 60 km/h ಗರಿಷ್ಠ ವೇಗ ಹೊಂದಿದ್ದು, ಪ್ರತಿ ಚಾರ್ಜ್‌ಗೆ 100 km ವರೆಗೆ ಓಡಿಸಬಹುದು.
ಕ್ವಾಂಟಮ್ ಎನರ್ಜಿ ಲಿಮಿಟೆಡ್‌ನ ನಿರ್ದೇಶಕಿ ಚೇತನಾ ಚುಕ್ಕಪಲ್ಲಿ ಮಾತನಾಡಿ, "ದೀಪಾವಳಿಯು ಆಚರಣೆಯ ಸಮಯವಾಗಿದೆ, ಕ್ವಾಂಟಮ್ ಎನರ್ಜಿಯಲ್ಲಿ ನಾವು ನಮ್ಮ ಗ್ರಾಹಕರಿಗೆ ಈ ವಿಶೇಷತೆಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವ ಅವಕಾಶವನ್ನು ನೀಡಲು ಉತ್ಸುಕರಾಗಿದ್ದೇವೆ. ನಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪರ್ಫಾಮೆನ್ಸ್, ವಿಶ್ವಾಸಾರ್ಹತೆ ಮತ್ತು ಪರಿಸರ ಸ್ನೇಹಪರತೆಯನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ.
ಈ ಹಬ್ಬದ ಆಫರ್‌ಗಳು ಹೆಚ್ಚಿನ ಜನರನ್ನು ಹಸಿರು ಭವಿಷ್ಯವನ್ನು ಸ್ವೀಕರಿಸಲು ಪ್ರೋತ್ಸಾಹಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಮೌಲ್ಯಯುತ ಉದ್ಯೋಗಿಗಳು, ವಿಶ್ವಾಸಾರ್ಹ ವಿತರಕರು ಮತ್ತು ಈ ಪ್ರಯಾಣದಲ್ಲಿ ನಮ್ಮನ್ನು ಬೆಂಬಲಿಸುವ ನಿಷ್ಠಾವಂತ ಸವಾರರಿಗೆ ಕೃತಜ್ಞತೆಗಳು. ಈ ಆಫರ್‌ಗಳನ್ನು ಎಲ್ಲಾ ಭಾರತೀಯರು ಬಳಸಿಕೊಳ್ಳಬೇಕು ಎಂದು ನಿರ್ದೇಶಕಿ ಚೇತನಾ ಚುಕ್ಕಪಲ್ಲಿ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








