ಓಲಾ, ಎಥರ್ ಕಥೆ ಮುಗೀತು! ಎಲೆಕ್ಟ್ರಿಕ್ ಹೋಂಡಾ ಆಕ್ಟೀವಾ ಬರುತ್ತಿದೆ... ಬಿಡುಗಡೆ ಯಾವಾಗ?
ಹೋಂಡಾ ಕಂಪನಿಯು ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುವಲ್ಲಿ ಬಿಸಿಯಾಗಿಬಿಟ್ಟಿದೆ. ವಿಶ್ವದಾದ್ಯಂತ ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರಿ ಹೂಡಿಕೆಗಳನ್ನು ಮಾಡಿದೆ. ಅತ್ಯಾಧುನಿಕ ಟೆಕ್ನಾಲಜಿಯೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಭಾಗವಾಗಿ ಸಂಶೋಧನೆಯಲ್ಲಿ 10 ಟ್ರಿಲಿಯನ್ ಯೆನ್ ಹೂಡಿಕೆ ಮಾಡುತ್ತಿದೆ. ಕಂಪನಿಯು 2030ರ ವೇಳೆಗೆ ಏಳು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ. ಇದರಲ್ಲಿ ಭಾರತಕ್ಕಾಗಿ ನಿರ್ಮಾಣವಾಗಲಿರುವ ಎಲೆಕ್ಟ್ರಿಕ್ ಆಕ್ಟೀವಾ ಕೂಡ ಇದೆ. ಮೂಲಗಳ ಪ್ರಕಾರ ಈ ಸ್ಕೂಟರ್ 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆಲ್-ವೀಲ್ ಡ್ರೈವ್ ಸಿಸ್ಟನ್‌ನಲ್ಲಿ ಚಲಿಸುವ ತಂತ್ರಜ್ಞಾನದೊಂದಿಗೆ ಈ ಸ್ಕೂಟರ್‌ಗಳು ನಿರ್ಮಾಣವಾಗಲಿವೆ. ಇದರ ತಾಂತ್ರಿಕ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲಾಗುತ್ತಿದ್ದು, 2024ರ ಅಂತ್ಯದ ವೇಳೆಗೆ ಪ್ರಾರಂಭಿಸುವ ನಿರೀಕ್ಷೆಯಿದೆ. ಆರಂಭದಲ್ಲಿ, ಈ ತಂತ್ರಜ್ಞಾನವನ್ನು ಜಪಾನ್‌ನಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಇದೇ ತಂತ್ರಜ್ಞಾನ ಭಾರತಕ್ಕೆ ಬರುವ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲೂ ಇರಲಿದೆ. 2030ರ ವೇಳೆಗೆ ಜಾಗತಿಕವಾಗಿ ಮಾರಾಟವಾಗುವ ಶೇ.40ರಷ್ಟು ಹೋಂಡಾ ವಾಹನಗಳನ್ನು ಎಲೆಕ್ಟ್ರಿಕ್ ಅಥವಾ ಹೈಬ್ರಿಡ್ ವಾಹನಗಳಾಗಿ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. ಸದ್ಯಕ್ಕಿರುವ ಸವಾಲುಗಳನ್ನು ಪರಿಹರಿಸಲು ಕಂಪನಿಯು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿದೆ.
ಆಲ್ ವ್ಹೀಲ್ ಡ್ರೈವ್ ಸಿಸ್ಟಮ್ ಎಲೆಕ್ಟ್ರಿಕ್ ಚಾಲಿತವಾಗಿರುವ ಕಾರಣ ಇದನ್ನು E-AWD (ಎಲೆಕ್ಟ್ರಿಕ್-ಆಲ್-ವೀಲ್ ಡ್ರೈವ್) ಎಂದು ಕರೆಯಲಾಗುತ್ತದೆ. ಈ ಸಿಸ್ಟಮ್‌ಗೆ ಸಂಬಂಧಿಸಿದಂತೆ, ಚಾಲನೆ ಮಾಡುವಾಗ ನಿಯಂತ್ರಿಸಲು ಮತ್ತು ಪ್ರತಿಕ್ರಿಯಿಸಲು ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಎಲ್ಲಾ ಬದಲಾವಣೆಗಳನ್ನು ಹೋಂಡಾದ ಮೋಷನ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನೊಂದಿಗೆ ಸಂಯೋಜಿಸಲಾಗಿದೆ.

ಹೋಂಡಾ ಭಾರತದಲ್ಲಿ ಪ್ಲಾಟ್ ಫಾರ್ಮ್-ಇನಲ್ಲಿ ವಾಹನಗಳನ್ನು ತಯಾರಿಸಲು ನಿರ್ಧರಿಸಿದೆ. ಇದರಲ್ಲಿ ವಿವಿಧ ರೀತಿಯ ಮೋಟರ್‌ಗಳು, ಬ್ಯಾಟರಿ ಪ್ಯಾಕ್‌ಗಳು ಮತ್ತು ವಿಭಿನ್ನ ದೇಹ ಶೈಲಿಗಳಲ್ಲಿ ವಾಹನಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಈ ಪ್ಲಾಟ್‌ಫಾರ್ಮ್ ಹೊಂದಿರಲಿದೆ. ಭಾರತದಲ್ಲಿ ಈ ಪ್ಲಾಟ್‌ಫಾರ್ಮ್ ಮೂಲಕ ಕಂಪನಿಯು ಉತ್ಪಾದಿಸುವ ಮೊದಲ ವಾಹನ ಆಕ್ಟಿವಾ ಆಗಿರಲಿದೆ.
ಆಕ್ಟಿವಾ ಎಂಬ ಹೆಸರು ಜನರಲ್ಲಿ ಭಾರಿ ಯಶಸ್ಸನ್ನು ಗಳಿಸಿರುವ ಜೊತೆಗೆ ಉತ್ತಮ ಮಾರಾಟವನ್ನು ಪಡೆಯುತ್ತಿರುವ ಕಾರಣ ಇದೇ ಹೆಸರನ್ನು ಬಳಿಸಿಕೊಂಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಪ್ಲಾನ್ ಕಂಪನಿಯದ್ದು. ಈ ವರ್ಷದ ಅಂತ್ಯದ ವೇಳೆಗೆ, ಹೋಂಡಾ ತನ್ನ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಪರಿಚಯಿಸಿದರೆ, ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು.

ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ. ಒಂದು ವೇಳೆ ಉತ್ತಮ ರೇಂಜ್, ಅತ್ಯುತ್ತಮ ಫೀಚರ್ಸ್ ಹಾಗೂ ಆಧುನಿಕ ಡಿಸೈನ್‌ನೊಂದಿಗೆ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದರೆ, ಈಗಿರುವ ಎಲ್ಲಾ ಓಲಾ, ಎಥೆರ್ ನಂತಹ ಇವಿ ಸ್ಕೂಟರ್‌ಗಳಿಗೆ ಭಾರೀ ಹೊಡೆತ ಬೀಳಲಿದೆ. ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಂದರೆ ಅದರ ಮಾರಾಟ ಕೂಡ ಭರ್ಜರಿ ಏರಿಕೆ ಕಾಣಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications