ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಉತ್ತಮ ಸಮಯ: ಏಪ್ರಿಲ್ 1 ರಿಂದ ಬೆಲೆ ಏರಿಕೆ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಚ್ಚು ಪ್ರೋತ್ಸಾಹ ನೀಡುತ್ತಿವೆ. ಫೆಮ್-2 ಸಬ್ಸಿಡಿ ಮೂಲಕ ಸಾರ್ವಜನಿಕರಿಗೆ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ವಾಹನಗಳನ್ನು ನೀಡುತ್ತಿದ್ದು, ಇದೀಗ ಈ ಫೆಮ್-2 ಸಬ್ಸಿಡಿ ಅಂತ್ಯಗೊಳ್ಳುವ ಸಮಯ ಹತ್ತಿರವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಈಗಿರುವ ಫೆಮ್-2 ಯೋಜನೆ ಏಪ್ರಿಲ್ 1 ರಂದು ಕೊನಗೊಳ್ಳಲಿದೆ. ನಂತರ ಭಾರತ ಸರ್ಕಾರವು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ 2024 ಅನ್ನು ಪರಿಚಯಿಸಿದ ನಂತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಆಗಲಿದೆ ಎಂದು ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ ಲಿಮಿಟೆಡ್ (ICRA) ಅಭಿಪ್ರಾಯಪಟ್ಟಿದೆ.

ಮುಂಬರಲಿರುವ ಹೊಸ ಉಪಕ್ರಮವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಸಹಕಾರಿ ಆಗಲಿದೆಯಾದ್ರೂ, ಹಿಂದಿನ ಸಬ್ಸಿಡಿಗೆ ಹೋಲಿಸಿಕೊಂಡರೆ ಈಗ ತುಸು ಕಷ್ಟವೆಂದು ಹೇಳಬಹುದು. ಏಕೆಂದರೆ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳು ಹಿಂದಿನ ಬೆಲೆಗಳಿಗಿಂತ ಗಮನಾರ್ಹ ಬೆಲೆ ಏರಿಕೆ ಕಾಣಲಿವೆ. ಅಂದರೆ ಈ ಹಿಂದೆ ಇದ್ದ ಸಬ್ಸಿಡಿಯಲ್ಲಿ ಶೇ 10 ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಫೆಮ್-2 ಮುಗಿದ ಬಳಿಕ ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಬರಲಿರುವ ಹೊಸ ಯೋಜನೆಗೆ ಬೃಹತ್ ಕೈಗಾರಿಕಾ ಸಚಿವಾಲಯದಿಂದ 500 ಕೋಟಿ ರೂ. ಬೆಂಬಲವನ್ನು ನೀಡಲಾಗುವುದು. ಇದರಲ್ಲಿ ಮುಖ್ಯವಾಗಿ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೆಂಬಲವನ್ನು ನೀಡಲು ಯೋಜಿಸಲಾಗಿದೆ. ಆದರೆ ಈಗಿರುವ ಇವಿಗಳ ಕಿಲೋವ್ಯಾಟ್‌ಗೆ 10,000 ರೂ. ನಿಂದ ಹೊಸ ಯೋಜನೆಯಲ್ಲಿ 5,000 ರೂ.ಗೆ ಇಳಿಯಲಿದೆ.

ಅಂದರೆ ಹೊಸ ಸ್ಕಿಮ್, ಸಬ್ಸಿಡಿಯಲ್ಲಿ ಕಿಲೋವ್ಯಾಟ್‌ಗೆ 10,000 ರೂ.ಗಳಿಂದ 5,000 ರೂ.ಗೆ ಇಳಿಸುತ್ತದೆ, ಪ್ರಯೋಜನವನ್ನು ಪ್ರತಿ ವಾಹನಕ್ಕೆ 10,000 ರೂ.ಗೆ ಮಿತಿಗೊಳಿಸುತ್ತದೆ. ಸಬ್ಸಿಡಿಯಲ್ಲಿನ ಈ ಕಡಿತವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಆರಂಭಿಕ ಖರೀದಿ ವೆಚ್ಚದಲ್ಲಿ ಹೆಚ್ಚಳವಾಗಲಿದೆ ಎಂದು ICRA ವಿಶ್ಲೇಷಣೆ ಸೂಚಿಸುತ್ತಿದೆ.
ಸಬ್ಸಿಡಿಯಲ್ಲಿನ ಈ ಹೊಂದಾಣಿಕೆಯು ಫೇಮ್ 2 ಚೌಕಟ್ಟಿನ ಅಡಿಯಲ್ಲಿ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮರುಪಾವತಿ ಅವಧಿಯನ್ನು 5.5 ವರ್ಷಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ. ತಯಾರಕರು ಕಡಿಮೆ ಮಾಡಿದ ಸಬ್ಸಿಡಿಯನ್ನು ಬೆಲೆ ಏರಿಕೆಯ ರೂಪದಲ್ಲಿ ಗ್ರಾಹಕರಿಗೆ ವರ್ಗಾಯಿಸುತ್ತಾರೆ ಎಂಬ ಊಹಾಪೋಹಗಳು ಕೂಡ ಇವೆ.

ಜೊತೆಗೆ, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI)ಯೋಜನೆ ಸೇರಿದಂತೆ ವಿವಿಧ ಉಪಕ್ರಮಗಳ ಮೂಲಕ ಇವಿ ಅಳವಡಿಕೆಗೆ ಒತ್ತು ನೀಡುವ ಸರ್ಕಾರದ ಸಮರ್ಪಣೆಯು ಈ ಬದಲಾವಣೆಯನ್ನು ಮತ್ತಷ್ಟು ವೇಗವರ್ಧಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. 2025 ರ ವೇಳೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಶೇಕಡಾ 6 ರಿಂದ 8 ರಷ್ಟು ಹೆಚ್ಚುತ್ತದೆ ಎಂದು ICRA ನಿರೀಕ್ಷಿಸಿದೆ, ಇದು ಪ್ರಸ್ತುತ ಶೇಕಡಾ 5 ರಷ್ಟು ಗಮನಾರ್ಹ ಹೆಚ್ಚಳ ಕಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








