ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್‌ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಶುರು
ಜನಪ್ರಿಯ ಇಟಾಲಿಯನ್ ವಾಹನ ತಯಾರಕ ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 (Aprilia RS 457) ಬೈಕ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಎಪ್ರಿಲಿಯಾ RS 457 ಸೂಪರ್ ಬೈಕ್ ಭಾರತದ ಬೈಕ್ ಪ್ರೇಮಿಗಳಿಗೆ ಸಾಕಷ್ಟು ಕೂತಹಲವನ್ನು ಹುಟ್ಟುಹಾಕಿದೆ.
ಇದೀಗ ಈ ಹೊಸ ಎಪ್ರಿಲಿಯಾ RS 457 ಬೈಕಿನ ವಿತರಣೆಯು ಪ್ರಾರಂಭವಾಗಿದೆ. ಮೊದಲ ಎಪ್ರಿಲಿಯಾ RS 457 ಬೈಕ್ ಅನ್ನು ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ ವಿತರಿಸಲಾಗಿದೆ ಮತ್ತು ಅವರು ಇದೀಗ ತಮ್ಮ ಬೈಕ್‌ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಆನ್-ರೋಡ್ ಬೆಲೆ ಮತ್ತು ಇತರ ವಿವರಗಳ ಬಗ್ಗೆ ಮಾತನಾಡಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಈ ಬೈಕಿನ ಆನ್ ರೋಡ್ ಬೆಲೆಯು ರೂ.4.95 ಲಕ್ಷವಾಗಿದರೆ, ಎಕ್ಸ್ ಶೋರೂಂ ಬೆಲೆಯು ರೂ.4.11 ಲಕ್ಷವಾಗಿದೆ.

ಇಟಲಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ ಆದರೆ ಇದನ್ನು ಭಾರತದಲ್ಲಿ ಪಿಯಾಜಿಯೊದ ಬಾರಾಮತಿ ಸ್ಥಾವರದಲ್ಲಿ ತಯಾರಿಸಲಾಗುತ್ತಿದೆ. ಪಿಯಾಜಿಯೊ ಗ್ರೂಪ್‌ನ ಭಾಗವಾಗಿರುವ ಇಟಾಲಿಯನ್ ಸ್ಪೋರ್ಟ್ಸ್ ಬೈಕ್ ತಯಾರಕರು ಸೆಪ್ಟೆಂಬರ್‌ನಲ್ಲಿ ಸ್ಯಾನ್ ಮರಿನೋ ಮೋಟೋ ಜಿಪಿ ರೇಸ್‌ಗೆ ಮುನ್ನ ಮಿಸಾನೊ ರೇಸ್ ಟ್ರ್ಯಾಕ್‌ನಲ್ಲಿ ಆರ್‌ಎಸ್ 457 ಅನ್ನು ಆನಾವರಣಗೊಳಿಸಿದ್ದರು.
ಈ ಎಪ್ರಿಲಿಯಾ RS 457 ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, ಇದರ ರೈಡ್-ಬೈ-ವೈರ್ ಸಿಸ್ಟಮ್ ಅನ್ನು ಹೊಂದಿದೆ. ಆದರೆ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸವಾರರು ಬದಲಾಯಿಸಬಹುದಾದ ಮೂರು ಮೋಡ್‌ಗಳನ್ನು ಸಹ ನೀಡುತ್ತದೆ. ಇನ್ನು ಎಪ್ರಿಲಿಯಾದಿಂದ ಹೊಸ RS 457 ಫುಲ್ LED ಲೈಟಿಂಗ್ ಸಿಸ್ಟಮ್ ಜೊತೆಗೆ ಆಯ್ಕೆಯ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ 5-ಇಂಚಿನ TFT ಡಿಸ್ ಪ್ಲೇಯನ್ನು ಹೊಂದಿದೆ.

ಈ ಹೊಸ ಎಪ್ರಿಲಿಯಾ RS 457 ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ಲೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಎಪ್ರಿಲಿಯಾ RS 457 ಬೈಕಿನಲ್ಲಿ 457cc, ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ DOHC ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.
ಈ ಎಂಜಿನ್ 9,400 rpm ನಲ್ಲಿ 46 bhp ಪವರ್ ಮತ್ತು 6,700 rpm ನಲ್ಲಿ 43.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಎಪ್ರಿಲಿಯಾ RS 457 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಟ್ವಿನ್-ಸ್ಪಾರ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಮುಂಭಾಗದಲ್ಲಿ 41mm ಇನ್ವರ್ಟಡ್ ಸಸ್ಪೆಕ್ಷನ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದ್ದು, ಇವೆರಡೂ ಪ್ರಿಲೋಡ್ ಹೊಂದಾಣಿಕೆಯನ್ನು ನೀಡುತ್ತವೆ.

ಇದರ ಮುಂಭಾಗವು 120 ಎಂಎಂ ಟ್ರ್ಯಾವೆಲ್ ನೊಂದಿಗೆ ನೀಡುತ್ತದೆ ಮತ್ತು ಹಿಂಭಾಗವು 130 ಎಂಎಂ ವ್ಹೀಲ್ ಟ್ರಾವೆಲ್ ನೊಂದಿಗೆ ಬರುತ್ತದೆ. ಈ ಹೊಸ ಎಪ್ರಿಲಿಯಾ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ 4-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ಮುಂಭಾಗದ ಡಿಸ್ಕ್ ಮತ್ತು 2-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್‌ಗಳೊಂದಿಗೆ 220 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಅನ್ನು ನೀಡಲಾದೆ.
ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅಸಿಸ್ಟ್ ಅನ್ನು ನೀಡಲಾಗಿದೆ. ಭಾರತದಲ್ಲಿ ತಯಾರಿಸಲಾದ ಎಪ್ರಿಲಿಯಾ RS 457 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ KTM RC390, ಯಮಹಾ R3 ಮತ್ತು ಕವಾಸಕಿ ನಿಂಜಾ 400 ಬೈಕ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ಈ ಬೈಕ್ 13 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








