ಕೊನೆಗೂ ರಾಯಲ್‌ ಎನ್‌ಫೀಲ್ಡ್‌ ಶಾಟ್‌ಗನ್‌ 650 ಡೆಲಿವರಿ: ಮೊದಲ ಬಾಬ್ಬರ್‌ ಪಡೆದ ಲಕ್ಕೀ ಯಾರು?

ವಿಶ್ವದಲ್ಲೇ ಅತೀ ಹೆಚ್ಚು ಪ್ರಸಿದ್ದವಾಗಿರುವ ಬೈಕ್‌ ನಿರ್ಮಾಣ ಕಂಪನಿಯಾದ ರಾಯಲ್‌ ಎನ್ಫೀಲ್ಡ್‌ ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಬೈಕ್‌ ಒಂದನ್ನು ಬಿಡುಗಡೆ ಮಾಡಿತ್ತು. ರಾಯಲ್‌ ಎನ್ಫೀಲ್ಡ್ ತನ್ನ ಹೊಸ ಮಾಡೆಲ್‌ ಆದ ಶಾಟ್‌ಗನ್‌ 650 ಎಂಬ ಬೈಕ್‌ ಅನ್ನು ಕೆಲವು ಸಮಯಗಳ ಹಿಂದೆಯಷ್ಟೇ ಲಾಂಚ್ ಮಾಡಿತ್ತು.

ಮೂಲತಃ ಬಾಬರ್‌ ಶೈಲಿಯ ರಾಯಲ್‌ ಎನ್‌ಫೀಲ್ಡ್‌ ನ ಮೊದಲ ಬೈಕ್‌ ಆದ ಶಾಟ್‌ಗನ್‌ 650 ಬೈಕ್‌ ಅನ್ನು ಕಳೆದ ವರ್ಷ ನಡೆದಿದ್ದ ಮೋಟೋವರ್ಸೆ ಎಂಬ ಸಮಾರಂಭದಲ್ಲಿ ಅನ್‌ವ್ಹೀಲ್‌ ಮಾಡಿದ್ದರು. ಕಂಪನಿ ಹೇಳಿದುದರ ಪ್ರಕಾರ ಕೇವಲ ೨೫ ಯೂನಿಟ್‌ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿತ್ತು. ಆದಷ್ಟು ಬೇಗ ಈ ಬೈಕ್‌ನ ವಿತರಣೆಯನ್ನು ಸಹ ಮಾಡುವುದಾಗಿ ಅಂದೇ ಕಂಪನಿ ತಿಳಿಸಿತ್ತು.

First Royal Enfield Shotgun 650 Delivered In India

ಇದೀಗ ಆ ಲಿಮಿಟೆಡ್‌ ಎಡಿಷನ್‌ 25 ರ ಮೊದಲ ಬೈಕ್‌ ಅನ್ನು ರಾಯಲ್‌ ಎನ್‌ಫೀಲ್ಡ್‌ ವಿತರಣೆ ಮಾಡಿದ್ದು ಇದನ್ನು ಪಡೆದುಕೊಂಡಿರುವ ವ್ಯಕ್ತಿ ಸಖತ್ ಖುಷಿಯಾಗಿದ್ದಾರೆ. ಈ ಬೈಕ್‌ ಕೇವಲ 25 ಸಂಖ್ಯೆಗೆ ಮಾತ್ರ ಸೀಮಿತವಾಗಿರುವುದರಿಂದ ಈ ಬೈಕ್‌ನ ಗ್ರಾಹಕರನ್ನು ಲಕ್ಕೀ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದೀಗ ಮೊದಲ ಡೆಲಿವರಿಯ ವಿಡಿಯೋವನ್ನು ಗ್ರಾಹಕ‌ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದೆ.

ಇನ್ನು ದೊರಕಿರುವ ಮಾಹಿತಿಗಳ ಪ್ರಕಾರ ಈ ಹೊಸ ರಾಯಲ್‌ ಎನ್‌ಫೀಲ್ಡ್‌ ಶಾಟ್‌ಗನ್‌ನ ಮೊದಲ ಡೆಲಿವರಿ ಚಂಢೀಗಡ್‌ನಲ್ಲಿ ನಡೆದಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಸಹ ವಿಡಿಯೋದಲ್ಲಿ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಲಕ್ಕಿ ಡ್ರಾ ಮೂಲಕ ಗ್ರಾಹಕರನ್ನು ಆಯ್ಕೆ ಮಾಡಿ ಲಕ್ಕೀ ಕಸ್ಟಮರ್‌ಗಳಿಗೆ ಒಂದೊಂದಾಗಿ ಈ ಶಾಟ್‌ಗನ್‌ ಬೈಕ್‌ ಅನ್ನು ಡೆಲಿವರಿ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

First Royal Enfield Shotgun 650 Delivered In India

ಇನ್ನು ಈ ಹೊಸ ಶಾಟ್‌ಗನ್‌ 650 ಬಗ್ಗೆ ನೋಡುವುದಾದರೆ, ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸೂಪರ್ ಮೀಟಿಯರ್ 650, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಅನ್ನು ಆಧಾರವಾಗಿರುವ RE 650-ಟ್ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಮೂಲತಃ SG650 ಕಾನ್ಸೆಪ್ಟ್‌ನ ಉತ್ಪಾದನಾ ಆವೃತ್ತಿಯಾಗಿದೆ, ಇದನ್ನು EICMA 2021 ನಲ್ಲಿ ಪ್ರದರ್ಶಿಸಲಾಯಿತು.

ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನಲ್ಲಿ 648cc, ಪ್ಯಾರಲಲ್ ಟ್ವಿನ್, 4-ಸ್ಟ್ರೋಕ್, SOHC, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7250rpm ನಲ್ಲಿ 46.3hp ಮತ್ತು 5,650rpm ನಲ್ಲಿ 52.3Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಬೈಕ್ 22 ಕಿ.ಮೀ ಮೈಲೇಜ್ ನೀಡುತ್ತದೆ.

First Royal Enfield Shotgun 650 Delivered In India

ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, USD ಫ್ರಂಟ್ ಫೋರ್ಕ್‌ನೊಂದಿಗೆ 120mm ಟ್ರ್ಯಾವೆಲ್ ನೊಂದಿಗೆ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ. ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ರೈಡ್‌ಗಳು 18-ಇಂಚಿನ ಮುಂಭಾಗದ ಚಕ್ರ ಮತ್ತು 17-ಇಂಚಿನ ಹಿಂದಿನ ಚಕ್ರ ಕ್ರಮವಾಗಿ 100/90 ಮತ್ತು 150/70 ವಿಭಾಗದ ಟೈರ್‌ಗಳಲ್ಲಿ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 24, 2024, 11:47 [IST]
English summary
First royal enfield shotgun 650 delivered in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+