130 Km ಓಡಲು 2.7 ಯೂನಿಟ್ ಕರೆಂಟ್ ಸಾಕು: ಖರ್ಚಿಲ್ಲದೆ ಈ ಸ್ವದೇಶಿ ಎಲೆಕ್ಟ್ರಿಕ್ ಬೈಕಿನಲ್ಲಿ ಓಡಾಡಬಹುದು!

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಗ್ರಾವ್ಟನ್ ಮೋಟಾರ್ಸ್ ತೆಲಂಗಾಣದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ದೇಶದ ಪ್ರಮುಖ ಇವಿ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಗ್ರಾವ್ಟನ್ ಮೋಟಾರ್ಸ್ ತನ್ನ ಪ್ರಮುಖ ಮಾದರಿಯಾದ ಗ್ರಾವ್ಟನ್ ಕ್ವಾಂಟಾವನ್ನು (Gravton Quanta) ಬಿಡುಗಡೆ ಮಾಡಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕಾಣಿಸಿಕೊಂಡಿರುವ ಈ ಎಲೆಕ್ಟ್ರಿಕ್ ಬೈಕ್ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದರೂ, ಇದರ ವಿನ್ಯಾಸ ಸ್ವಲ್ಪ ದೊಡ್ಡ ಮೊಪೆಡ್ ಮಾದರಿಯಲ್ಲಿದೆ. ಈ ಎಲೆಕ್ಟ್ರ್ಕ್ ಬೈಕ್ ಬೆಲೆಯು ರೂ.1.2 ಲಕ್ಷವಾಗಿದೆ.

ಈ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಕನ್ಯಾಕುಮಾರಿಯಿಂದ ಖರ್ದುಂಗ್ ಲಾವರೆಗೆ 4,011 ಕಿ.ಮೀ ದೂರವನ್ನು ವಾಹನವನ್ನು ಚಾರ್ಜ್ ಮಾಡಲು ನಿಲ್ಲಿಸದೆ ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಈ ವಾಹನವು ದೂರವನ್ನು 164 ಗಂಟೆ 30 ನಿಮಿಷಗಳಲ್ಲಿ ಅಂದರೆ 6.5 ದಿನಗಳಲ್ಲಿ ಕ್ರಮಿಸಿದೆ. ಈ ಹಿಂದೆ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಈ ಸಾಧನೆ ಮಾಡಿಲ್ಲ. ಈ ವಾಹನ ತಯಾರಕರ ತಂಡವು ಈ ರೈಡ್ ಅನ್ನು 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಿತು.

Gravton Quanta

ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ವಾಪಿಂಗ್-ಆರ್ಮ್ ಅನ್ನು ಬಳಸಿಕೊಂಡು ಚಾರ್ಜ್ ಮಾಡಿಕೊಳ್ಳಬಹುದು. ಪ್ರತಿ ಬಾರಿ ಚಾರ್ಜ್ ಖಾಲಿಯಾದಾಗ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯನ್ನು ಬದಲಾಯಿಸಲಾಗುತ್ತದೆ. ವಿವಿಧ ರೈಡರ್‌ಗಳೊಂದಿಗೆ ಸತತ 3400 ಕಿಲೋಮೀಟರ್‌ಗಳನ್ನು ಕ್ರಮಿಸಿದ ನಂತರ ತಂಡವು ಮೊದಲ ಬಾರಿಗೆ ಮನಾಲಿಯಲ್ಲಿ ನಿಂತಿತು.

ಈ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ ಅತ್ಯಂತ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ ಮತ್ತು ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು 265 ಕೆಜಿ ವರೆಗಿನ ತೂಕವನ್ನು ಹೊಂದಿದೆ. ಇದು ಟಿವಿಎಸ್ ಎಕ್ಸ್‌ಎಲ್‌ನಂತೆ ಕಾರ್ಯನಿರ್ವಹಿಸುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ.

Gravton Quanta

ಹೊಸ ಗ್ರಾವ್ಟನ್ ಕ್ವಾಂಟಾ ಎಲೆಕ್ಟ್ರಿಕ್ ಬೈಕ್ BLDC ಮೋಟಾರ್ ನಿಂದ ಚಾಲಿತವಾಗಿದ್ದು, ಇದು kW ಪವರ್ ಮತ್ತು 172 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಫುಲ್ ಚಾರ್ಜ್‌ನಲ್ಲಿ EV 130 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಕ್ವಾಂಟಾ ಎಲೆಕ್ಟ್ರಿಕ್ ಬೈಕ್ 2.78 kWh ಲಿಥಿಯಂ ಮ್ಯಾಂಗನೀಸ್ ಐರನ್ ಫಾಸ್ಫೇಟ್ ಮಾದರಿಯ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ.

ಈ ಬ್ಯಾಟರಿ ಪ್ಯಾಕ್ ಅನ್ನು ಪಡೆದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಗ್ರಾವ್ಟನ್ ಕ್ವಾಂಟಾ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಬರುತ್ತದೆ. ಬ್ಯಾಟರಿಯನ್ನು 90 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಪರ್ಯಾಯವಾಗಿ, ಬ್ಯಾಟರಿ ನಿಮಯ ಕೇಂದ್ರಗಳ ಮೂಲಕ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯನ್ನು ಅಳವಡಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜ್ ಮಾಡಲು ಕೇವಲ 2.7 ಯೂನಿಟ್ ವಿದ್ಯುತ್ ಅಗತ್ಯವಿದೆ.

Gravton Quanta

ಅಂದರೆ 130 ಕಿ.ಮೀ ದೂರ ಕ್ರಮಿಸಲು ಕೇವಲ 20 ರೂಪಾಯಿ ವೆಚ್ಚವಾಗಲಿದೆ. ನೀವು ಪೆಟ್ರೋಲ್ ದ್ವಿಚಕ್ರ ವಾಹನವನ್ನು ಬಳಸುತ್ತಿದ್ದರೆ, 130 ಕಿಮೀ ದೂರವನ್ನು ಕ್ರಮಿಸಲು ಕನಿಷ್ಠ 250 ರೂಪಾಯಿ ಇಂಧನಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಅದೂ ಉತ್ತಮ ಮೈಲೇಜ್ ಇರುವ ವಾಹನದಲ್ಲಿ. ಈ ಹೊಸ ವಾಹನವು ಭಾರತದ ಎಲ್ಲಾ ರೀತಿಯ ರಸ್ತೆಗಳನ್ನು ನಿಭಾಯಿಸಬಲ್ಲದು ಎಂಬುದು ಗಮನಾರ್ಹ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 28, 2024, 14:31 [IST]
English summary
Gravton quanta electric motorcycle launched price details
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+