110 ಕಿ.ಮೀ ರೇಂಜ್, 55 ಸಾವಿರ ಬೆಲೆ: 4 ಹೊಸ ಇವಿಗಳು ಬಿಡುಗಡೆ: ವಿಶೇಷತೆಗಳೇನು?

ಕಾಲೇಜು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ಕಾರ್ಮಿಕರು ಸೇರಿದಂತೆ ನಗರ ಸವಾರರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ 'ಜಿಟಿ ಫೋರ್ಸ್' ಹೊಸ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ.

ಕಂಪನಿಯ ಈ ಹಿಂದಿನ ಮಾದರಿಗಳಾದ ಜಿಟಿ ಸೋಲ್, ಜಿಟಿ ಒನ್, ಜಿಟಿ ಸೋಲ್ ವೇಗಾಸ್, ಜಿಟಿ ಡ್ರೈವ್ ಪ್ರೊ, ಜಿಟಿ ಪ್ರೈಮ್ ಪ್ಲಸ್ ಮತ್ತು ಜಿಟಿ ಫ್ಲೈಯಿಂಗ್ ಸ್ಕೂಟರ್‌ಗಳು 20,000ಕ್ಕೂ ಹೆಚ್ಚು ಮಾರಾಟವಾಗಿವೆ. ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಅಭಿವೃದ್ಧಿಯಲ್ಲಿ ನಮ್ಮ ಸ್ಕೂಟರ್‌ಗಳು ಕೂಡ ಭಾಗಿಯಾಗಿರುವುದು ಖುಷಿ ತಂದಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಮುಖೇಶ್ ತನೇಜಾ ಹೇಳಿಕೊಂಡಿದ್ದಾರೆ. ಇದೀಗ 'ಜಿಟಿ ವೇಗಾಸ್, ಜಿಟಿ ಒನ್ ಪ್ಲಸ್ ಪ್ರೊ, ಜಿಟಿ ರೈಡ್ ಪ್ಲಸ್ ಮತ್ತು ಜಿಟಿ ಡ್ರೈವ್ ಪ್ರೊ' ಎಂಬ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳ ಬೆಲೆಗಳು ರೂ. 55,555 ದಿಂದ ಆರಂಭವಾಗಿ ರೂ. 84,555 (ಎಕ್ಸ್ ಶೋರೂಂ) ವರೆಗೆ ಇರುತ್ತವೆ.

gt-force-launches-four-new-e-scooters-price-starts-at-rs-55-555

ಜಿಟಿ ಡ್ರೈವ್ ಪ್ರೊ: ಹೈಸ್ಪೀಡ್ ಇವಿ ವಿಭಾಗಕ್ಕಾಗಿ, ಕಂಪನಿಯು ಜಿಟಿ ಡ್ರೈವ್ ಪ್ರೊ ಅನ್ನು ಪರಿಚಯಿಸಿದೆ. ಇದು ಹೆಚ್ಚಿನ ಇನ್ಸುಲೇಟೆಡ್ ಬಿಎಲ್ ಡಿಸಿ ಮೋಟರ್‌ಗಳು ಮತ್ತು 2.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. 70 ಕಿ.ಮೀ ಟಾಪ್ ಸ್ಪೀಡ್ ಮತ್ತು 180 ಕೆ.ಜಿ ಲೋಡ್ ಸಾಮರ್ಥ್ಯದೊಂದಿಗೆ 110 ಕಿ.ಮೀ ರೇಂಜ್ ನೀಡುತ್ತದೆ.

ಜಿಟಿ ಡ್ರೈವ್ ಪ್ರೊ ಇವಿ ಸ್ಕೂಟರ್ 800 ಎಂಎಂ ಸ್ಯಾಡಲ್ ಎತ್ತರ, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 85 ಕೆ.ಜಿ ತೂಕವನ್ನು ಹೊಂದಿದೆ. 84,555 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಬ್ಲೂ, ವೈಟ್, ರೆಡ್ ಮತ್ತು ಬ್ರೌನ್ ಬಣ್ಣಗಳಲ್ಲಿ ಲಭ್ಯವಿದೆ.

ಜಿಟಿ ಒನ್ ಪ್ಲಸ್ ಪ್ರೊ: ಜಿಟಿ ಒನ್ ಪ್ಲಸ್‌ ಪ್ರೋ 70 ಕಿ.ಮೀ ವೇಗದಲ್ಲಿ ಚಲಿಸುವ ಹೈಸ್ಪೀಡ್ ಸ್ಕೂಟರ್ ಆಗಿದ್ದು, 180 ಕೆ.ಜಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ 110 ಕಿ.ಮೀ ಚಲಿಸುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಚಾರ್ಜ್ ಆಗಲು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ 76,555 ರೂ. ಬೆಲೆಯಲ್ಲಿ ಬ್ಲಾಕ್, ಬ್ಲೂ ಮತ್ತು ಬ್ರೌನ್ ಬಣ್ಣಗಳಲ್ಲಿ ಲಭ್ಯವಿದೆ.

ಜಿಟಿ ವೇಗಾಸ್: ಕಡಿಮೆ ವೇಗದ ಇವಿ ವಿಭಾಗದಲ್ಲಿ ಜಿಟಿ ವೇಗಾಸ್ ಕೈಗೆಟುಕುವ 55,555 ರೂ.ಗಳ ಬೆಲೆಯಲ್ಲಿ ಲಭ್ಯವಿದೆ. ಇದು ಕಿತ್ತಳೆ, ಕೆಂಪು ಮತ್ತು ಬೂದು ಬಣ್ಣಗಳಲ್ಲಿ 5 ವರ್ಷ ಅಥವಾ 60,000 ಕಿ.ಮೀ ವಾರಂಟಿಯೊಂದಿಗೆ ಸಿಗಲಿದೆ. ಇದು 1.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ನೀಡಲಿದೆ.

ಆಟೋ-ಕಟ್ ವೈಶಿಷ್ಟ್ಯವನ್ನು ಹೊಂದಿರುವ ಇದರ ಮೈಕ್ರೋ ಚಾರ್ಜರ್ 4-5 ಗಂಟೆಗಳಲ್ಲಿ ಪೂರ್ಣವಾಗಿ ಚಾರ್ಜ್ ಆಗುತ್ತದೆ. 70 ಕಿ.ಮೀ ರೇಂಜ್ ಮತ್ತು 25 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಜಿಟಿ ವೇಗಾಸ್, 150 ಕೆ.ಜಿ ಲೋಡ್ ಸಾಮರ್ಥ್ಯ, 760 ಎಂಎಂ ಸ್ಯಾಡಲ್ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 88 ಕೆ.ಜಿ ತೂಕವನ್ನು ಹೊಂದಿದೆ.

ಜಿಟಿ ರೈಡ್ ಪ್ಲಸ್: ಜಿಟಿ ರೈಡ್ ಪ್ಲಸ್ ದೃಢವಾದ 2.2 ಕಿಲೋವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಒಮ್ಮೆ ಚಾರ್ಜ್ ಮಾಡಿದ್ರೆ 95 ಕಿ.ಮೀ ವಿಸ್ತೃತ ರೇಂಜ್ ನೀಡುತ್ತದೆ. ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್ ಮತ್ತು 160 ಕೆ.ಜಿ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಜಿಟಿ ರೈಡ್ ಪ್ಲಸ್ 680 ಎಂಎಂ ಸ್ಯಾಡಲ್ ಎತ್ತರ, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 90 ಕೆ.ಜಿ ತೂಕವನ್ನು ಹೊಂದಿದೆ. ಇದರ ಬೆಲೆ ರೂ. 65,555 ಗಳಾಗಿದ್ದು, ಬ್ಲೂ, ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿದೆ.

More from DriveSpark

Article Published On: Friday, May 17, 2024, 8:30 [IST]
English summary
Gt force launches four new e scooters price starts at rs 55 555
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+