Bullet: 70,000 ರೂಪಾಯಿಗೆ ಎಲೆಕ್ಟ್ರಿಕ್ ಬುಲೆಟ್ ಸಿದ್ಧಪಡಿಸಿದ ಯುವಕ.. ಶಬ್ದದಲ್ಲೂ ವ್ಯತ್ಯಾಸವಿಲ್ಲ!

ದೇಶದ ಯುವಕರಿಗೆ ನಿಮ್ಮ ಮೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ ರಾಯಲ್ ಎನ್‌ಫೀಲ್ಡ್ ಬುಲೆಟ್ ಎಂದು. ಅಷ್ಟರಮಟ್ಟಿಗೆ ಈ ಮೋಟಾರ್‌ಸೈಕಲ್ ಯುವ ಜನರನ್ನು ಮನಸ್ಸನ್ನು ಗೆದ್ದಿದೆ. ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿರುವುದರಿಂದ ಬಹುತೇಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ, ಹರಿಯಾಣದ ಯುವಕನೊಬ್ಬ ತನ್ನಲ್ಲಿರುವ ಕೆಲವೇ ಪರಿಕರಗಳನ್ನು ಉಪಗೋಗಿಸಿಕೊಂಡು ಎಲೆಕ್ಟ್ರಿಕ್ ಬುಲೆಟ್ (Electric Bullet) ಬೈಕ್‌ನ್ನು ತಯಾರಿಸಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೇವಲ 4 ದಿನಗಳ ಹಿಂದೆ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಈ ವಿಡಿಯೋ ಸಖತ್ ಹಲ್‌‌‌ಚಲ್‌‌ ಸೃಷ್ಟಿಸಿದ್ದು, 5.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ನೂರಾರು ಜನರು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ಆತನ ಕೆಲಸವನ್ನು ಉತ್ತಮಗೊಳಿಸಲು ಬೆಂಬಲಿಸೋಣ' ಎಂದಿದ್ದಾರೆ. ಮತ್ತೊಬ್ಬರು, 'ಬಜೆಟ್​ನಲ್ಲಿ ಬುಲೆಟ್' ಎಂದು ಪ್ರತಿಕ್ರಿಯಿಸಿದ್ದಾರೆ.

Haryana Man Builds Electric Bullet For Rs 70 000 Video Full Viral

ಈ ಯುವಕ ಸುಮಾರು 70,000 ರೂಪಾಯಿಯನ್ನು ಖರ್ಚು ಮಾಡಿ, ಎಲೆಕ್ಟ್ರಿಕ್ ಬುಲೆಟ್ ಬೈಕ್‌ನ್ನು ತಯಾರಿಸಿದ್ದಾನೆ ಎನ್ನಲಾಗಿದೆ. ಮರದ ಕಟ್ಟಿಗೆಯನ್ನು ಬಳಸಿ, ಇದರ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಸಿದ್ದಪಡಿಸಲಾಗಿದ್ದು, ಅದರೊಳಗೆ ಸಾಮಾನ್ಯ ಬುಲೆಟ್ ರೀತಿಯಲ್ಲಿ ಶಬ್ದ ಬರಲು ಸೌಂಡ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಸೈಲೆನ್ಸರ್ ನೊಳಗೆ ಸ್ಪೀಕರ್ (ಧ್ವನಿವರ್ಧಕ) ಜೋಡಿಸಲಾಗಿದೆ.

ಹಾಗೆಯೇ ಸೀಟ್ (ಆಸನ) ಕೆಳಭಾಗದಲ್ಲಿ ವಿಶಾಲವಾದ ಬೂಟ್ ಸ್ಪೇಸ್ (ಸಂಗ್ರಹ ಪೆಟ್ಟಿಗೆ) ಇದ್ದು, ಚಾರ್ಜರ್, ನೀರಿನ ಬಾಟೆಲ್ ಸೇರಿದಂತೆ ಇನ್ನಿತರೇ ವಸ್ತುಗಳನ್ನು ಇಡಬಹುದು. ಎಲೆಕ್ಟ್ರಿಕ್ ಬುಲೆಟ್ ರಸ್ತೆಯಲ್ಲಿ ಲೀಲಾಜಾಲವಾಗಿ ಸಾಗಲು 4 ಬ್ಯಾಟರಿಗಳನ್ನು ಹೊಂದಿದ್ದು, ಸುಲಭವಾಗಿ ಚಾರ್ಜ್ ಮಾಡಲು ಆನ್‌ಬೋರ್ಡ್ ಚಾರ್ಜರ್ ಆಯ್ಕೆಯನ್ನು ಸಹ ಪಡೆದಿದೆ. ಜೊತೆಗೆ ಈ ಮೋಟಾರ್‌ಸೈಕಲ್ ತಯಾರಿಕೆಗೆ ಹಳೆಯ ಬುಲೆಟ್‌ನ ಒಂದಷ್ಟು ಬಿಡಿಭಾಗಗಳನ್ನು ಉಪಯೋಗಿಸಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

Haryana Man Builds Electric Bullet For Rs 70 000 Video Full Viral

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಮೋಟಾರ್‌ಸೈಕಲ್ ರೂ.1.74 ಲಕ್ಷದಿಂದ ರೂ.2.16 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಮಿಲಿಟರಿ ಸಿಲ್ವರ್ ರೆಡ್ & ಮಿಲಿಟರಿ ಸಿಲ್ವರ್ ಬ್ಲ್ಯಾಕ್, ಬ್ಲ್ಯಾಕ್ ಗೋಲ್ಡ್, ಸ್ಟ್ಯಾಂಡರ್ಡ್ ಮೆರೂನ್ & ಸ್ಟ್ಯಾಂಡರ್ಡ್ ಬ್ಲ್ಯಾಕ್, ಮಿಲಿಟರಿ ರೆಡ್ & ಮಿಲಿಟರಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ನೂತನ ಬುಲೆಟ್ 350 ಬೈಕ್ 349 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಜೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 20.4 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 37 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಮೋಟಾರ್‌ಸೈಕಲ್ ಹ್ಯಾಲೊಜೆನ್ ಹೆಡ್‌ಲೈಟ್, ಟೈಲ್ ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 195 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 18, 2024, 10:49 [IST]
English summary
Haryana man builds electric bullet for rs 70000 video full viral
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+