ಬಡವರು ಈ ಬೈಕನ್ನು ಸುಲಭವಾಗಿ ಖರೀದಿಸಬಹುದು: EMI, ಆನ್ ರೋಡ್ ಬೆಲೆ ಎಷ್ಟು? ಇಂದೇ ಮನೆಗೆ ತನ್ನಿ

ಜನಪ್ರಿಯ ಮತ್ತು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಜನಪ್ರಿಯ ಹೀರೋ HF ಡೀಲಕ್ಸ್ (Hero HF Deluxe) ಬೈಕನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಈ ಬೈಕ್ ಹೆಚ್ಚು ಜನಪ್ರಿಯವಾಗಿದ್ದು, ಗ್ರಾಮೀಣ ಭಾಗದ ಗ್ರಾಹಕರನ್ನು ಹೆಚ್ಚು ಸೆಳೆದಿದೆ.

ಹೀರೋ ಮೋಟೋಕಾರ್ಪ್ ಕಂಪನಿಗೆ ಬೈಕುಗಳು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಈ ಹೀರೋ HF ಡೀಲಕ್ಸ್ ಬೈಕ್ ಕೂಡ ಮಾರಾಟದಲ್ಲಿ ಉತ್ತಮ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಬಡವರಿಗೆ ಉತ್ತಮ ಆಯ್ಕೆಯಾಗಿದೆ. ಈ ಲೇಖನದಲ್ಲಿ ಬೈಕಿನ ಇಎಂಐ, ಆನ್ ರೋಡ್ ಬೆಲೆ ಮತ್ತು ಕಾರಿನ ಸಂಪೂರ್ಣ ಮಾಹಿತಿ ಮತ್ತು ಇತರ‌ ವಿವರವನ್ನು ನೀಡುತ್ತೇವೆ.

Hero HF Deluxe

ಹೀರೋ HF ಡೀಲಕ್ಸ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.61,718 ಆದರೆ ಆನ್ ರೋಡ್ ಬೆಲೆಯು ರೂ.77,743 ಆಗಿದೆ. ಈ ಬೈಕಿಗೆ 9.8 % ಬಡ್ಡಿ ದರದಲ್ಲಿ 36 ತಿಂಗಳುಗಳ ಲೋನ್‌ ಆಯ್ಕೆ ಮಾಡಿದರೆ ಪ್ರತಿ ತಿಂಗಳು ನೀವು ರೂ. 2,241 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಹೀರೋ HF ಡೀಲಕ್ಸ್ ಬೈಕಿನ ಡೌನ್ ಪೇಮೆಂಟ್ ರೂ.8000 ಆಗಿದೆ.

ಭಾರತದ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್ ಮಾರಾಟ ಮಾಡುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಹೀರೋ ಬೈಕ್ ಗಳು ಖ್ಯಾತಿಗಳಿಸಿವೆ. ಈ ಹೀರೋ HF ಡೀಲಕ್ಸ್ ಬೈಕ್ ಅನ್ನು ಹೊಸ ಕ್ಯಾನ್ವಾಸ್ ಬ್ಲ್ಯಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್-ಬ್ಲ್ಯಾಕ್ ಥೀಮ್‌ ಹೊಂದಿದೆ. ಈ ಹೀರೋ HF ಡೀಲಕ್ಸ್ ಬೈಕಿನಲ್ಲಿ ಚ್ಚು ಸೊಗಸಾದ ಗ್ರಾಫಿಕ್ಸ್ ಅನ್ನು ಹೊಂದಿದೆ.

Hero HF Deluxe

ಇನ್ನು ಈ ಬೈಕಿನ ಬಣ್ಣದ ಆಯ್ಕೆಗಳ ಬಗ್ಗೆ ಹೇಳುವುದಾದರೆ, ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಹೆವಿ ಗ್ರೇ ವಿತ್ ಬ್ಲ್ಯಾಕ್ ಮತ್ತು ಬ್ಲ್ಯಾಕ್ ವಿತ್ ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಹೀರೋ HF ಡೀಲಕ್ಸ್ ಬೈಕಿನಲ್ಲಿ 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನ ನವೀಕರಿಸಿದ ಆವೃತ್ತಿಯೊಂದಿಗೆ Hero HF ಡೀಲಕ್ಸ್ ಬೈಕಿನಲ್ಲಿ ನೀಡಲಾಗಿದೆ.

ಇದು ಈಗ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತದೆ. ಈ ಎಂಜಿನ್ ಈಗ 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಇದೇ ಎಂಜಿನ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೂ ನೀಡಲಾಗಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

Hero HF Deluxe

ಆಯಾಮದ ವಿಷಯದಲ್ಲಿ, ಹೀರೋ HF ಡೀಲಕ್ಸ್ ಬೈಕ್ 1,965mm ಉದ್ದ, 720mm ಅಗಲ ಮತ್ತು 1,045mm ಎತ್ತರವನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೀರೋ ಹೆಚ್‌ಎಫ್ ಡಿಲಕ್ಸ್‌ನ ವೀಲ್‌ಬೇಸ್ 1,235 ಎಂಎಂ ಮತ್ತು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಹೀರೋ HF ಡಿಲಕ್ಸ್ ಅನ್ನು ನಗರ ಮಿತಿಗಳಲ್ಲಿ ಸವಾರಿ ಮಾಡಲು ಸುಲಭವಾದ ಮೋಟಾರ್‌ಸೈಕಲ್ ಆಗಿದೆ. ಈ ಬೈಕಿನ ಸೀಟ್ 805 ಮಿಮೀ ಹೊಂದಿದೆ.

ಇದು ಹಳ್ಳಿ ಹಾಗೂ ಸಿಟಿಗಳಿಗೂ ಕೂಡ ಉತ್ತಮ ಬೈಕ್ ಆಗಿದೆ. ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ನವೀಕರಿಸಿದ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್ ಅಲಾಯ್ ವ್ಹೀಲ್ ಗಳು, ಟ್ಯೂಬ್‌ಲೆಸ್ ಟೈರ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್-ಸ್ಟ್ಯಾಂಡ್ ಇಂಡಿಕೇಟರ್ ಅನ್ನು ಹೊಂದಿದೆ.ಇದರೊಂದಿಗೆ ಟೋ-ಗಾರ್ಡ್, ಲೈಟಿಂಗ್ಸ್ ಬಗ್ಗ್ ಹೇಳುವುದಾದರೆ, ಇದರಲ್ಲಿ ಹ್ಯಾಲೊಜೆನ್ ಲೈಟಿಂಗ್ಸ್ ಯುನಿಟ್ ಹೊಂದಿದೆ. ಇದಲ್ಲದೇ ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 17, 2024, 13:46 [IST]
English summary
Hero hf deluxe motorcycle road price emi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+