2.25 ಲಕ್ಷಕ್ಕೆ ರಾಯಲ್ ಫೀಚರ್‌ನ ಕ್ರೂಸರ್ ಬೈಕ್: ಇದು ಮಿಡಲ್‌ಕ್ಲಾಸ್ ಹುಡುಗರ 'ಹೀರೋ' ಕಣ್ರೀ!
ಹೀರೋ ಇತ್ತೀಚೆಗೆ ಹಲವು ಬೆಳವಣಿಗೆಗಳ ಮೂಲಕ ಭಾರತೀಯ ವಾಹನ ಪ್ರೀಯರ ಮನದಲ್ಲಿ ಸದಾ ಕಲರವವನ್ನು ಉಂಟು ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಭಾರತದಲ್ಲಿ ಮೊದಲು ಹೀರೋ-ಹಾರ್ಲೆ ಸಹಭಾಗಿತ್ವದಲ್ಲಿ ಭಾರತದಲ್ಲಿ ಹಾರ್ಲೆ ಡೇವಿಡ್‌ಸನ್ X440 ಎಂಬ ಬೈಕನ್ನು ಮಾರುಕಟ್ಟೆಗೆ ತಂದಿತ್ತು. ನಂತರದಲ್ಲಿ ಇತ್ತೀಚೆಗೆ ಹೀರೋ ಮಾರ್ವಿಕ್ 440 ಯನ್ನು ಬಿಡುಗೆಡೆ ಮಾಡಿತ್ತು.
ಮಾರ್ವಿಕ್ 440 , ಹೀರೋ ಕಂಪನಿಯ ಮೊದಲ 400 ಸಿಸಿ ಸೆಗ್ಮೆಂಟ್‌ನ ಬೈಕ್ ಆಗಿದೆ. ಹಾರ್ಲೆ ಡೇವಿಡ್‌ಸನ್ X440 ಅದೇ ಎಂಜಿನ್ ಅನ್ನು ಈ ಬೈಕ್ ಹೊಂದಿದ್ದು, ಆಕರ್ಷಕ ವಿನ್ಯಾಸದಿಂದ ಭಾರತೀಯ ಆಟೋಮೊಬೈಲ್ ಪರಿಣಿತರ ಗಮನವನ್ನು ಸೆಳೆದಿದೆ. ಹೀರೋ ಮಾರ್ವಿಕ್ 440 ಸದ್ಯಕ್ಕೆ ಭಾರತದಲ್ಲಿ ಲಭ್ಯವಿರುವ ಉತ್ತಮ ಪವರ್‌ಫುಲ್ ಕ್ರೂಸರ್ ಎನ್ನಲು ಕಾರಣವೇನು ಎಂದು ನೋಡೋಣ ಬನ್ನಿ.

ವಿನ್ಯಾಸ: ಮಾರ್ವಿಕ್ 440 ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುತ್ತದೆ. ಈ ಬೈಕ್ ಮುಸ್ಕ್ಯುಲರ್ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ. ಬೈಕ್ ಸ್ವಲ್ಪ ಗಟ್ಟಿಮುಟ್ಟಾಗಿದ್ದು, ಉದ್ದವಿವಾದ ವೀಲ್ ಬೇಸ್ (Wheelbase) ಒಳಗೊಂಡಿದೆ. ರೌಂಡ್ ಹೆಡ್‌ಲೈಟ್, 'ಹೆಚ್' ಆಕಾರದ ಡಿಆರ್‌ಎಲ್ ಉತ್ತಮವಾಗಿದೆ. ವಿಶೇಷವಾಗಿ ಹೆಡ್‌ಲ್ಯಾಂಪ್ ಫ್ರಂಟ್ ಫಾಸಿಯಾ (Front Fascia)ದಲ್ಲಿ ಪಾರುಪತ್ಯವನ್ನು ಮೆರೆಯುತ್ತಿದ್ದು, ಮೋಟಾರ್‌ಸೈಕಲ್‌ಗೆ ರೆಟ್ರೋ ಲುಕ್ ಅನ್ನು ನೀಡುತ್ತದೆ.
ಎಂಜಿನ್: ಹೀರೋ ಮಾರ್ವಿಕ್ ಬೈಕ್ (Hero Marvick 440) 440 ಸಿಸಿ ಆಯಿಲ್/ ಏರ್ - ಕೋಲ್ಡ್ ಎಂಜಿನ್ ಹೊಂದಿದೆ. ಈ ಮೇಲೆ ತಿಳಿಸಿದಂತೆ ಹೀರೋ ಕಂಪನಿ ಮಾರುಕಟ್ಟೆಗೆ ತಂದ ಮೊದಲ 400ಸಿಸಿ ಸೆಗ್ಮೆಂಟ್ ಬೈಕ್ ಇದಾಗಿದೆ. ಇದು ಮಾತ್ರವಲ್ಲದೇ ಹೀರೋ ತನ್ನ ಪ್ರಸಿದ್ದ ಬೈಕ್ ಮಾಡೆಲ್ ಆದ ಎಕ್ಸ್‌ಪಲ್ಸ್ ನ 400 ಸಿಸಿ ಆವೃತ್ತಿಯನ್ನು ಸಹ ಅಭಿವೃದ್ದಿ ಪಡಿಸುತ್ತಿದ್ದು, ಆದಷ್ಟು ಬೇಗ ಮಾರುಕಟ್ಟೆಗೆ ತರಲಿದೆ ಎಂದು ತಿಳಿದು ಬಂದಿದೆ.

ಪರ್ಫಾಮೆನ್ಸ್: ಹೀರೋ ಮಾರ್ವಿಕ್ ತನ್ನ 440 ಸಿಸಿ ಎಂಜಿನ್ ಸಹಾಯದಿಂದ ಸುಮಾರು 26 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 37 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.
ಸಸ್ಪೆನ್ಷನ್ ಸೆಟಪ್: ಹೀರೋ ಮಾವ್ರಿಕ್ 440 ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ (ರೇರ್) 7 - ಸ್ಟೆಪ್ ಅಡ್ಜಸ್ಟ್ಏಬಲ್ ಟ್ವಿನ್ ಶಾಕ್ ಸೆಟಪ್ ಅನ್ನು ಹೊಂದಿದೆ. ಆಸನ (ಸೀಟ್) ಎತ್ತರ 803 ಎಂಎಂ ಇದೆ. ವೀಲ್‌ಬೇಸ್ 1388 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಅಳತೆಯಲ್ಲಿದ್ದು, ಈ ಬೈಕ್ 191 ಕೆಜಿ ತೂಕವಿದೆ.

ಬೆಲೆ: ಹೀರೋ ಮಾರ್ವಿಕ್‌ನ ಬೆಲೆಯನ್ನು ನೋಡುವುದಾದರೆ ಎಂಟ್ರಿ ಲೆವೆಲ್ ವೇರಿಯಂಟ್ ರೂ.1.99 ಲಕ್ಷ, ಟಾಪ್ ಎಂಡ್ ವೇರಿಯಂಟ್ ರೂ.2.24 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಸುಮಾರು ಎರಡೂ ಕಾಲು ಲಕ್ಷದೊಳಗೆ ಒಂದು ಕ್ರೂಸರ್ ಪವರ್‌ಫುಲ್ ಬೈಕ್ ಬೇಕೆನ್ನುವವರಿಗೆ ಹೀರೋ ಮಾರ್ವಿಕ್ 440 ಒಂದು ಉತ್ತಮ ಆಯ್ಕೆಯಾಗಬಲ್ಲದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








