ಹೀರೋ ಸರ್ಜ್ 2 ಇನ್ 1 ವಿಡಿಯೋ ವೈರಲ್: ಒಂದೇ ವಾಹನದಲ್ಲಿ ಆಟೋ ಮತ್ತು ಸ್ಕೂಟರ್!
ಭಾರತದ ಫೇವರಿಟ್ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಾದ ಹೀರೋ, ಸದಾ ಒಂದಿಲ್ಲೊಂದು ಹೊಸತನವನ್ನು ಭಾರತೀಯರಿಗೆ ಪರಿಚಯಿಸಿ ಭಾರತೀಯರ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಸದ್ಯಕ್ಕೆ ಹೀರೋ ಮಾರ್ವಿಕ್ ೪೪೦ ಬೈಕ್ ಅನ್ನು ಮಾರುಕಟ್ಟೆಗೆ ತಂದಿದ್ದು, ಮತ್ತೊಂದು ಹೊಸ ಸಂಶೋಧನೆಯನ್ನು ಸದ್ಯದಲ್ಲೇ ಭಾರತೀಯರ ಮುಂದಿಡಲಿದೆ.
ಹೀರೋ ಕಂಪನಿಯ ಸ್ಟಾರ್ಟ್‌ಅಪ್ ಒಂದು ತಮ್ಮ ಹೊಸ ವಾಹನದ ಕುರಿತಾಗಿ ಸುಳಿವೊಂದನ್ನಿ ನೀಡಿದೆ. ಇದನ್ನು ನೋಡಿ ಈಗಾಗಲೇ ಬೆರಗಾಗಿರುವ ಇವಿ ಲೋಕದ ಇತರ ಕಂಪನಿಗಳು ಈ ವಾಹನದ ಕುರಿತಾಗಿಯೇ ಚರ್ಚೆ ಮಾಡುತ್ತಿದೆ. ಹೌದು, ಹೀರೋ ಮೋಟೋಕಾರ್ಪ್ ಆಧೀನದಲ್ಲಿರುವ ಸರ್ಜ್ (Hero MotoCorp Surge S32) ಎನ್ನುವ ಸ್ಟಾರ್ಟ್‌ಅಪ್ ಹೊಸ ವಾಹನವೊಂದನ್ನು ರಿವೀಲ್ ಮಾಡಿದ್ದು ಇದನ್ನು ಎಸ್32 ಎಂದು ಹೆಸರಿಸಲಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹೊಸ ಸರ್ಜ್ ಎಸ್32 ಕುರಿತಾದ ವಿಡಿಯೋಗಳು ಔದ್ಯೋಗಿಕವಾಗಿ ಬಿಡುಗಡೆಯಾಗಿದ್ದು ಎಲ್ಲರ ಗಮನ ಸೆಳೆದಿದೆ. ಇಂದಿನ ಈ ಲೇಖನದಲ್ಲಿ ಹೊಸ ಹೀರೋ ಸರ್ಜ್ ಎಸ್32, 2 ಇನ್ 1 ವಾಹನದಲ್ಲಿನ ವಿಶೇಷತೆಗಳೇನು ಎಂದು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.
ಸರ್ಜ್ ಈಗಾಗಗಲೇ ಈ ವಾಹನವನ್ನು ಅನಾವರಣಗೊಳಿಸಿದ್ದು, ಕ್ಲಾಸ್ ಶಿಫ್ಟಿಂಗ್ ವೆಹಿಕಲ್ ಎಂಬ ಕ್ಯಾಟಗರಿಗೆ ಇದನ್ನು ಸೇರಿಸಿದೆ. ಈ ವಾಹನವನ್ನು ಬಳಸಿಕೊಂಡು ಗೂಡ್ಸ್‌ಗಳನ್ನು ಸರಬರಾಜು ಮಾಡುವುದು ಮಾತ್ರವಲ್ಲದೇ ಇಷ್ಟ ಬಂದಾಗ ಇದರಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರ ತೆಗೆದು ನಮ್ಮ ಇಷ್ಟಕ್ಕೆ ಬಳಸಬಹುದಾಗಿದೆ.

ಈ ವಾಹನದ ವಿಶೇಷತೆ ಏನೆಂದರೆ, ಕೇವಲ ಒಂದು ಬಟನ್ ಒತ್ತುವುದರ ಮೂಲಕ, ಇದರಲ್ಲಿರುವ ದ್ವಿಚಕ್ರ ವಾಹನ ಹೊರಗೆ ಬರಲಿದೆ. ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ಎರಡೂ ಸಹ ಒಂದೇ ವಾಹನದಲ್ಲಿರಲಿದ್ದು, ಅಗತ್ಯಕ್ಕೆ ತಕ್ಕಂತೆ ಬೇಕಾದ ರೀತಿಯಲ್ಲಿ ಈ ವಾಹನವನ್ನು ನಾವು ಬಳಸಬಹುದಾಗಿದೆ. ವಾಣಿಜ್ಯ ದೃಷ್ಟಿಯಲ್ಲಿ ಇದು ಬಹಳಷ್ಟು ಸಹಕಾರಿಯಾಗಲಿದೆ ಎಂದು ಈಗಾಗಲೇ ವಾಹನ ಕ್ಷೇತ್ರ ಭವಿಷ್ಯ ನುಡಿದಾಗಿದೆ.
ಇನ್ನು ಈ ವಾಹನದ ಇತರ ಫೀಚರ್‌ಗಳನ್ನು ನೋಡುವುದಾದರೆ ರಿಕ್ಷಾ 3W ಬ್ಯಾಟರಿಂದ ಚಾಲಿತವಾಗಿದ್ದು ಮುಂದೆ ಕೂರಲು ವಿಶಾಲವಾದ ವಿಂಡ್ ಸ್ಕ್ರೀನ್ ಅನ್ನು ನೀಡಿದೆ. ಇದರ ಜೊತೆಗೆ ಉತ್ತಮ ಪ್ರಕಾಶವುಳ್ಳ ಹೆಡ್‌ಲೈಟ್ ಮತ್ತು ಇಂಡಿಕೇಟರ್‌ಗಳನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದ್ದು, ಎಲ್ಲರ ಗಮನ ಇದರತ್ತ ಸೆಳೆದಿದೆ. ಈ ವಾಹನದ ಹೆಚ್ಚಿನ ವಿವರಗಳು ಕೆಲವೇ ದಿಗಳಲ್ಲಿ ಹೊರಬರಲಿದೆ.

ಹೀರೋ ಸರ್ಜ್ ಎಸ್32 ವಾಹನದ ಪವರ್ ನೊಡುವುದಾದರೆ, ತ್ರಿಚಕ್ರ ವಾಹನ, ಅಥವಾ ಆಟೋ ರಿಕ್ಷಾ ರೀತಿಯಲ್ಲಿ ಇದನ್ನು ಬಳಸುವುದಾದರೆ ಈ ವಾಹನ ಸುಮಾರು 13.4 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಅದೇ ರೀತಿ ಸ್ಕೂಟರ್ ಆಗಿ ಬಳಸುವಾಗ ಸುಮಾರು 4 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.
ಈ ವಾಹನವನ್ನು ಖರೀದಿಸುವುದರಿಂದ ಎರಡು ಮಾದರಿಯ ವಾಹನವನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಬಹುದು. ಸರ್ಜ್ ಕಂಪನಿ ಕೊಟ್ಟಿರುವ ಮಾಹಿತಿಯ ಪ್ರಕಾರ ಈ ಎಲೆಕ್ಟ್ರಿಕ್ ಗೂಡ್ಸ್ ಸೆಟ್‌ಅಪ್‌ನಿಂದ ಸ್ಕೂಟರ್ ಅನ್ನು ಬೇರ್ಪಡಿಸಲು ಕೇವಲ ಮೂರು ನಿಮಿಷಗಳು ಸಾಕು ಎಂದು ತಿಳಿದು ಬಂದಿದೆ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಸಹಾಯವಿಲ್ಲದೇ ಸ್ಕೂಟರ್ ಮತ್ತು ರಿಕ್ಷಾವನ್ನು ಬೇರೆ ಬೇರೆ ಮಾಡಬಹುದು ಎಂದು ತಿಳಿದು ಬಂದಿದೆ.
ಹೀರೋ ಸರ್ಜ್ ಎಸ್32 ವಾಹನದ ವೇಗವನ್ನು ಗಮನಿಸುವುದಾದರೆ, ಈ ವಾಹನ ಆಟೋ ರಿಕ್ಷಾ ಆಗಿರುವ ಸಂಧರ್ಭದಲ್ಲಿ ಪ್ರತಿ ಗಂಟೆಗೆ ಸುಮಾರು 50 ಕಿಮೀ ವೇಗದಲ್ಲಿ ಚಲಿಸುತ್ತದೆ. ಅದೇ ದ್ವಿಚಕ್ರ ವಾಹನದ ಸಂಧರ್ಭದಲ್ಲಿ ಇದರ ವೇಗ ಇನ್ನೂ ಕೊಂಚ ಅಧಿಕವಾಗಿದ್ದು, ಇದು ಗಂಟೆಗೆ ಸುಮಾರು 60 ಕಿಮೀ ವೇಗದಲ್ಲಿ ಚಲಿಸುತ್ತದೆ ಎನ್ನಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








