Hero: ಹೀರೋ ವಿಡಾ ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ಗುಡ್‌ನ್ಯೂಸ್.. ಈಗ ಬಿಟ್ಟರೆ ಮತ್ತೆ ಸಿಗಲ್ಲ
ಭಾರತದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ (Hero) ಖ್ಯಾತಿ ಗಳಿಸಿದೆ. ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳಿಗೆ ಪ್ರತ್ಯೇಕ ಅಭಿಮಾನ ಬಳಗವಿದೆ. ಇದೀಗ, ವಿಡಾ ವಿ1 ಪ್ರೊ (Vida V1 Pro) ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಿಗೆ ಭರ್ಜರಿ ಗುಡ್‌ನ್ಯೂಸ್ ದೊರೆತಿದೆ.
ಹೀರೋ ವಿಡಾ ವಿ1 ಪ್ರೊ (Hero Vida V1 Pro) ಗ್ರಾಹಕರಿಗಾಗಿ ವಿಡಾ ಅಡ್ವಾಂಟೇಜ್ ಪ್ಯಾಕೇಜ್ (Vida Advantage Package) ಅನ್ನು ಪರಿಚಯಿಸಲಾಗಿದೆ. ಇದು ರೂ.27,000 ಮೌಲ್ಯದ ಹಲವು ಪ್ರಯೋಜನವನ್ನು ಹೊಂದಿದೆ. ಏಪ್ರಿಲ್ 30 ರವರೆಗೆ ವಿಡಾ ವಿ1 ಪ್ರೊ ಮಾಲೀಕರಿಗೆ ಶೂನ್ಯ ವೆಚ್ಚದಲ್ಲಿ ಈ ಪ್ಯಾಕೇಜ್ ಲಭ್ಯವಿರಲಿದೆ.

ಈ ವಿಡಾ ಅಡ್ವಾಂಟೇಜ್ ಪ್ಯಾಕೇಜ್ 5 ವಿವಿಧ ಸೌಲಭ್ಯಗಳನ್ನು ಪಡೆದಿದೆ. ಬ್ಯಾಟರಿಗಾಗಿ 5 ವರ್ಷ ಅಥವಾ 60,000 ಕಿ.ಮೀ ವಾರಂಟಿ, ದೇಶದ ವಿವಿಧ ಭಾಗಗಳಲ್ಲಿರುವ 2,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳಿಗೆ ಉಚಿತ ಪ್ರವೇಶ, ಎಲ್ಲ ವಿಡಾ ವರ್ಕ್‌ಶಾಪ್‌ಗಳಲ್ಲಿ ಉಚಿತ ಸರ್ವಿಸ್, ರಸ್ತೆಯಲ್ಲಿ ಸ್ಕೂಟರ್ ಕೆಟ್ಟು ನಿಂತರೆ ಅಥವಾ ತಾಂತ್ರಿಕ ದೋಷ ಕಂಡುಬಂದರೆ 24x7 ನೆರವು ಸೇರಿದಂತೆ ಅನೇಕ ಪ್ರಯೋಜನಗಳು ದೊರೆಯುತ್ತವೆ.
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೀರೋ ವಿಡಾ ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಸುಮಾರು ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 3.94 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಇತ್ತೀಚೆಗೆ ಹೀರೋ ವಿಡಾ (Hero Vida) ಸ್ಕೂಟರ್‌ನ ವಿ1 ಪ್ಲಸ್ (V1 Plus) ರೂಪಾಂತರವನ್ನು ಮರು ಬಿಡುಗಡೆಗೊಳಿಸಲಾಗಿತ್ತು. ಇದು ರೂ.1.15 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 3.44 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ಓಡುತ್ತದೆ.
ಇವೆರೆಡು ಮಾದರಿಗಳು ಒಂದೇ ರೀತಿಯ 6 ಕೆಡಬ್ಲ್ಯೂ (kW) ಎಲೆಕ್ಟ್ರಿಕ್ ಮೋಟರ್ ಒಳಗೊಂಡಿದ್ದು, ಗಂಟೆ 80 ಕಿ.ಮೀ ಗರಿಷ್ಠ ವೇಗ (ಟಾಪ್ ಸ್ವೀಡ್) ವನ್ನು ಹೊಂದಲಿವೆ. ಕೇವಲ 3.4 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿವೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿವೆ.
ಹೀರೋ ಕಂಪನಿಯು 'ವಿಡಾ ಅಡ್ವಾಂಟೇಜ್ ಪ್ಯಾಕೇಜ್' ಘೋಷಣೆ ಮಾಡಿರುವುದು ವಿಡಾ ವಿ1 ಪ್ರೊ ಸ್ಕೂಟರ್ ಮಾಲೀಕರಿಗೆ ಖುಷಿ ತಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹತ್ತಾರು ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳಬಹುದು. ಕಳೆದ ಜನವರಿಯಲ್ಲಿ ಹೀರೋ 1,494 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








