Hero: ಸಿಹಿಸುದ್ದಿ.. ಹೊಸ ಹೀರೋ ಇ-ಸ್ಕೂಟರ್ ಬರತ್ತೆ, ಬೆಲೆ ಇಷ್ಟೇನಾ.. ನಿರೀಕ್ಷೆಗೂ ಮೀರಿದ ಫೀಚರ್‌ಗಳು!
ಹೀರೋ ಮೋಟೊಕಾರ್ಪ್ (Hero MotoCorp), ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿಡಾ (Vida) ಸರಣಿಯ ವಿ1 ಪ್ಲಸ್ ಮತ್ತು ವಿ1 ಪ್ರೊ ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕಳೆದ ತಿಂಗಳು (ನವೆಂಬರ್ - 2024) ಈ ಸ್ಕೂಟರ್‌ಗಳ ಮಾರಾಟದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಬರೋಬ್ಬರಿ 7,309 ಯುನಿಟ್ 'ವಿಡಾ' ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 3047 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 140% ಪ್ರಗತಿ ಸಾಧಿಸಲಾಗಿದೆ.
ಸದ್ಯ, ಹೀರೋ ಕಂಪನಿಯು ವಿಡಾ ವಿ2 (Vida V2) ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ವಿ2 ಪ್ರೊ, ವಿ2 ಪ್ಲಸ್ ಹಾಗೂ ವಿ2 ಲೈಟ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ತಯಾರಿಸುತ್ತಿದೆ. ಇವುಗಳಲ್ಲಿ ವಿ2 ಲೈಟ್ (V2 Lite) ಆರಂಭಿಕ ಶ್ರೇಣಿ ಮಾದರಿ (ಎಂಟ್ರಿ ಲೆವೆಲ್ ಮಾಡೆಲ್) ಆಗಿದೆ. ನಾವಿಲ್ಲಿ ನೂತನ 'ವಿಡಾ ವಿ2 ಲೈಟ್' ಇ-ಸ್ಕೂಟರ್‌ನ ನೀರಿಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಚ್ಚ ಹೊಸ ಹೀರೋ ವಿಡಾ ವಿ2 ಲೈಟ್ (Hero Vida V2 Lite) ಎಲೆಕ್ಟ್ರಿಕ್ ಸ್ಕೂಟರ್, ರೂ.90,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 64 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ ಎಂದು ಅಂದಾಜಿಲಾಗಿದೆ.
ಈ ವಿಡಾ ವಿ2 ಲೈಟ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಶಕ್ತಿಯುತವಾಗಿರುವ 3.9 ಕೆಡಬ್ಲ್ಯೂ ಮೋಟಾರ್ ಬಳಕೆ ಮಾಡುವ ನಿರೀಕ್ಷೆಯಿದೆ. 69 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿರಲಿದೆ. ಜೊತೆಗೆ ಇದರ ಬ್ಯಾಟರಿ ಪ್ಯಾಕ್ ಶೇಕಡ 0 ರಿಂದ 80% ಚಾರ್ಜ್ ಆಗಲು ಮೂರುವರೆ ಗಂಟೆ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ನೂತನ ಎಲೆಕ್ಟ್ರಿಕ್ ಸ್ಕೂಟರ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಗ್ಲೋಸಿ ಸ್ಪೋರ್ಟ್ಸ್ ರೆಡ್, ಗ್ಲೋಸಿ ಬ್ಲ್ಯಾಕ್ & ಮ್ಯಾಟ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯಿದೆ. ಫಾಲೋ-ಮಿ-ಹೋಮ್ ಲೈಟ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಟು-ವೇ ಥ್ರೊಟಲ್ ಒಳಗೊಂಡಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಕೂಡ ಹೊಂದಿರಲಿದೆ ಎನ್ನಲಾಗಿದೆ.
ಹೊಸ ಹೀರೋ ವಿಡಾ ವಿ2 ಲೈಟ್ ಎಲೆಕ್ಟ್ರಿಕ್ ಸ್ಕೂಟರ್, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿರಲಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಜೊತೆಗೆ 12-ಇಂಚಿನ ವೀಲ್‌ಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ.
ದೇಶೀಯವಾಗಿ ಖರೀದಿಗೆ ದೊರೆಯುವ ನೂತನ ಹೀರೋ ವಿಡಾ ವಿ1 ಇ-ಸ್ಕೂಟರ್, ಕನಿಷ್ಠ ರೂ.1.20 ಲಕ್ಷ ಹಾಗೂ ಗರಿಷ್ಠ ರೂ.1.50 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 3.44 ಕೆಡಬ್ಲ್ಯೂಹೆಚ್ ಮತ್ತು 3.94 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 100 ರಿಂದ 110 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








