ಹೀರೋ ಆಗಿ ಮಾರುಕಟ್ಟೆಯಲ್ಲಿ ಮರೆಯಲಿದೆ ಝೂಮ್ 160 ADV: ಪಕ್ಕಾ ಲುಕ್, ಫೀಚರ್ ಪ್ಯಾಕ್!
ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ತನ್ನ ಆಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಯೋಜನೆಯಲ್ಲಿದ್ದು, ಇದರ ಕುರುಹಾಗಿ ಹೀರೋ ಕೆಲವು ವಾರಗಳ ಹಿಂದೆಯಷ್ಟೇ ಮಾರ್ವಿಕ್ 440 ಎಂಬ ಬೈಕ್ ಒಂದನ್ನು ಲಾಂಚ್ ಮಾಡಿತ್ತು. ಇದು 400 ಸಿಸಿ ಸೆಗ್ಮೆಂಟ್‌ನಲ್ಲಿ ಹೀರೋ ಲಾಂಚ್ ಮಾಡಿದ ಮೊದಲ ಬೈಕ್.
ಇಷ್ಟು ಮಾತ್ರವಲ್ಲದೇ ಹೀರೋ 400 ಸಿಸಿಯ ಎಕ್ಸ್‌ಪಲ್ಸ್ ಅನ್ನು ಸಹ ಅಭಿವೃದ್ದಿಪಡಿಸುತ್ತಿದ್ದು ಆದಷ್ಟು ಬೇಗ ಇದು ಭಾರತೀಯ ಮಾರುಕಟ್ಟೆಗೆ ದಾಪುಗಾಲಿಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ಹೀರೋ ಬಹಳಷ್ಟು ಬೈಕ್‌ಗಳನ್ನು ಅಭಿವೃದ್ದಿ ಪಡಿಸುತ್ತಿದ್ದು ಅದರಲ್ಲಿ ಒಂದು ಹೊಸ ಝೂಮ್ 160 ಎಡಿವಿ (Hero Xoom 160 ADV). ಹೌದು, ಝೂಮ್ 160 ಎಡಿವಿ ಎಂಬ ಮ್ಯಾಕ್ಸಿ ಸ್ಕೂಟರ್‌ನ ಹೀರೋ ಕಡೆಯಿಂದ ಬರುತ್ತಿರುವ ಮೊದಲ ಪ್ರೀಮಿಯಂ ಸ್ಕೂಟರ್ ಆಗಿರಲಿದೆ.

ಈಗಾಗಲೇ ಈ ಸ್ಕೂಟರ್ ಅನ್‌ವೀಲ್ ಆಗಿದ್ದು, ಔದ್ಯೋಗಿಕವಾಗಿ ಇನ್ನಷ್ಟೇ ಲಾಂಚ್ ಆಗಬೇಕಿದೆ. ನೋಡಲು ಅತ್ಯಾಕರ್ಷಕ ಅಗ್ರೆಸಿವ್ ಲುಕ್‌ನಿಂದ ಕಂಗೊಳಿಸುತ್ತಿರುವ ಈ ಸ್ಕೂಟರ್ ಅಡ್ವೆಂಚರ್ ಸೆಗ್ಮೆಂಟ್‌ಗೆ ಸೇರಿದೆ. ಪ್ರೀಮಿಯಂ ಸೆಗ್ಮೆಂಟ್ ಸ್ಕೂಟರ್ ಆಗಿರುವುದರಿಂದ ಇದರಲ್ಲಿ ಭರಪೂರ ಫೀಚರ್‌ಗಳು ಇರುವ ಸಾಧ್ಯತೆಗಳಿದೆ. ಇದರಲ್ಲಿ ಪ್ರಮುಖವಾದವು ರಿಮೋಟ್ ಸೀಟ್ ಓಪನ್, ಕೀ ಲೆಸ್ ಸ್ಟಾರ್ಟ್, ಎಲ್‌ಇಡಿ ಹೆಡ್‌ಲೈಟ್‌ಗಳು ಮುಖ್ಯವಾದವು.
ಇನ್ನು ಹೊಸ ಝೂಮ್ 160 ಸ್ಕೂಟರ್‌ನಲ್ಲಿ 155 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಸಿಗಲಿದ್ದು, ಈ ಎಂಜಿನ್ ಸಹಾಯದಿಂದ ಝೂಮ್ 160, 14 ಬಿಹೆಚ್‌ಪಿ ಪವರ್ ಮತ್ತು 13.7 ಎನ್‌ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ರೈಡರ್‌ಗಳಿಗೆ ಉತ್ತಮ ಅನುಭವವನ್ನು ನೀಡಲಿದೆ. ೨೦೨೪ ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಈ ಬೈಕ್ ಅನ್ನು ಅನಾವರಣಗೊಳಿಸಲಾಗಿತ್ತು.

ಹೀರೋ ಮಾತ್ರವಲ್ಲದೇ ಯಮಹಾ ಸಹ ಈ ಬಾರಿಯ ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ಹೊಸ ಸ್ಕೂಟರ್ ಒಂದನ್ನು ಅನಾವರಣ ಮಾಡಿತ್ತು. NMax 155 ಎಂಬ ಸ್ಕೂಟರ್ ಅನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದು, ಅತೀ ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.
ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ 110 ಸಿಸಿಯ ಝೂಮ್ ಲಭ್ಯವಿದೆ. ಈ ಹೊಸ ಹೀರೋ Xoom ಸ್ಕೂಟರ್ ಏರ್-ಕೂಲ್ಡ್ 110.9 cc ಫ್ಯುಯೆಲ್-ಇಂಜೆಕ್ಟೆಡ್, ಸಿಂಗಲ್-ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.05 bhp ಪವರ್ ಮತ್ತು 8.70 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
Xoom ಸ್ಕೂಟರ್ ಎಂಜಿನ್ ಹೀರೋನ ಪೇಟೆಂಟ್ ಪಡೆದ i3S ಸ್ಟಾರ್ಟ್-ಸ್ಟಾಪ್ ಟೆಕ್ ಅನ್ನು ಸಹ ಒಳಗೊಂಡಿದೆ. ಈ ಎಂಜಿನ್ ಅನ್ನು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.ಹೊಸ ಹೀರೋ Xoom ಸ್ಕೂಟರ್ ತೀಕ್ಷ್ಣವಾದ ಸ್ಟೈಲಿಂಗ್ ಮತ್ತು 110cc ಎಂಜಿನ್ ನೊಂದಿಗೆ ಉತ್ತಮವಾದ ಸಸ್ಪೆನ್ಶನ್ ಸೆಟಪ್ ಅನ್ನು ಹೊಂದಿದೆ. ಈ ಹೀರೋ Xoom ಸ್ಕೂಟರ್ ಅತ್ಯಾಧುನಿಕ ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ. ಇನ್ನು ಈ ಸ್ಕೂಟರ್ ನಗರ ಪ್ರದೇಶದ ಗ್ರಾಹಕರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications