Hero: ಹೀರೋ ಜೂಮ್ ಸ್ಕೂಟರ್ ಮನೆಗೆ ತರಬೇಕೇ.. ಆನ್ ರೋಡ್ ಬೆಲೆ ಎಷ್ಟು, EMI ಏನು?

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್‌ ಹಾಗೂ ಸ್ಕೂಟರ್‌ಗಳು ವರ್ಷಗಳಿಂದ ಮಧ್ಯಮ ವರ್ಗದವರ ಮನಸ್ಸನ್ನು ಗೆದ್ದಿವೆ. ಸದ್ಯ ಹೀರೋ ಜೂಮ್ (Hero Xoom) ಅತ್ಯಂತ ಕಡಿಮೆ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯದೊಂದಿಗೆ ಖರೀದಿಗೆ ಲಭ್ಯವಿದೆ. ನಿಮ್ಮ ದಿನನಿತ್ಯದ ಬಳಕೆಗಾಗಿ ಈ ಸ್ಕೂಟರ್ ಹೆಚ್ಚು ಸೂಕ್ತವಾಗಿದ್ದು, ಕೆಲವೇ ಸಾವಿರಗಳಲ್ಲಿ ಮನೆಗೆ ತರಬಹುದು. ಇಲ್ಲಿ ನೂತನ 'ಜೂಮ್'ನ ಆನ್ ರೋಡ್ (On Road) ಬೆಲೆ ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಹೊಚ್ಚ ಹೊಸ ಹೀರೋ ಜೂಮ್ (Hero Xoom) ಸ್ಕೂಟರ್ ಹಲವು ರೂಪಾಂತರ (ವೇರಿಯೆಂಟ್)ಗಳೊಂದಿಗೂ ದೊರೆಯುತ್ತದೆ. ಬೆಂಗಳೂರಿನಲ್ಲಿ ಇದರ 'ಝಡ್ಎಕ್ಸ್' ಮಾದರಿಯು ರೂ.1,06,712 ಆನ್ ರೋಡ್ ಬೆಲೆಯನ್ನು ಹೊಂದಿದೆ. ರೂ.10,000 ಡೌನ್‌ಪೇಮೆಂಟ್‌ ಪಾವತಿಸಿ ಈ ಸ್ಕೂಟರ್‌ನ್ನು ಖರೀದಿಸಿದರೆ, ಶೇಕಡ 9.7% ಬಡ್ಡಿ ದರದಲ್ಲಿ ರೂ.96,712 ಸಾಲದ ಮೊತ್ತಕ್ಕೆ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.3,107 ಇಎಂಐ ಕಟ್ಟಬೇಕು.

Hero Xoom Scooter On Road Price And Emi Details

ಹೀರೋ ಜೂಮ್ (Hero Xoom) ಎಲ್ಎಕ್ಸ್ ಮಾದರಿಯು ರೂ.95,391 ಆನ್ ರೋಡ್ ಬೆಲೆಯನ್ನು ಹೊಂದಿದೆ. ಇದನ್ನು ಸಹ ರೂ.10,000 ಡೌನ್‌ಪೇಮೆಂಟ್‌ ಪಾವತಿಸಿ ಕೊಂಡುಕೊಂಡರೆ, ಶೇಕಡ 9.7% ಬಡ್ಡಿ ದರ (Interest Rate)ದಲ್ಲಿ ರೂ.85,391 ಸಾಲದ ಮೊತ್ತ (Loan Amount)ಕ್ಕೆ ರೂ.2,743 ಇಎಂಐ ಕಟ್ಟಬೇಕು.

ಜೂಮ್ ವಿಎಕ್ಸ್ ಆವೃತ್ತಿಯು ರೂ.1,00,912 ಆನ್ ರೋಡ್ (On Road) ದರವನ್ನು ಪಡೆದಿದೆ. ನೀವು ರೂ.10,000 ಡೌನ್‌ಪೇಮೆಂಟ್‌ (Down Payment) ಕಟ್ಟಿ ಈ ಸ್ಕೂಟರ್‌ ಮನೆಗೆ ತಂದರೆ, ರೂ.90,912 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿಯನ್ನು ಹಾಕಿ, 3 ವರ್ಷಗಳಿಗೆ ರೂ.2,921 ಇಎಂಐ (EMI) ಪಾವತಿಸಬೇಕು.

ನೂತನ ಹೀರೋ ಜೂಮ್ 110.9 ಸಿಸಿ, ಏರ್ ಕೋಲ್ಡ್ ಫ್ಯುಯೆಲ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.15 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 8.70 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 45 ಕೆಎಂಪಿಎಲ್‌ ವರೆಗೆ ಮೈಲೇಜ್ ಕೊಡುತ್ತದೆ.

ಹೀರೋ ಜೂಮ್ ಸ್ಕೂಟರ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್, ಅಂಡರ್ ಸೀಟ್ ಸ್ಟೋರೇಜ್ ನಲ್ಲಿ ಎಲ್ಇಡಿ ಲೈಟ್, ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 109 ಕೆಜಿ ತೂಕವಿರುವ ಈ ಸ್ಕೂಟರ್ 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಹೊಸ ಸ್ಕೂಟರ್ ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್, ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆಷನ್ ಸೆಟಪ್ ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದ್ದು, 12-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಈ ಸ್ಕೂಟರ್‌ಗೆ ಹೋಂಡಾ ಡಿಯೋ ಮತ್ತು ಟಿವಿಎಸ್ ಸ್ಕೂಟಿ ಜೆಸ್ಟ್ 110 ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 10, 2024, 21:31 [IST]
English summary
Hero xoom scooter on road price and emi details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+