ಕೊನೆಗೂ ಗೆದ್ದ ಬಡವರ ಬಂಡಿಗಳು... ಹೊಸ ದಾಖಲೆ ನಿರ್ಮಿಸಿದ ಹೋಂಡಾ

ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಮಧ್ಯಪ್ರದೇಶದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೂಲಕ ಹೋಂಡಾ ಕಂಪನಿಯು ಹೊಸ ದಾಖಲೆ ನಿರ್ಮಿಸಿದೆ. ಕಂಪನಿಯು ಜೂನ್ 2001 ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಇಲ್ಲಿಯವರೆಗೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ನೀಡುತ್ತಿರುವುದಾಗಿ ಹೋಂಡಾ ಹೇಳಿಕೊಂಡಿದೆ.

HMSI ಮಧ್ಯಪ್ರದೇಶದಲ್ಲಿ 350 ಕ್ಕೂ ಹೆಚ್ಚು ನೆಟ್‌ವರ್ಕ್ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ (5 ಬಿಗ್‌ವಿಂಗ್ ಔಟ್‌ಲೆಟ್‌ಗಳನ್ನು ಒಳಗೊಂಡಂತೆ). 30 ಲಕ್ಷ ಮಾರಾಟದ ಮೈಲಿಗಲ್ಲು ನಮ್ಮ ತಂಡದ ಅವಿರತ ಪ್ರಯತ್ನದ ಜೊತೆಗೆ ನಮ್ಮ ನಿಷ್ಠಾವಂತ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹೋಂಡಾ ತಿಳಿಸಿದೆ.

honda-achieves-30-lakh-customer-milestone-in-madhya-pradesh

ಆಕ್ಟಿವಾ ಸೇರಿದಂತೆ ಕಂಪನಿಯ 125cc ಕಮ್ಯೂಟರ್ ಮೋಟಾರ್‌ಸೈಕಲ್‌ಗಳು (ಶೈನ್ 125 ಮತ್ತು SP125) ರಾಜ್ಯದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೋಂಡಾ ವಾಹನಗಳಾಗಿವೆ. ಇದಲ್ಲದೆ, ಹೊಸ ಶೈನ್ 100 ಕೈಗೆಟುಕುವ ಬೆಲೆಯೊಂದಿಗೆ ಹಣಕ್ಕೆ ತಕ್ಕ ಮೌಲ್ಯದ ದ್ವಿಚಕ್ರ ವಾಹನವನ್ನು ನೋಡುತ್ತಿದ್ದ ಅನೇಕ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಮುನ್ನುಗ್ಗುತ್ತಿದೆ.

ಕಂಪನಿಯು ಪ್ರಸ್ತುತ 110cc ಸ್ಕೂಟರ್ ವಿಭಾಗದಲ್ಲಿ ಆಕ್ಟೀವಾ ಮತ್ತು ಡಿಯೋ, 125cc ವಿಭಾಗದಲ್ಲಿ ಆಕ್ಟೀವಾ 125 ಮತ್ತು ಡಿಯೋ 125 ವಾಹನಗಳನ್ನು ನೀಡುತ್ತಿದೆ. ಹಾಗೆಯೇ 100-110cc ಮೋಟಾರ್‌ಸೈಕಲ್ ವಿಭಾಗದಲ್ಲಿ ಶೈನ್ 100, CD 110 Dre ನಾದ್ಯಂತ ಒಂಬತ್ತು ಅತ್ಯಾಕರ್ಷಕ ಮಾದರಿಗಳಿವೆ. 125cc (ಶೈನ್ 125 & SP125), 160cc (ಯುನಿಕಾರ್ನ್ & SP160) ಮತ್ತು 180-200cc (ಹಾರ್ನೆಟ್ 2.0 & CB200X) ವಾಹನಗಳಿವೆ.

honda-achieves-30-lakh-customer-milestone-in-madhya-pradesh

ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಿಗ್‌ವಿಂಗ್ ಮೂಲಕ ಹೊಸ CB350, H'ness CB350, CB350RS, CB300F, CB300R, NX500, XL750 ಟ್ರಾನ್ಸಾಲ್ಪ್, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಟೂರ್ ಅನ್ನು ನೀಡುತ್ತಿದೆ. ಇದಲ್ಲದೆ, ಹಾರ್ನೆಟ್ 2.0 ಮತ್ತು CB200X ಅನ್ನು ಈಗ ಬಿಗ್‌ವಿಂಗ್ ಶೋರೂಮ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ಹೊಸ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯೋಗೇಶ್ ಮಾಥುರ್, "ಮಧ್ಯಪ್ರದೇಶದಲ್ಲಿ 30 ಲಕ್ಷ ವಾಹನಗಳ ಮಾರಾಟದ ಮೈಲಿಗಲ್ಲನ್ನು ತಲುಪಿರುವುದು ಹೋಂಡಾ ಬ್ರ್ಯಾಂಡ್‌ನ ಮೇಲೆ ನಮ್ಮ ಗ್ರಾಹಕರು ಇಟ್ಟಿರುವ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ.

honda-achieves-30-lakh-customer-milestone-in-madhya-pradesh

ಈ ಸಾಧನೆಯು ಶ್ರೇಷ್ಟತೆಯನ್ನು ನೀಡಲು ಶ್ರದ್ಧೆಯಿಂದ ಕೆಲಸ ಮಾಡುವ ನಮ್ಮ ತಂಡ ಮತ್ತು ಡೀಲರ್ ಪಾಲುದಾರರು ಮಾಡಿದ ದಣಿವರಿಯದ ಪ್ರಯತ್ನಗಳ ಫಲಿತಾಂಶವಾಗಿದೆ. ಮಧ್ಯಪ್ರದೇಶದ ಜನರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಅವರ ಜೀವನಕ್ಕೆ ಸಂತೋಷ ಮತ್ತು ಮೌಲ್ಯವನ್ನು ತರುವ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿರುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 22, 2024, 18:25 [IST]
English summary
Honda achieves 30 lakh customer milestone in madhya pradesh
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+