ಹೋಂಡಾ ಕಂಪನಿಗೆ ಭರ್ಜರಿ ಉಡುಗೊರೆ ಕೊಟ್ಟ ತಮಿಳುನಾಡು ಜನ! ಯಾರೂ ಊಹಿಸಿರಲಿಲ್ಲ!
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ತಮಿಳುನಾಡಿನಲ್ಲಿ 5 ಮಿಲಿಯನ್ (50 ಲಕ್ಷ) ವಾಹಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಜೂನ್ 2001 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ, ಹೋಂಡಾ ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಶ್ರಮಿಸಿದೆ, ಉತ್ತಮ ಕಾರ್ಯಕ್ಷಮತೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವ ವ್ಯಾಪಕ ಶ್ರೇಣಿಯ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ನೀಡುವ ಮೂಲಕ ಮನ್ನಣೆ ಗಳಿಸಿರುವುದಾಗಿ ಹೇಳಿಕೊಂಡಿದೆ.
ಹೋಂಡಾ ತಮಿಳುನಾಡಿನಲ್ಲಿ 547 ನೆಟ್‌ವರ್ಕ್ ಟಚ್‌ಪಾಯಿಂಟ್‌ಗಳನ್ನು ಹೊಂದಿದೆ (19 ಬಿಗ್‌ವಿಂಗ್ ಔಟ್‌ಲೆಟ್‌ಗಳನ್ನು ಒಳಗೊಂಡಂತೆ). ಈ 5 ಮಿಲಿಯನ್ ಮಾರಾಟದ ಮೈಲಿಗಲ್ಲು ನಮ್ಮ ತಂಡದ ಅವಿರತ ಪ್ರಯತ್ನಗಳ ಜೊತೆಗೆ ತಮಿಳುನಾಡು ರಾಜ್ಯದಲ್ಲಿನ ನಮ್ಮ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹೋಂಡಾ ಹೇಳಿದೆ.

ಕಂಪನಿಯು ಪ್ರಸ್ತುತ ತಮಿಳುನಾಡಿನಲ್ಲಿ ನಾಲ್ಕು ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳನ್ನು ನೋಡುವುದಾದ್ರೆ 110cc ಸ್ಕೂಟರ್‌ಗಳಲ್ಲಿ ಆಕ್ಟೀವಾ ಮತ್ತು ಡಿಯೋ, 125cc ಸ್ಕೂಟರ್‌ಗಳಲ್ಲಿ ಆಕ್ಟೀವಾ 125 ಮತ್ತು ಡಿಯೋ 125 ಇವೆ. ಮೋಟಾರ್‌ಸೈಕಲ್ ವಿಭಾಗದಲ್ಲಿ 100 ಮತ್ತು 110cc ವಿಭಾಗದಲ್ಲಿ ಶೈನ್ 100, Dre CD ಡಿಲಕ್ಸ್ 110x ನಾದ್ಯಂತ ಒಂಬತ್ತು ಅತ್ಯಾಕರ್ಷಕ ಮಾದರಿಗಳಿವೆ.
125cc ಮೋಟಾರ್‌ಸೈಕಲ್ ವಿಭಾಗದಲ್ಲಿ ಶೈನ್ 125 ಮತ್ತು SP125 ಇವೆ. ಇನ್ನು 160cc ವಿಭಾಗದಲ್ಲಿ ಯುನಿಕಾರ್ನ್ ಮತ್ತು SP160 ಮೋಟಾರ್‌ಸೈಕಲ್‌ಗಳು ಇವೆ. ಉಳಿದಂತೆ 180 - 200cc ನಲ್ಲಿ ಹಾರ್ನೆಟ್ 2.0 ಮತ್ತು CB200X ಮೋಟಾರ್‌ಸೈಕಲ್ ಇವೆ. ಇವುಗಳಲ್ಲಿ ಶೈನ್ 125 ಮತ್ತು SP125 ಹೋಂಡಾಗೆ ಭಾರೀ ಜನಪ್ರಿಯತೆ ತಂದುಕೊಟ್ಟಿವೆ.

ಹೋಂಡಾದ ಪ್ರೀಮಿಯಂ ಮೋಟಾರ್‌ಸೈಕಲ್ ಶ್ರೇಣಿಯನ್ನು ನೋಡುವುದಾದರೆ, 300cc - 1800cc ಮೋಟಾರ್‌ಸೈಕಲ್‌ಗಳು ಉನ್ನತ ಮಹಾನಗರಗಳಲ್ಲಿ ಮತ್ತು ಬಿಗ್‌ವಿಂಗ್‌ನಲ್ಲಿ ಮಾರಾಟವಾಗುತ್ತವೆ. ಪ್ರತ್ಯೇಕವಾಗಿ ಮೋಟಾರ್‌ಸೈಕಲ್ ವಿಭಾಗಕ್ಕೆ (300cc - 500cc) ಬಿಗ್‌ವಿಂಗ್ ನೇತೃತ್ವ ವಹಿಸಿದೆ. ಉದಾಹರಣೆಗೆ ಮಾರುತಿ ಸುಜುಕಿಯ ನೆಕ್ಸಾದಂತೆ ಹೋಂಡಾಗೆ ಬಿಗ್‌ವಿಂಗ್ ಇದೆ.
ಇದರಲ್ಲಿ CB350, H'ness CB350, CB350RS, CB300F, CB300R, NX500, XL750 ಟ್ರಾನ್ಸಾಲ್ಪ್, ಆಫ್ರಿಕಾ ಟ್ವಿನ್ ಮತ್ತು ಗೋಲ್ಡ್ ವಿಂಗ್ ಟೂರ್ ಅನ್ನು ಒಳಗೊಂಡಿದೆ. ಇದಲ್ಲದೆ, ಹಾರ್ನೆಟ್ 2.0 ಮತ್ತು CB200X ಅನ್ನು ಈಗ ಬಿಗ್‌ವಿಂಗ್ ಶೋರೂಮ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಈ ಮಹತ್ವದ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್, "ತಮಿಳುನಾಡಿನಲ್ಲಿ 5 ಮಿಲಿಯನ್ ದ್ವಿಚಕ್ರ ವಾಹನ ಮಾರಾಟವನ್ನು ಸಾಧಿಸಿರುವುದು ಹೋಂಡಾಗೆ ಗಮನಾರ್ಹ ಸಾಧನೆಯಾಗಿದ್ದು, ಇದರಲ್ಲಿ ನಮ್ಮ ಹೋಂಡಾದ ಪ್ರತಿಯೊಬ್ಬ ಸಿಬ್ಬಂದಿಯ ಪಾತ್ರವಿದೆ ಎಂದರು.
ಈ ಮೈಲಿಗಲ್ಲು ನಮ್ಮ ಉತ್ಪನ್ನಗಳಲ್ಲಿ ನಮ್ಮ ಗ್ರಾಹಕರ ನಂಬಿಕೆ ಮತ್ತು ನಮ್ಮ ಇಡೀ ತಂಡದ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಗ್ರಾಹಕರು ಮತ್ತು ಡೀಲರ್ ಪಾಲುದಾರರಿಗೆ ಅವರ ನಿರಂತರ ಬೆಂಬಲಕ್ಕಾಗಿ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಾವೀನ್ಯತೆ ಮತ್ತು ಉತ್ಕೃಷ್ಟತೆಯ ನಮ್ಮ ಪ್ರಯಾಣವನ್ನು ಹೀಗೆ ಮುಂದುವರಿಸಲು ಬದ್ಧರಾಗಿದ್ದೇವೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications