Honda: ಆ್ಯಕ್ಟೀವಾ ಇವಿ ಅನಾವರಣ: ಚಿಂತೆ ಬೇಡ, ಖರೀದಿದಾರರಿಗೆ ಭರ್ಜರಿ ಸಿಹಿಸುದ್ದಿ!

ಹೋಂಡಾ ಇತ್ತೀಚೆಗೆ ಆ್ಯಕ್ಟೀವಾ ಇ ('ACTIVA e:') ಮತ್ತು ಕ್ಯೂಸಿ1 ('QC1') ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿದೆ. ಇದರಲ್ಲಿ ಆ್ಯಕ್ಟೀವಾ ಇ' ಸ್ಕೂಟರ್ ತೆಗೆದು ಹಾಕಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಮತ್ತೊಂದು (QC1) ಸ್ಕೂಟರ್ ಸ್ಥಿರ ಬ್ಯಾಟರಿಯೊಂದಿಗೆ ಬರಲಿದೆ. ಮುಂಬರುವ ದಿನಗಳಲ್ಲಿ ಇದೇ ತಂತ್ರಜ್ಞಾನದ ಇನ್ನೂ ಹೆಚ್ಚಿನ ಇವಿ ಸ್ಕೂಟರ್‌ಗಳನ್ನು ಪರಿಚಯಿಸಲಿರುವ ಹೋಂಡಾ ಕಂಪನಿಯು ತನ್ನ ಗ್ರಾಹಕರಿಗಾಗಿ ಈಗಿನಿಂದಲೇ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದಕ್ಕಾಗಿ ಹೋಂಡಾ ಆ್ಯಕ್ಟೀವಾ ಇ ಗಾಗಿ ಸ್ವಾಪ್ ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ.

ಹೋಂಡಾದ ಬ್ಯಾಟರಿ ಸ್ವಾಪ್ ಸೇವೆಯ ಅಂಗಸಂಸ್ಥೆಯಾದ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈ. ಲಿಮಿಟೆಡ್ (HEID), ಆ್ಯಕ್ಟೀವಾ-ಇ ಗಾಗಿ ಸ್ವಾಪ್ ಸೇವೆಗಳ (ಬ್ಯಾಟರಿ ವಿನಿಮಯ) ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಬೆಂಗಳೂರಿನಲ್ಲಿ ಫೆಬ್ರವರಿ 2025 ರಿಂದ ಮತ್ತು ನವದೆಹಲಿ ಮತ್ತು ಮುಂಬೈನಲ್ಲಿ ಏಪ್ರಿಲ್ 2025 ರಿಂದ ಇದು ಪ್ರಾರಂಭವಾಗಲಿದೆ ಎಂದು ಹೋಂಡಾ ತಿಳಿಸಿದೆ.

honda-activa-electric-services-battery-swap-bengaluru-delhi-mumbai

HEID ನ ಬ್ಯಾಟರಿ ಸ್ವಾಪ್ ಸೇವೆಯು ಅದರ ಬಳಕೆದಾರರಿಗೆ ತಮ್ಮ ಹತ್ತಿರದ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬ್ಯಾಟರಿಗಳನ್ನು (ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ :) ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯ ಬಳಕೆಯು HEID ನಿಂದ ಬ್ಯಾಟರಿಯ ಮಾಲೀಕತ್ವದ ಕಾರಣದಿಂದಾಗಿ EV ಖರೀದಿಸಲು ಆರಂಭಿಕ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಬ್ಯಾಟರಿ ಖಾಲಿಯಾಗುವ ಭಯವಿಲ್ಲದಂತೆ ಮಾಡುತ್ತದೆ.

ಬಳಕೆದಾರರು ವಾಹನದ ಖರೀದಿಯೊಂದಿಗೆ HEID ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸದಸ್ಯತ್ವವನ್ನು ನೋಂದಾಯಿಸುವ ಮೂಲಕ ಬ್ಯಾಟರಿ ಸ್ವಾಪ್ ಕೇಂದ್ರಗಳನ್ನು ಪ್ರವೇಶಿಸಬಹುದು. ಇದಲ್ಲದೆ, HEID ತನ್ನ ದ್ವಿಚಕ್ರ ವಾಹನಕ್ಕಾಗಿ ಬ್ಯಾಟರಿ ಸ್ವಾಪ್ ಸೇವೆಯನ್ನು ದೆಹಲಿ NCR ಮತ್ತು ಮುಂಬೈನಲ್ಲಿ ಏಪ್ರಿಲ್ 2025 ರಲ್ಲಿ ಪ್ರಾರಂಭಿಸಲಿದೆ. ಇದು ಭಾರತದ ಮೂರು ಪ್ರಮುಖ ನಗರಗಳಲ್ಲಿ ಹೆಚ್ಚಿನ ಗ್ರಾಹಕರಿಗೆ ಬ್ಯಾಟರಿ ಸ್ವಾಪ್ ಸೇವೆಗಳನ್ನು ನೀಡಲಿದೆ.

honda-activa-electric-services-battery-swap-bengaluru-delhi-mumbai

ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈ. ಲಿಮಿಟೆಡ್ (HEID) ಮಾರ್ಚ್ 2026 ರ ವೇಳೆಗೆ ಬೆಂಗಳೂರಿನಲ್ಲಿ 250, ದೆಹಲಿಯಲ್ಲಿ 150 ಮತ್ತು ಮುಂಬೈನಲ್ಲಿ 100 ಬ್ಯಾಟರಿ ವಿನಿಮಯ ಕೇಂದ್ರಗಳೊಂದಿಗೆ ಹೆಚ್ಚುತ್ತಿರುವ ಬಳಕೆದಾರರ ಸಂಖ್ಯೆಯನ್ನು ಪೂರೈಸಲು HEID ನಿಲ್ದಾಣಗಳ ಸಂಖ್ಯೆಯನ್ನು ನಿರಂತರವಾಗಿ ವಿಸ್ತರಿಸುವುದಾಗಿ ಹೋಂಡಾ ಭರವಸೆ ನೀಡಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL), ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (DMRC), ಅದಾನಿ ಎಲೆಕ್ಟ್ರಿಸಿಟಿಯೊಂದಿಗೆ ಪಾಲುದಾರಿಕೆ ಮಾಡುವ ಮೂಲಕ HEID ಈಗಾಗಲೇ ತನ್ನ ಬ್ಯಾಟರಿ ವಿನಿಮಯಕಾರಕಗಳನ್ನು (ಹೋಂಡಾ ಪವರ್ ಪ್ಯಾಕ್ ಎಕ್ಸ್ಚೇಂಜರ್ ಇ :) ಸ್ಥಾಪಿಸಿದೆ.

honda-activa-electric-services-battery-swap-bengaluru-delhi-mumbai

ದೃಢವಾದ ಹೋಂಡಾ ಮೊಬೈಲ್ ಪವರ್ ಪ್ಯಾಕ್ e: ಮೂಲಕ ಬ್ಯಾಟರಿಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ಇರಿಸಲು ಹಾಗೂ ಎಲ್ಲಾ ಬ್ಯಾಟರಿಗಳು ಮತ್ತು ಬ್ಯಾಟರಿ ವಿನಿಮಯಕಾರಕಗಳನ್ನು ಕ್ಲೌಡ್ ಸಿಸ್ಟಮ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಹೋಂಡಾ ಪವರ್ ಪ್ಯಾಕ್ ಕ್ಲೌಡ್, ಸಂಪೂರ್ಣ ಬ್ಯಾಟರಿ ನೆಟ್‌ವರ್ಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೋಂಡಾ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 29, 2024, 12:19 [IST]
English summary
Honda activa electric services battery swap bengaluru delhi mumbai
Read more on honda electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+