Honda: ಶ್ರೀಸಾಮಾನ್ಯರ ನೆಚ್ಚಿನ ಶೈನ್ ಬೈಕ್, ಆಕ್ಟಿವಾ ಸ್ಕೂಟರ್‌ಗೆ ಭರ್ಜರಿ ಆಫರ್.. ರೂ.1100 ಡೌನ್ ಪೇಮೆಂಟ್!
ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India - HMSI), ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಖರೀದಿದಾರರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಕಂಪನಿಯು ಮತ್ತಷ್ಟು ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು ನಿರ್ಧರಿಸಿದೆ. ಅದರ ಭಾಗವಾಗಿ ಈ ಸೆಪ್ಟೆಂಬರ್‌ನಲ್ಲಿ ಶೈನ್ (Shine) ಮೋಟಾರ್‌ಸೈಕಲ್ ಹಾಗೂ ಆಕ್ಟಿವಾ (Activa) ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್‌ನ್ನು ಘೋಷಣೆ ಮಾಡಿದೆ.
ಸಾಮಾನ್ಯ ವರ್ಗದ ಜನರು ಇಷ್ಟಪಟ್ಟು ಖರೀದಿಸುವ ಹೋಂಡಾ ಶೈನ್ (Honda Shine) ಬೈಕ್ ಖರೀದಿ ಮೇಲೆ ಶೇಕಡ 5% (ರೂ.5000 ವರೆಗೆ) ಕ್ಯಾಶ್‌ಬ್ಯಾಕ್, 1 ವರ್ಷದ ಅವಧಿಗೆ ಉಚಿತ ನಿರ್ವಹಣಾ ಯೋಜನೆ (Free Service Package) ಲಭ್ಯವಿದೆ. ಜೊತೆಗೆ ರೂ.1100 ಡೌನ್ ಪೇಮೆಂಟ್ ಪಾವತಿಸಿ, ಈ ನೂತನ ಮೋಟಾರ್‌ಸೈಕಲ್‌ನ್ನು ಮನೆಗೆ ತರಬಹುದು.

ಜನಪ್ರಿಯ ಹೋಂಡಾ ಆಕ್ಟಿವಾ (Honda Activa) ಸ್ಕೂಟರ್ ಸಹ ಶೈನ್ ಮೋಟಾರ್‌ಸೈಕಲ್‌ನಂತೆ ದೊಡ್ಡಮಟ್ಟದಲ್ಲಿ ಹಣಕಾಸಿನ ಪ್ರಯೋಜನವನ್ನು ಪಡೆದಿದೆ. ಶೇಕಡ 5% (ರೂ.5000 ವರೆಗೆ) ಕ್ಯಾಶ್‌ಬ್ಯಾಕ್, 1 ವರ್ಷದ ಉಚಿತ ನಿರ್ವಹಣಾ ಯೋಜನೆ ಹಾಗೂ 6 ವರ್ಷದ (3 + 3) ವಾರಂಟಿಯನ್ನು ಹೊಂದಿದೆ.
ಸದ್ಯ ದೇಶೀಯವಾಗಿ ಖರೀದಿಗೆ ಸಿಗುವ ಹೋಂಡಾ ಶೈನ್ ಬೈಕ್, 100 ಸಿಸಿ ಹಾಗೂ 125 ಸಿಸಿ ಎಂಬ ಎರಡು ವಿಧದ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಹೊಚ್ಚ ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್, ರೂ.66,600 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 98.98 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 68 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಹೋಂಡಾ ಶೈನ್ 125 ಬೈಕ್, ರೂಪಾಂತರಗಳಿಗೆ (ವೆರಿಯೆಂಟ್) ಅನುಗುಣವಾಗಿ ರೂ.81,550 ದಿಂದ ರೂ.85,550 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 123.94 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಧ್ಯಮ ವರ್ಗದ ಜನರು ಭಾರಿ ಸಂಖ್ಯೆಯಲ್ಲಿ ಖರೀದಿಸುವ ಹೋಂಡಾ ಆಕ್ಟಿವಾ ಸ್ಕೂಟರ್ ಸಹ ಹಲವು ವಿಧದಲ್ಲಿ ಲಭ್ಯವಿದೆ. ನೂತನ ಹೋಂಡಾ ಆಕ್ಟಿವಾ 125 ಸ್ಕೂಟರ್, ರೂ.83,084 ದಿಂದ 92,257 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 124 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೋಂಡಾ ಆಕ್ಟಿವಾ 6ಜಿ (Honda Activa 6G) ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ರೂ.78,624 ದಿಂದ ರೂ.84,624 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 109.51 ಸಿಸಿ ಎಂಜಿನ್ ಹೊಂದಿದ್ದು, 59.5 ಕೆಎಂಪಿಎಲ್‌ವರೆಗೆ ನೀಡುತ್ತದೆ. ನಿಮ್ಮ ಗಮನಕ್ಕೆ.. ಈ ಹಣಕಾಸು ಪ್ರಯೋಜನಗಳು ಸೆಪ್ಟೆಂಬರ್ 30ರವರೆಗೆ ಮಾನ್ಯವಾಗಿರಲಿದ್ದು, ಷರತ್ತು ಹಾಗೂ ನಿಯಮಗಳು ಅನ್ವಯಿಸುತ್ತವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








