Honda: ದೇಶದ ಮೊಟ್ಟ ಮೊದಲ 300 ಸಿಸಿ ಫ್ಲೆಕ್ಸ್-ಫ್ಯುಯೆಲ್ ಬೈಕ್ ಬಿಡುಗಡೆ.. ಏನಿದರ ವಿಶೇಷತೆ, ಬೆಲೆ ಇಷ್ಟೇನಾ?

ಹೋಂಡಾ ಮೋಟಾರ್‌ಸೈಕಲ್‌ & ಸ್ಕೂಟರ್ ಇಂಡಿಯಾ (Honda Motorcycle & Scooter India - HMSI), ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಭಾನುವಾರ ದೇಶದ ಮೊದಲ 300 ಸಿಸಿ ಫ್ಲೆಕ್ಸ್-ಫ್ಯುಯೆಲ್ ಚಾಲಿತ 'ಸಿಬಿ300ಎಫ್' ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಹೆಚ್ಚು ಆಕರ್ಷಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ನೂತನ ಹೋಂಡಾ ಸಿಬಿ300ಎಫ್ ಫ್ಲೆಕ್ಸ್-ಫ್ಯುಯೆಲ್ (Honda CB300F Flex-fuel) ಬೈಕ್ ರೂ.1.70 ಲಕ್ಷ ಎಕ್ಸ್ ಶೋರೂಂ (ದೆಹಲಿ) ಬೆಲೆಯನ್ನು ಹೊಂದಿದೆ. ಫ್ಲೆಕ್ಸ್-ಫ್ಯುಯೆಲ್ ಬಳಕೆ ಮಾಡಬಲ್ಲ ಎಂಜಿನ್ ಹೊಂದಿರುವುದರಿಂದ ಇ85 (E85) ಇಂಧನದ (ಫ್ಯುಯೆಲ್) ನೆರವಿನಿಂದ ಚಲಿಸಬಲ್ಲದು. ಅಂದರೆ 85% ಎಥೆನಾಲ್ ಮತ್ತು 15% ಪೆಟ್ರೋಲ್‌ನ ಸಮಿಶ್ರವಾಗಿದೆ. ಎಥೆನಾಲ್‌ನ್ನು ಕೃಷಿ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಉದಾಹರಣೆಗೆ ಭತ್ತದ ಹುಲ್ಲು ಹಾಗೂ ಕಬ್ಬಿನ ಜಲ್ಲೆಯನ್ನು ಉಪಯೋಗ ಮಾಡಲಾಗಿರುತ್ತದೆ.

Honda CB300F Flex-Fuel Bike Launched Rs 1 70 Lakh Price Details

ಹೊಚ್ಚ ಹೊಸ ಹೋಂಡಾ ಸಿಬಿ300ಎಫ್ ಫ್ಲೆಕ್ಸ್-ಫ್ಯುಯೆಲ್ ಮೋಟಾರ್‌ಸೈಕಲ್‌ ವಿನ್ಯಾಸವು ಬಹುತೇಕ ಸ್ಟ್ಯಾಂಡರ್ಡ್ ಸಿಬಿ300ಎಫ್ ಬೈಕ್‌ಗೆ ಹೋಲಿಕೆಯಾಗುತ್ತದೆ. ಎಲ್‌ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಟೆಪ್ಡ್ ಸೀಟ್ & ಚಿನ್ ಫೇರಿಂಗ್ ಅನ್ನು ಹೊಂದಿದೆ. ಸ್ಪೋರ್ಟ್ಸ್ ರೆಡ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಎಂಬ ಎರಡು ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಈ ನೂತನ ಬೈಕ್ ಶಕ್ತಿಯುತ ಪವರ್‌ಟ್ರೇನ್‌ನ್ನು ಹೊಂದಿದೆ. 293.5 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ (ಇ85) ಎಂಜಿನ್‌ನ್ನು ಹೊಂದಿದೆ. 24.5 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 25.9 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Honda CB300F Flex-Fuel Bike Launched Rs 1 70 Lakh Price Details

ಹೊಸ ಹೋಂಡಾ ಸಿಬಿ300ಎಫ್ ಫ್ಲೆಕ್ಸ್-ಫ್ಯುಯೆಲ್ ಮೋಟಾರ್‌ಸೈಕಲ್‌ ಮುಂಭಾಗ (ಫ್ರಂಟ್) ಅಪ್‌ಸೈಡ್-ಡೌನ್ ಫೋರ್ಕ್, ಹಿಂಭಾಗ (ರೇರ್) ಮೊನೊ ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಹ್ಯಾಂಡಲ್ ಬಾರ್‌ನ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟ್ರಾಕ್ಷನ್ ಕಂಟ್ರೋಲ್‌ನ್ನು ಪಡೆದಿದೆ.

ಸ್ಟ್ಯಾಂಡರ್ಡ್ ಹೋಂಡಾ ಸಿಬಿ300ಎಫ್ ಬೈಕ್‌ ಕೂಡ ರೂ.1.70 ಲಕ್ಷ ಎಕ್ಸ್ ಶೋರೂಂ ದರವನ್ನೇ ಪಡೆದಿದೆ. 293.52 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 24.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 25.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಆಯ್ಕೆಯನ್ನು ಹೊಂದಿದೆ.

ಈ ಸ್ಟ್ಯಾಂಡರ್ಡ್ ಸಿಬಿ300ಎಫ್ ಮೋಟಾರ್‌ಸೈಕಲ್‌ 30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್ಇಡಿ ಲೈಟಿಂಗ್, ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಪ್ಯಾನೆಲ್, ಯುಎಸ್‌‍ಬಿ-ಸಿ ಫೋನ್ ಚಾರ್ಜಿಂಗ್ ಪೋರ್ಟ್, ಎಂಜಿನ್ ಸ್ಟಾರ್ಟ್/ಸ್ಟಾಪ್, ಸ್ಪ್ಲಿಟ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಪ್ರತಿ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿ ಬೈಕ್‌ ಹಾಗೂ ಸ್ಕೂಟರ್‌ಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಕಳೆದ ತಿಂಗಳು (ಸೆಪ್ಟೆಂಬರ್ 2024) ಒಟ್ಟು 5,83,633 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 5,26,998 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 10.75% ಪ್ರಗತಿ ಸಾಧಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 21, 2024, 11:06 [IST]
English summary
Honda cb300f flex fuel bike launched rs 1 70 lakh price details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+