ಕಾಲೇಜು ಯುವಕ ಯುವರಿಯರ ನೆಚ್ಚಿನ ಸ್ಕೂಟರ್ ನಿಮಗೂ ಬೇಕೆ?: ಸುಲಭವಾಗಿ ಖರೀದಿಸಲು ಸರಳ ಪರಿಹಾರ
ಭಾರತದಲ್ಲಿರುವ ಸ್ಕೂಟರ್‌ಗಳಲ್ಲಿ ಹೋಂಡಾ ಕಂಪನಿಯ ಆಕ್ಟೀವಾ ಮತ್ತು ಡಿಯೋಗಳಿಗೆ ತನ್ನದೇ ಆದ ಸ್ಥಾನಮಾನವಿದೆ. ಮದುವೆ ಆದವರು ಅಥವಾ ಒಂದು ಕೌಟುಂಬಿಕ ಜೀವನ ನಡೆಸುವವರು ಹೋಂಡಾ ಆಕ್ಟೀವಾವನ್ನು ಹೆಚ್ಚಾಗಿ ಇಷ್ಟಪಟ್ಟರೆ ಯುವಕರು ಹೆಚ್ಚಾಗಿ ಡಿಯೋ ಸ್ಕೂಟರ್ ಅನ್ನು ಇಷ್ಟಪಡುತ್ತಾರೆ. ಈ ಸ್ಕೂಟರ್‌ನ ಡಿಸೈನ್ ಮತ್ತು ಪರ್ಫಾಮೆನ್ಸ್ ಯುವಕರಿಗೆ ಅಚ್ಚುಮೆಚ್ಚು. ಇಂದಿನ ಈ ಲೇಖನದಲ್ಲಿ ನಾವು ಈ ಸ್ಕೂಟರ್ ಅನ್ನು ಹೊಸದಾಗಿ ಖರೀದಿಸುವವರಿಗೆ ಹೆಚ್ಚಿನ ಸಹಾಯವಾಗಲು ಇಎಂಐ, ಡೌನ್ ಪೇಮೆಂಟ್ ಮತ್ತು ಇನ್ನಿತರ ವಿಚಾರಗಳ ಕುರಿತಾಗಿ ನೋಡಲಿದ್ದು, ಕೊನೆಯವರೆಗೆ ಓದಿ.
ಹೋಂಡಾ ಡಿಯೋ (Honda Dio) ಸ್ಕೂಟರ್‌ನ ಎಕ್ಸ್ ಶೋ ರೂಮ್ ಬೆಲೆಯನ್ನು ನೋಡುವುದಾದರೆ 74,629 ರೂಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್ ನೋಡುವುದಾದರೆ ಅದು ಸುಮಾರು 12,293 ರೂಪಾಯಿಗಳಷ್ಟು ಬರುತ್ತದೆ. ಈ ಬೈಕ್‌ನ ಇನ್ಸ್ಯುರೆನ್ಸ್ ಸುಮಾರು 5,844 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಹೋಂಡಾ ಡಿಯೋ ಸ್ಕೂಟರ್‌ನ ಬೆಲೆ ಸುಮಾರು 92,766 ರೂಗಳಿಂದ ಆರಂಭವಾಗುತ್ತದೆ.

ಇನ್ನು ಈ ಸ್ಕೂಟರ್‌ನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಸ್ಕೂಟರ್‌ಗೆ 9000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೩ ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 2,691 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.
ಇನ್ನು ಡಿಯೋ ಸ್ಕೂಟರ್ ಬಗ್ಗೆ ನೊಡುವುದಾದರೆ, ಹೋಂಡಾ ಡಿಯೊ ಈಗ ಹೆಚ್ಚು ಶಕ್ತಿಶಾಲಿ 125cc ಎಂಜಿನ್‌ನೊಂದಿಗೆ ಲಭ್ಯವಿದೆ. Dio 125 ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಅದು ಯಾವುದೆಂದರೆ Std ಮತ್ತು Smart, ಕ್ರಮವಾಗಿ ರೂ 83,400 ಮತ್ತು ರೂ 91,300 ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಿದೆ.

ಈ ಹೋಂಡಾ ಡಿಯೋ ಸ್ಕೂಟರ್ ಬಣ್ಣಗಳ ಬಗ್ಗೆ ನೋಡುವುದಾದರೆ, ಪರ್ಲ್ ಸೈರನ್ ಬ್ಲೂ, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ನೈಟ್ ಸ್ಟಾರ್ ಬ್ಲಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ಆಯ್ಕೆಯಲ್ಲಿ ಸಿಗುತ್ತದೆ.
ಡಿಯೋ 125 ಹೋಂಡಾದ H-ಸ್ಮಾರ್ಟ್ ಕೀ ಲೆಸ್ ಕಾರ್ಯವನ್ನು ಸಹ ಪಡೆಯುತ್ತದೆ. ಇದು ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸೇಫ್ ಮತ್ತು ಸ್ಮಾರ್ಟ್ ಸ್ಟಾರ್ಟ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಕೂಟರ್ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ ಅದು ರಿಯಲ್ ಟೈಮ್ ಇಂಧನ ದಕ್ಷತೆ, ಶ್ರೇಣಿ, ವೇಗ, ಟ್ರಿಮ್ ಮೀಟರ್ ಮತ್ತು ಗಡಿಯಾರವನ್ನು ಇದರಲ್ಲಿ ಕಾಣಬಹುದಾಗಿದೆ.
ಡಿಯೊ 125 125cc, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 8.14 BHP @ 6,000 rpm ಮತ್ತು 10.2 Nm @ 5,000 rpm ಮಾಡುತ್ತದೆ. ಎಂಜಿನ್ ಅನ್ನು ನಿರಂತರವಾಗಿ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್‌ಗೆ ಜೋಡಿಸಲಾಗಿದೆ. ಸ್ಕೂಟರ್ 5-ಸ್ಪೋಕ್ ಅಲಾಯ್ ಚಕ್ರಗಳಲ್ಲಿ ಮುಂಭಾಗದಲ್ಲಿ 12-ಇಂಚಿನ ರಿಮ್ಸ್ ಮತ್ತು ಹಿಂಭಾಗದಲ್ಲಿ 10-ಇಂಚಿನ ಮೇಲೆ ಸವಾರಿ ಮಾಡುತ್ತದೆ. ಇದು ಕಾಂಬಿ-ಬ್ರೇಕಿಂಗ್ ಸಿಸ್ಟಮ್ (CBS) ಜೊತೆಗೆ ಫ್ರಂಟ್ ಡಿಸ್ಕ್ ಬ್ರೇಕ್‌ನೊಂದಿಗೆ ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








