ಹೋಂಡಾ ಹೊಡೆತಕ್ಕೆ ಪ್ರತಿಸ್ಪರ್ಧಿಗಳು ಕಂಗಾಲು: ನಿದ್ದೆಗೆಡಿಸಿವೆ ಆಕ್ಟೀವಾ, ಶೈನ್, SP125 ವಾಹನಗಳು

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಭಾರತದ ಮಧ್ಯ ಭಾಗದಲ್ಲಿ ಬರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಛತ್ತೀಸ್‌ಗಢವನ್ನು ಒಳಗೊಂಡಂತೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವುದಾಗಿ ಘೋಷಿಸಿದೆ. ಹೋಂಡಾ ಈ ರಾಜ್ಯಗಳಲ್ಲಿ ಬರೋಬ್ಬರಿ 1 ಕೋಟಿ ದ್ವಿಚಕ್ರ ವಾಹನ ಮಾರಾಟದ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ, ಖರೀದಿದಾರರಲ್ಲಿ ಆದ್ಯತೆಯ ಬ್ರ್ಯಾಂಡ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಎಲ್ಲಾ ರಾಜ್ಯಗಳ ಡೀಲರ್ ಪಾಲುದಾರರ ಬೆಂಬಲದೊಂದಿಗೆ ಗ್ರಾಹಕರ ಅಚಲವಾದ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹೋಂಡಾ ಹೇಳಿಕೊಂಡಿದೆ.

ಹೋಂಡಾ ತನ್ನ ಮೊದಲ ದ್ವಿಚಕ್ರ ವಾಹನವಾದ ಆಕ್ಟಿವಾದೊಂದಿಗೆ 2001 ರಲ್ಲಿ ಭಾರತೀಯ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು. ಅಂದಿನಿಂದ ಅನೇಕ ಮೈಲಿಗಲ್ಲುಗಳನ್ನು ಸಾಧಿಸುತ್ತಾ ಭಾರತದ ಅತ್ಯಂತ ಪ್ರೀತಿಪಾತ್ರ ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ತನ್ನ ವೈವಿಧ್ಯಮಯ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ನಿರಂತರವಾಗಿ ಪೂರೈಸುತ್ತಿದೆ ಎಂದು ಹೋಂಡಾ ಹೇಳಿದೆ.

honda-motorcycle-scooter-achieves-1-crore-sales

ಆಕ್ಟಿವಾ ಈ ಪ್ರದೇಶಗಳಲ್ಲಿ ಕಂಪನಿಯ ಅತ್ಯುತ್ತಮ-ಮಾರಾಟದ ಮಾದರಿಯಾಗಿದೆ. ಇದರ ನಂತರ 125cc ವಿಭಾಗದ ಜೋಡೆತ್ತುಗಳಾಗಿ ಶೈನ್ 125 ಮತ್ತು SP125 ಮೋಟಾರ್‌ಸೈಕಲ್‌ಗಳು ಜನಪ್ರಿಯತೆ ಪಡೆದಿವೆ. ಇದಲ್ಲದೆ, ಹೊಸ ಶೈನ್ 100 ಕೂಡ ಗ್ರಾಹಕರು ಇಷ್ಟಪಡುವ ನೆಚ್ಚಿನ 100-110cc ವಿಭಾಗದ ಬೆಸ್ಟ್‌ ಮೋಟಾರ್‌ಸೈಕಲ್ ಆಗಿ ಗುರ್ತಿಸಿಕೊಂಡಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಛತ್ತೀಸ್‌ಗಢ ರಾಜ್ಯಗಳು ಒಟ್ಟಾಗಿ ದೇಶದ ಮಧ್ಯ ಭಾಗವವನ್ನು ಪ್ರತಿನಿಧಿಸುತ್ತವೆ. 2001 ರಲ್ಲಿ ಪ್ರಾರಂಭವಾದಾಗಿನಿಂದ, ಹೋಂಡಾ 2017 ರಲ್ಲಿ ಈ ರಾಜ್ಯಗಳಲ್ಲಿ ಮೊದಲ 50 ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಮುಂದಿನ 50 ಲಕ್ಷ ಮಾರಾಟವನ್ನು 7 ವರ್ಷಗಳಲ್ಲಿ ಸಾಧಿಸಲಾಗಿದೆ. ಈಗ 1 ಕೋಟಿಗೂ ಹೆಚ್ಚು ಗ್ರಾಹಕರ ಕುಟುಂಬವನ್ನು ಹೊಂದಿದೆ.

honda-motorcycle-scooter-achieves-1-crore-sales

ಈ ಕುರಿತು ಪ್ರತಿಕ್ರಿಯಿಸಿದ ಹೋಂಡಾ ನಿರ್ದೇಶಕರಾದ ಯೋಗೇಶ್ ಮಾಥುರ್, "ಹೋಂಡಾ ಬ್ರ್ಯಾಂಡ್ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ನಾವು ಗ್ರಾಹಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಈ ಗಮನಾರ್ಹ ಸಾಧನೆಯು ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಅಸಾಧಾರಣ ಸೇವೆಯನ್ನು ಒದಗಿಸುವ ನಮ್ಮ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ನಗರ ಮತ್ತು ಗ್ರಾಮೀಣ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಸ್ಥಿರವಾಗಿ ಪೂರೈಸುತ್ತೇವೆ ಎಂದರು.

ಹೋಂಡಾ ಈ ನಾಲ್ಕು ರಾಜ್ಯಗಳಾದ್ಯಂತ 1,200 ಕ್ಕೂ ಹೆಚ್ಚು ನೆಟ್‌ವರ್ಕ್ ಟಚ್‌ಪಾಯಿಂಟ್‌ಗಳನ್ನು ಹೊಂದಿದ್ದು, ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಿಗೆ ವಾಹನ ಖರೀದಿಗೆ ಸುಲಭವಾಗಿಸಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ನಮ್ಮ ಸ್ಕೂಟರ್ ಹಾಗೂ ಮೋಟಾರ್‌ ಸೈಕಲ್‌ಗಳು ಉತ್ತಮ ಮಾರಾಟ ಕಾಣುವ ವಿಶ್ವಾಸವಿದೆ ಎಂದರು.

honda-motorcycle-scooter-achieves-1-crore-sales

ಕಂಪನಿಯ ಉತ್ಪನ್ನ ಶ್ರೇಣಿಯು ನಾಲ್ಕು ಸ್ಕೂಟರ್ ಮಾದರಿಗಳನ್ನು ಒಳಗೊಂಡಿದೆ (110cc ಮತ್ತು 125cc ವಿಭಾಗಗಳಲ್ಲಿ ಆಕ್ಟಿವಾ ಮತ್ತು ಡಿಯೊ) ಮತ್ತು ಮೋಟಾರ್‌ಸೈಕಲ್ ವಿಭಾಗದಲ್ಲಿ 100-110cc (ಶೈನ್ 100, CD 110 ಡ್ರೀಮ್ ಡಿಲಕ್ಸ್ ಮತ್ತು ಲಿವೊ), 125cc (Shine) ಗಳಲ್ಲಿ ಒಂಬತ್ತು ಮಾದರಿಗಳಿವೆ. 125 ಮತ್ತು SP125), 160cc (ಯುನಿಕಾರ್ನ್ ಮತ್ತು SP160) ಮತ್ತು 180-200cc (ಹಾರ್ನೆಟ್ 2.0 & CB200X) ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 4, 2024, 15:44 [IST]
English summary
Honda motorcycle scooter achieves 1 crore sales
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+