Honda: ಹೋಂಡಾ ಆಕ್ಟೀವಾ ಎಲೆಕ್ಟ್ರಿಕ್ (QC1) ಸ್ಕೂಟರ್ ವಿಶೇಷತೆಗಳು!
ಹೋಂಡಾ ಕಂಪನಿಯು ಕೊನೆಗೂ ತನ್ನ ಹೊಸ ಆಕ್ಟೀವಾ 'QC1' ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಹೊಸ LED ಹೆಡ್‌ಲೈಟ್‌ಗಳು ಮತ್ತು ಟೈಲ್ ಲ್ಯಾಂಪ್ ಜೊತೆಗೆ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಸ್ಕೂಟರ್‌ಗೆ ಜನವರಿ 1, 2025 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಡೆಲಿವರಿಗಳು ಫೆಬ್ರವರಿ 2025 ರಿಂದ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ. 80 km ರೇಂಜ್ ನೀಡಬಲ್ಲ ಈ ಸ್ಕೂಟರ್ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಕರ್ನಾಟಕದ ಬೆಂಗಳೂರಿನಲ್ಲಿರುವ ಹೋಂಡಾದ ನರಸಾಪುರ ಘಟಕದಲ್ಲಿ ತಯಾರಿಸಲಾಗುವುದು. ಈ ಮಾದರಿಗಳನ್ನು ಮೊದಲ ವರ್ಷಕ್ಕೆ ಮೂರು ಉಚಿತ ಸೇವೆಗಳೊಂದಿಗೆ 3 ವರ್ಷಗಳು ಅಥವಾ 50,000 ಕಿ.ಮೀ ವಾರಂಟಿಯೊಂದಿಗೆ ನೀಡಲಾಗುವುದು. ಅಲ್ಲದೇ ಹೋಂಡಾ ಮೊದಲ ವರ್ಷಕ್ಕೆ ಉಚಿತ ರಸ್ತೆಬದಿಯ ಸಹಾಯವನ್ನು ಒದಗಿಸುವುದಾಗಿ ಹೇಳಿದೆ.

Honda ಆಕ್ಟೀವಾ QC1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೋಂಡಾದ ಅಸ್ತಿತ್ವದಲ್ಲಿರುವ ಆಯ್ದ ಡೀಲರ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಫೆಬ್ರವರಿ 2025 ರಿಂದ ಡೆಲಿವರಿಗಳೊಂದಿಗೆ ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಲಭ್ಯವಿರುತ್ತದೆ. ಹೊಸ ಇವಿ ಸ್ಕೂಟರ್ ಅನ್ನು 4 ಗಂಟೆ 30 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು.
ಸಂಪೂರ್ಣ ಜಾರ್ಜ್‌ಗೆ 6 ಗಂಟೆ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. QC1 ಸ್ಕೂಟರ್ ಇನ್-ವೀಲ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, ಇದು 1.8 kW ಪವರ್ ಮತ್ತು 77 Nm ಟಾರ್ಕ್ ಹೊರಹಾಕುತ್ತದೆ. ಗಂಟೆಗೆ 50 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಸ್ಟ್ಯಾಂಡರ್ಡ್ ಮತ್ತು ಇಕಾನ್ ಎಂಬ ಎರಡು ರೈಡಿಂಗ್ ಮೋಡ್‌ಗಳು ಕೂಡ ಇವೆ.

ವರ್ಧಿತ ವೈಶಿಷ್ಟ್ಯಗಳು: Honda QC1 ಸ್ಕೂಟರ್ ನಿಮ್ಮ ಎಲ್ಲಾ ವೈಯಕ್ತಿಕ ಮೊಬೈಲ್ ಸಾಧನಗಳನ್ನು ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡಲು USB ಟೈಪ್-C ಔಟ್‌ಲೆಟ್ ಅನ್ನು ಹೊಂದಿದೆ. ಹಾಗೆಯೇ 26-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ನೀಡಲಾಗಿದೆ. 5.0-ಇಂಚಿನ LCD ಡಿಸ್ಪ್ಲೇ ಹೊಂದಿದ್ದು, ಇದು ವಾಹನ ಮಾಹಿತಿಯನ್ನು ಒಂದು ನೋಟದಲ್ಲಿ ಸರಳೀಕೃತ ರೀತಿಯಲ್ಲಿ ನೀಡುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಕ್ಲಾಸಿ ರಿಯರ್ ವ್ಯೂ ಮಿರರ್‌ಗಳು, ಸ್ಟೈಲಿಶ್ 12-ಇಂಚಿನ ಫ್ರಂಟ್ ಅಲಾಯ್ ವೀಲ್, ಗ್ರ್ಯಾಬ್ ರೈಲ್ ಜೊತೆಗೆ ಫ್ಯೂಚರಿಸ್ಟಿಕ್ ಡಿಸೈನ್ ಹೊಂದಿದೆ. ಹೊಸ QC1 ಸ್ಕೂಟರ್‌ನ್ನು ಪರ್ಲ್ ಸೆರಿನಿಟಿ ಬ್ಲೂ, ಪರ್ಲ್ ಮಿಸ್ಟಿ ವೈಟ್, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಮತ್ತು ಪರ್ಲ್ ಶಾಲೋ ಬ್ಲೂ ಎಂಬ ಐದು ಹೊಸ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಸುಧಾರಿತ ಬ್ಯಾಟರಿ ಮತ್ತು ಚಾರ್ಜಿಂಗ್ ತಂತ್ರಜ್ಞಾನ: 330-ವ್ಯಾಟ್ ಆಫ್-ಬೋರ್ಡ್ ಹೋಮ್ ಚಾರ್ಜರ್‌ನೊಂದಿಗೆ QC1 ಅನ್ನು ಚಾರ್ಜ್ ಮಾಡಬಹುದು. ಹೋಂಡಾ QC1 ಸ್ಕೂಟರ್ 1.5 kWh ಸ್ಥಿರ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 80 km ರೇಂಜ್ ನೀಡಬಲ್ಲದು. ಇದು ಆಟೋ-ಕಟ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಚಾರ್ಜಿಂಗ್ ಒದಗಿಸುತ್ತದೆ ಎಂದು ಹೋಂಡಾ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications