Honda: ಹೋಂಡಾ ಎಸ್‌ಪಿ 125 ಬೈಕ್ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, ಇಎಂಐ ಏನು?
ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಹೋಂಡಾ (Honda) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್ - ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ದಿನನಿತ್ಯದ ಬಳಕೆಗೆ ಹೊಸ ಮೋಟಾರ್‌ಸೈಕಲ್ ತೆಗೆದುಕೊಳ್ಳಲು ಯೋಚಿಸಿದ್ದೀರಾ?.. ಹಾಗಾದರೆ ಹೋಂಡಾ ಎಸ್‌ಪಿ 125 (Honda SP 125) ಉತ್ತಮ ಆಯ್ಕೆಯಾಗಬಲ್ಲದು. ನಾವು ಈ ಬೈಕ್‌ನ ಆನ್-ರೋಡ್ ಬೆಲೆ ಎಷ್ಟು.. ಇಎಂಐ ಏನು.. ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಹೋಂಡಾ ಎಸ್‌ಪಿ 125 ಮೋಟಾರ್‌ಸೈಕಲ್ ಮೂರು ರೂಪಾಂತರ (ವೇರಿಯೆಂಟ್)ಗಳೊಂದಿಗೆ ಗ್ರಾಹಕರಿಗೆ ದೊರೆಯುತ್ತದೆ. ಬೆಂಗಳೂರಿನಲ್ಲಿ ಇದರ ಸ್ಪೋರ್ಟ್ಸ್ ಎಡಿಷನ್ (Sports Edition) ಮಾದರಿಯು ರೂ.1,12,604 ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.11,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಖರೀದಿಸಿದರೆ, ರೂ.1,01,604 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.3,264 ಇಎಂಐ ಕಟ್ಟಬೇಕು.

ನೂತನ ಹೋಂಡಾ ಎಸ್‌ಪಿ 125 ಬೈಕ್‌ನ ಡ್ರಮ್ (Drum) ಆವೃತ್ತಿಯು ರೂ.1,08,146 ಆನ್-ರೋಡ್ ದರವನ್ನು ಪಡೆದಿದೆ. ನೀವು ರೂ.11,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಖರೀದಿಸಿದರೆ, ಉಳಿದ ರೂ.97,148 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿ (Interest) ಹಾಕಿ, ಮೂರು ವರ್ಷದ ಅವಧಿಗೆ ತಿಂಗಳಿಗೆ ರೂ.3,121 ಇಎಂಐ ಪಾವತಿಸಬೇಕು.
ಈ ಹೋಂಡಾ ಎಸ್‌ಪಿ 125 ಮೋಟಾರ್‌ಸೈಕಲ್‌ನ ಡಿಸ್ಕ್ (Disc) ರೂಪಾಂತರವು ರೂ.1,12,725 ಆನ್-ರೋಡ್ ಬೆಲೆ (On-Road Price) ಬೆಲೆಯನ್ನು ಹೊಂದಿದೆ. ರೂ.11,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್‌ನ್ನು ಮನೆಗೆ ತೆಗೆದುಕೊಂಡು ಹೋದರೆ, ರೂ.1,01,725 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮಾಸಿಕ ರೂ.3,268 ಇಎಂಐ ಕಟ್ಟಬೇಕು.

ಹೊಚ್ಚ ಹೊಸ ಹೋಂಡಾ ಎಸ್‌ಪಿ 125 ಬೈಕ್ 123.94 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 10.87 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಈ ಮೋಟಾರ್‌ಸೈಕಲ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್, ಫುಲ್ ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ - ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಫಂಕ್ಷನ್, ಸೈಲೆಂಟ್ ಸ್ಟಾರ್ಟರ್ ಅನ್ನು ಹೊಂದಿದೆ. ಇಂಪೀರಿಯಲ್ ರೆಡ್ ಮೆಟಾಲಿಕ್, ಬ್ಲಾಕ್, ಪರ್ಲ್ ಸೈರನ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಹೋಂಡಾ ಎಸ್‌ಪಿ 125 ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ರೂಪಾಂತರಗಳಿಗೆ ಅನುಗುಣವಾಗಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 116 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್, 11.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications