ಒಂದು ರೂಪಾಯಿ ಖರ್ಚಿಲ್ಲದೇ 170 ಕಿ.ಮೀ ಓಡಾಡಿ: ಇದು iVOOMi ಸ್ಟೈಲಿಷ್ ಸ್ಕೂಟರ್
ಸಿಂಗಲ್ ಚಾರ್ಜ್‌ನಲ್ಲಿ 170 ಕಿ.ಮೀ ರೇಂಜ್ ನೀಡುವ ಹೊಸ Jeet X ZE ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಇವಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇದು iVOOMi ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, 3 KWH ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಮೊಬೈಲ್ ಅಪ್ಲಿಕೇಶನ್ ಸಂಪರ್ಕದೊಂದಿಗೆ ಸಂಯೋಜಿಸಲ್ಪಟ್ಟ ಅತ್ಯಾಧುನಿಕ ಸ್ಮಾರ್ಟ್ ಸ್ಪೀಡೋಮೀಟರ್‌ನೊಂದಿಗೆ ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಸಂಪರ್ಕ, ಕಾಲ್ - ಮೆಸೇಜ್ ನೋಟಿಫಿಕೇಷನ್, ಟ್ರಿಪ್ ಡೇಟಾ, SOC ಅಲರ್ಟ್, ಬ್ಯಾಟರಿಯ ಚಾರ್ಜ್ ಸ್ಥಿತಿಯನ್ನು ಸ್ಟೇಟಸ್ ಬಾರ್‌ನಲ್ಲಿ ಪ್ರದರ್ಶಿಸುತ್ತದೆ.
ಈ ಸ್ಕೂಟರ್ ಬುಕಿಂಗ್‌ಗಳು ಆರಂಭವಾಗಿದ್ದು, ವಿತರಣೆಗಳು ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯದದಲ್ಲಿ ಪ್ರಾರಂಭವಾಗಲಿವೆ. ಸ್ಕೂಟರ್ ತನ್ನ ಸುಧಾರಿತ ವೈಶಿಷ್ಟ್ಯಗಳು, ಸ್ಪರ್ಧಾತ್ಮಕ ಬೆಲೆ ಮತ್ತು ಅಸಾಧಾರಣ ಶ್ರೇಣಿಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮ ಬೀರಲು ಸಿದ್ಧವಾಗಿದೆ. ಇದರ ಬೆಲೆಯು ರೂ. 99,999 ಇದ್ದು, iVOOMi ಡೀಲರ್‌ಶಿಪ್‌ನಲ್ಲಿ ಖರೀದಿಗೆ ಲಭ್ಯವಿದೆ.

ಆಸಕ್ತ ಗ್ರಾಹಕರು ತಮ್ಮ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಿ ವಿಚಾರಿಸಿ ಎಂದು ಕಂಪನಿ ಹೇಳಿದೆ. ಈ ಹೊಸ ಸ್ಕೂಟರ್ ಅನ್ನು ಅಂಡರ್‌ಬೋನ್ ಫ್ರೇಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, 42 mm ವ್ಯಾಸವನ್ನು ಹೊಂದಿರುವ ERW1 ಸ್ಟೀಲ್ ಟ್ಯೂಬ್‌ನಿಂದ ನಿರ್ಮಿಸಲಾಗಿದೆ. ಹಾಗಾಗಿ ಗುಣಮಟ್ಟದಲ್ಲಿ ಅತ್ಯತ್ತಮವಾಗಿರುವುದಾಗಿ ಕಂಪನಿ ತಿಳಿಸಿದೆ.
63 ಕಿ.ಮೀ ಗರಿಷ್ಠ ವೇಗದೊಂದಿಗೆ, ಈ ಹೊಸ ಸ್ಕೂಟರ್ ತ್ವರಿತ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಗೊಳಿಸುತ್ತದೆ. 75 mm ಟೆಲಿಸ್ಕೋಪಿಕ್ ಸಸ್ಪೆನ್ಷನ್ ಆರಾಮದಾಯಕ ಸವಾರಿಯ ಭರವಸೆ ನೀಡುತ್ತದೆ. iVOOMi ಬ್ಯಾಟರಿಯ ಮೇಲೆ 5-ವರ್ಷದ ವಾರಂಟಿಯನ್ನು ನೀಡುವ ಮೂಲಕ ಹೊಸ ರೂಪಾಂತರದ ಗುಣಮಟ್ಟಕ್ಕೆ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ವಿಭಿನ್ನ ರೈಡ್ ಮೋಡ್‌ಗಳು: JEET X ZE 3 KWH ರೂಪಾಂತರವು ಇಕೋ ಮೋಡ್, ರೈಡರ್ ಮೋಡ್, ಸ್ಪೀಡ್ ಮೋಡ್ ಎಂಬ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. 'ಇಕೋ ಮೋಡ್'ನಲ್ಲಿ 170 ಕಿಮೀ ರೇಂಜ್ ಸಿಗಲಿದ್ದು, ನಗರ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ.
'ರೈಡರ್ ಮೋಡ್'ನಲ್ಲಿ 140 ಕಿ.ಮೀ ರೇಂಜ್‌ನೊಂದಿಗೆ ದೈನಂದಿನ ಉತ್ತಮ ಪರ್ಫಾಮೆನ್ಸ್ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ. 'ಸ್ಪೀಡ್ ಮೋಡ್'ನಲ್ಲಿ 130 ಕಿ.ಮೀ ರೇಂಜ್ ನೀಡಲಿದ್ದು, ತ್ವರಿತ ಮತ್ತು ಡೈನಾಮಿಕ್ ರೈಡ್‌ಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ. ಈ ರೈಡ್ ಮೋಡ್‌ಗಳು ರೈಡರ್‌ಗಳಿಗೆ ವಿಭಿನ್ನ ಚಾಲನಾ ಅನುಭವ ನೀಡುತ್ತವೆ ಎಂದು ಕಂಪನಿ ತಿಳಿಸಿದೆ.
iVOOMi ನ CEO ಮತ್ತು ಸಹ-ಸಂಸ್ಥಾಪಕ ಅಶ್ವಿನ್ ಭಂಡಾರಿ ಮಾತನಾಡಿ, JEET X ZE ಯ 3 KWH ರೂಪಾಂತರವನ್ನು ಪರಿಚಯಿಸುವುದು ನಾವೀನ್ಯತೆ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸುವಲ್ಲಿ ನಮ್ಮ ಗಮನವನ್ನು ಪ್ರತಿಬಿಂಬಿಸುತ್ತದೆ. ಸುಧಾರಿತ ತಂತ್ರಜ್ಞಾನ, ಉತ್ತಮ ಪರ್ಫಾಮೆನ್ಸ್ ಮತ್ತು ಮೌಲ್ಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಮಾದರಿಯು ವಿಸ್ತೃತ ಶ್ರೇಣಿ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








